ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 14
Thursday, July 17, 2025
Edit
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 14
ಲೇಖನ : ಮಕ್ಕಳ ಹಸಿರು ಯಾತ್ರೆ
ಬರಹ : ವೀಣಾದೇವಿಶ್
ವಿಜ್ಞಾನ ಶಿಕ್ಷಕಿ
ಬೆಥನಿ (ಸಿ. ಬಿ. ಎಸ್. ಇ) ಹೈಸ್ಕೂಲ್
ಕಿನ್ನಿಕಂಬಳ , ಕೈಕಂಬ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಶಾಲೆ ಪ್ರಾರಂಭವಾಗಿ ತಿಂಗಳು ಒಂದು ಕಳೆಯಿತಷ್ಟೇ. ಪ್ರಾರಂಭೋತ್ಸವದಿಂದ ವನಮಹೋತ್ಸವದವರೆಗೆ ಹಲವು ಚಟುವಟಿಕೆಗಳು ಮುಗಿದೇ ಹೋಯಿತು. ಕಳೆದ ವಾರ ನಮ್ಮ ಶಾಲೆಯ ಒಂದನೇ ತರಗತಿಯ ಮಕ್ಕಳಿಂದ ಏರ್ಪಡಿಸಿದ ವನಮೋತ್ಸವವನ್ನು ನೋಡಿದಾಗ ಹೃದಯ ತುಂಬಿ ಬಂತು. ಇವರೆಲ್ಲ ಇನ್ನೂ ಪುಟ್ಟವರು. ಪ್ರಕೃತಿ ಮತ್ತು ಪ್ರಕೃತಿಯ ಪ್ರೀತಿಯನ್ನು ಹೇಗೆ ಹೊರ ಹಾಕಿದರು ಎಂಬುದನ್ನು ಕಂಡಾಗ ನಿಜಕ್ಕೂ ಆಶ್ಚರ್ಯವೂ, ಸಂತೋಷವೂ ಆಯಿತು.
ಪ್ರಕೃತಿಯೆಂದರೆ ಹಸಿರು. ಸಣ್ಣ, ಸಣ್ಣ ಪುಟಾಣಿಗಳು ಆ ಹಸಿರು ಶಾಲು ಕಟ್ಟಿಕೊಂಡು ಮಾಡಿದ ಸಣ್ಣ ಸಣ್ಣ ನೃತ್ಯ ಸಂಗೀತ ಇವೆಲ್ಲವೂ 'All these are nothing short of magical'.
ಇದೇ ಮಾರ್ಗದರ್ಶನ ಅವರ ಜೀವನ ಪೂರ್ತಿ ನಡೆದರೆ ಭವಿಷ್ಯದ ಹಸಿರು ಪ್ರಪಂಚಕ್ಕೆ ಯಾವುದೇ ಹಾನಿಯಾಗದಿರುವುದು ಖಚಿತ ಎಂದೆನಿಸಿತು. ಹಸಿರು ಪ್ರಪಂಚಕ್ಕೆ ತಾನು ಒಬ್ಬ ಸದಸ್ಯ, ನನ್ನಿಂದಲೂ ಏನಾದರೂ ಹೊಸತನವನ್ನು ತರಬಹುದು ಎಂಬ ಧೈರ್ಯದ ಬೇರು ಮಕ್ಕಳಲ್ಲಿ ಪಾತಾಳಕ್ಕೆ ಇಳಿಯುವಂತೆ ಮಾಡುವ ಅವಕಾಶ ಇಲ್ಲಿ ಲಭ್ಯವಾಯಿತು.
ತಾನು ಇಂದು ನೆಟ್ಟ ಸಣ್ಣ ಗಿಡ ಭವಿಷ್ಯದಲ್ಲಿ ಮರವಾಗಿ ಬೆಳೆದು ಹೂವು-ಹಣ್ಣು ಕೊಡಲಾರಂಬಿಸಿದಾಗ ನಾನು ಮೊದಲು ಕೊಡುವುದು ನನ್ನ ಶಿಕ್ಷಕಿಗೆ! ಎಂದು ತೊದಲು- ತೊದಲಾಗಿ ನುಡಿದ ಪುಟಾಣಿ ಮಕ್ಕಳ ಮಾತು ಅದ್ಭುತವಾಗಿತ್ತು. ಅದನ್ನು ಅರಗಿಸಿಕೊಳ್ಳಲಾಗದ ಖುಷಿ ಕಣ್ಣಂಚಲಿ ಆನಂದ ಭಾಷ್ಪ ಉದುರುವಂತೆ ಮಾಡಿತು. ಇದು ಒಬ್ಬ ಶಿಕ್ಷಕಿಗೆ ಮಾತ್ರ ದೊರೆಯುವ ಅತಿ ದೊಡ್ಡ ಗೌರವ ಎಂದರೆ ತಪ್ಪಾಗಲಾರದು.
ಶಿಕ್ಷಕರಾದ ನಾವು ಅದೆಷ್ಟೋ ರೀತಿಯಲ್ಲಿ ಮಕ್ಕಳನ್ನು ತಿದ್ದಿ ತೀಡಿ ಸಮಾಜಕ್ಕೆ ಒಬ್ಬ ಸಮರ್ಥ ಪ್ರಜೆಯನ್ನು ನೀಡಬಹುದು. ಮುಂದಿನ ಸಮಾಜದ ಬುನಾದಿ ನಮ್ಮ ಕೈಚಳಕದಿಂದಲೇ ಆಗಿರಬಹುದು. ಮಕ್ಕಳ ಕನಸಿನ ಬೀಜಕ್ಕೆ ನೀರು, ಪೋಷಕಾಂಶಗಳನ್ನು ಆಗಾಗ ಕೊಡಲು ನಮ್ಮಿಂದ ಮಾತ್ರ ಸಾಧ್ಯ.. ಇಂತಹ ಸುಂದರ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳೋಣ ಏನಂತೀರಾ?
ವಿಜ್ಞಾನ ಶಿಕ್ಷಕಿ
ಬೆಥನಿ (ಸಿ. ಬಿ. ಎಸ್. ಇ) ಹೈಸ್ಕೂಲ್
ಕಿನ್ನಿಕಂಬಳ , ಕೈಕಂಬ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಮೊ : +91 97402 24943
*******************************************