ಮಕ್ಕಳ ಕವನಗಳು : ಸಂಚಿಕೆ - 49 - ಕವನ ರಚನೆ : ಅಮೂಲ್ಯ ಕೆ ವಿ, 9ನೇ ತರಗತಿ
Thursday, June 26, 2025
Edit
ಮಕ್ಕಳ ಕವನಗಳು : ಸಂಚಿಕೆ - 49
ಕವನ ರಚನೆ : ಅಮೂಲ್ಯ ಕೆ ವಿ
9ನೇ ತರಗತಿ
ನಿರ್ಮಲಾ ಬಾಲಿಕಾ ಪ್ರೌಢ ಶಾಲೆ
ಸಾಗರ ತಾಲೂಕು, ಶಿವಮೊಗ್ಗಜಿಲ್ಲೆ
ನಮಗೆ ಉಸಿರಾಡಲು ಬೇಕು ಗಿಡಮರ
ಕೇಳಲು ಆನಂದ ಹಕ್ಕಿಗಳ ಕಲರವ
ಇಲ್ಲಿ ಇವೆ ಸುಂದರವಾದ ಜಲಚರ
ನನಗಿಷ್ಟ ಪರಿಸರ
ಚಿಲಿ ಪಿಲಿ ಗುಟ್ಟುವ ನಾದಸ್ವರ
ಸುತ್ತಮುತ್ತ ಗಿಡಮರಗಳ ಅಂದ
ನೋಡಲದು ಎರಡು ಕಣ್ಣು ಸಾಲದು
ಪರಿಸರದ ಚೆಂದ
......................................... ಅಮೂಲ್ಯ ಕೆ ವಿ
9ನೇ ತರಗತಿ
ನಿರ್ಮಲಾ ಬಾಲಿಕಾ ಪ್ರೌಢ ಶಾಲೆ
ಸಾಗರ ತಾಲೂಕು, ಶಿವಮೊಗ್ಗಜಿಲ್ಲೆ
******************************************
ಗುಡುಗುತ ಬಂದನು ನೋಡಮ್ಮ
ಮಳೆಯನ್ನು ಜೊತೆಗೆ ಕರೆತಂದ
ಢವ ಢವ ಶಬ್ದವ ಮಾಡಿದನು
ರಸ್ತೆಯ ತುಂಬಾ ನೀರು..
ಹರಿಯಿತು ರಾತ್ರಿ ಬೆಳಗು
......................................... ಅಮೂಲ್ಯ ಕೆ ವಿ
9ನೇ ತರಗತಿ
ನಿರ್ಮಲಾ ಬಾಲಿಕಾ ಪ್ರೌಢ ಶಾಲೆ
ಸಾಗರ ತಾಲೂಕು, ಶಿವಮೊಗ್ಗಜಿಲ್ಲೆ
******************************************
ಚಾಕೋಲೇಟ್ ಕೊಡುತಾಳೆ ಕೈತುಂಬ
ಪ್ರೀತಿ-ವಾತ್ಸಲ್ಯ ತೋರುವಳು
ನಸುನಗುತ್ತಾ ದಿನವನು ಕಳೆಯುವಳು
ತನಗಾಗು ಏನೂ ಬಯಸುವುದಿಲ್ಲ
ನನ್ನ ದುಃಖವನೂ ಸಹಿಸುವುದಿಲ್ಲ
ನನ್ನ ಗೆಲುವಲೇ ತನ್ನ ಖುಷಿಯನು ಕಾಣುವಳು
ಅವಳೇ ನನ್ನ ಪ್ರೀತಿಯ 'ಅಮ್ಮ '
......................................... ಅಮೂಲ್ಯ ಕೆ ವಿ
9ನೇ ತರಗತಿ
ನಿರ್ಮಲಾ ಬಾಲಿಕಾ ಪ್ರೌಢ ಶಾಲೆ
ಸಾಗರ ತಾಲೂಕು, ಶಿವಮೊಗ್ಗಜಿಲ್ಲೆ
******************************************
ತಪ್ಪು ಮಾಡಿದರೆ ತಿದ್ದುವರು
ಆಟ-ಪಾಠಗಳ ಕಲಿಸುವರು
ಮನದಲಿ ಉತ್ಸಾಹ ತುಂಬುವರು
ಕಥೆ-ಕವನವ ಹೇಳುವರು
ರೀತಿ-ನೀತಿಗಳನು ನಮಗೆ ಕಲಿಸುವರು
ಅವರು ತೋರಿದ ಮಾರ್ಗದಲಿ ನಡೆದರೆ
ನಮ್ಮ ಜೀವನ ಸುಂದರ
......................................... ಅಮೂಲ್ಯ ಕೆ ವಿ
9ನೇ ತರಗತಿ
ನಿರ್ಮಲಾ ಬಾಲಿಕಾ ಪ್ರೌಢ ಶಾಲೆ
ಸಾಗರ ತಾಲೂಕು, ಶಿವಮೊಗ್ಗಜಿಲ್ಲೆ
******************************************
ನನಗೆ ಇಷ್ಟ ದೀಪಗಳ ಹಬ್ಬ
ದೀಪವನು ಹಚ್ಚುವ
ನಗುವನು ತರುವ
ಸಂತಸದಿ ಒಂದುಗೂಡಿ ಆಚರಿಸುವ
ಪ್ರೀತಿ ಪ್ರೇಮವ ಬೆಳೆಸುವ
ಸಾಲು ದೀಪವ ಹಚ್ಚೋಣ
ಕತ್ತಲೆಯನು ದೂರಮಾಡೋಣ
9ನೇ ತರಗತಿ
ನಿರ್ಮಲಾ ಬಾಲಿಕಾ ಪ್ರೌಢ ಶಾಲೆ
ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
******************************************