ಮಕ್ಕಳ ಕವನಗಳು : ಸಂಚಿಕೆ - 47 : ಕವನ ರಚನೆ - ಮಣಿಕಂಠ ಎಸ್ ಎಂ ಕುಲಾಲ್, 9ನೇ ತರಗತಿ
Monday, June 23, 2025
Edit
ಮಕ್ಕಳ ಕವನಗಳು : ಸಂಚಿಕೆ - 47
ಕವನ ರಚನೆ : ಮಣಿಕಂಠ ಎಸ್ ಎಂ ಕುಲಾಲ್
9ನೇ ತರಗತಿ
ಹೋಲಿ ರೆಡೀಮೆರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
ಹನಿ ಹನಿ ಮಳೆಯಲಿ
ಮೈಯೆಲ್ಲಾ ಒದ್ದೆಯಾದಾಗ
ಖುಷಿಯೋ ಖುಷಿ
ಕಾಗದದ ದೋಣಿ
ತೊರೆಯಲಿ ತೇಲುವಾಗ
ಚಪ್ಪಾಳೆ ತಟ್ಟಿ ನಗುವಾಗ
ಹರುಷವು ಹರುಷ
ಸಣ್ಣಗೆ ಚಳಿಯಾದಾಗ
ಹಾಗೆ ಮನೆ ಕಡೆ ನಡೆದಾಗ
ಮನೆಯ ಒಳಗೆಲ್ಲಾ
ನೀರಿನಾ ಹನಿಯ ದಾರೆ
ಕೈಯಲ್ಲೊಂದು ಬೆತ್ತ ಹಿಡಿದು
ಕೋಪದಿಂದ ನಿಂತ ಅಮ್ಮಾ
ಕೂದಲೊಳಗಿನಾ ಹನಿಯ ನೀರ
ಅಮ್ಮನ ಮುಖಕ್ಕೆಲ್ಲ ಹಾರುವಂತೆ ಮಾಡಿ
ಕಚಕುಳಿ ಇಟ್ಟಾಗ
ಅಮ್ಮನ ಮುನಿಸು ಮಂಗ ಮಾಯ
....................... ಮಣಿಕಂಠ ಎಸ್ ಎಂ ಕುಲಾಲ್
9ನೇ ತರಗತಿ
ಹೋಲಿ ರೆಡೀಮೆರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
****************************************
ಪುಟ್ಟದೊಂದು ಹಕ್ಕಿಗೂಡು
ಗೂಡಿನಲ್ಲಿ ಪುಟ್ಟಮರಿಯ
ಚೀಂವ್ - ಚೀಂವ್ ಎನ್ನುವ ಆಲಾಪನೆ
ಕೇಳುವುದೊಂದೇ ಸೊಬಗು
ದಿನವೂ ಆಹಾರ ನೀಡುವ
ವೈಖರಿವಯೇ ಸೊಗಸು
ಖುಷಿಖುಷಿಯಾಗಿತ್ತು ಎನ್ನುವಾಗಲೇ
ಬಂತೊಂದು ಗಾಳಿ ಮಳೆ
ಗುಲಾಬಿ ಗಿಡ ಬಾಗಿ
ಗೂಡು ಹರಿದು ನೆಲಕ್ಕೆ ತಾಗಿ
ಹಕ್ಕಿಮರಿ ಒದ್ದೆ ಮುದ್ದೆಯಾಗಿ
ಸತ್ತೇ ಹೋದವೇನೋ ಎಂದು
ಗಡಿಬಿಡಿಯಲ್ಲಿ ಅಮ್ಮ ನೋಡಿದಾಗ
ಹಾರಲು ಬಾರದೆ
ಪಿಳಿ ಪಿಳಿ ಕಣ್ಣು ಬಿಡುತ್ತಾ ಒದ್ದಾಡುತಿತ್ತು
ಒಳಗಡೆ ತಂದು ಬೆಚ್ಚಗೆ ಮಾಡಿದಾಗ
ಸಣ್ಣಗೆ ರೆಕ್ಕೆ ಬಡಿದಿದ್ದವು
ಆದರೆ ಗೂಡು ಕಾಣದೆ ಅಮ್ಮ- ಹಕ್ಕಿ
ಇಡೀ ಗುಲಾಬಿ ಗಿಡ ಹುಡುಕಿ
ಆಕಾಶದೆಲ್ಲ ಹಾರಾಡಿ ಅಳುತಿತ್ತು
ಅಪ್ಪ ಹಕ್ಕಿನ ಕರೆಯುತಿತ್ತು
ಎರಡು ಹಕ್ಕಿಯ ರೋದನೆ
ನೋಡಲು ಆಗದೆ ಅಮ್ಮ
ಹಕ್ಕಿ ಮರಿಯಾ ರಟ್ಟಿನ ಬಾಕ್ಸಿನಲ್ಲಿ
ಗುಲಾಬಿ ಗಿಡದ ಬುಡದಲ್ಲಿ ಇಟ್ಟಾಗ
ಅದನ್ನು ನೋಡಿ
ಆ ಹಕ್ಕಿಯ ಆನಂದಕ್ಕೆ ಎಲ್ಲೆಯೇ ಇರಲಿಲ್ಲ
ಇಡೀ ಆಕಾಶದಲ್ಲಿ
ಗಿರಿಕಿ ಹೊಡೆದು ಸಂಭ್ರಮಿಸಿತು
ನಮ್ಮನೆ ಕಿಟಕಿಯಲ್ಲಿ ಕುಳಿತು
ರೆಕ್ಕೆ ಬಡಿದು
ಧನ್ಯವಾದ ಹೇಳಿದಂತೆ ಅನಿಸಿತು
ಅಪ್ಪ ಅಮ್ಮನ ಪ್ರೀತಿ ಎಂದರೆ
ಹೀಗೆ ಎಂಬುದು ಮೂಕ ಹಕ್ಕಿಯ
ಮೂಕ ಭಾಷೆಯಲ್ಲಿ ಹೇಳಿತು....
....................... ಮಣಿಕಂಠ ಎಸ್ ಎಂ ಕುಲಾಲ್
9ನೇ ತರಗತಿ
ಹೋಲಿ ರೆಡೀಮೆರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
****************************************
ಕಾಣಲು ಅದು ಬಿದಿರಿನಾ ಕೋಲು
ತತ್ವಗಳಾ ತಿಳಿಸಿದಾ ಕಾಣದ ಕೋಲು ಮಾಯಾಜಾಲದಂತಹ ಮೃದು ಕೋಲು
ಪಾಂಡವರ ಬೆನ್ನ ಹಿಂದೇ ನಿಂತು
ಬೆಂಬಿಡದೆ ಕಾದಂತಹ ಕೋಲು
ದ್ರೌಪದಿಯ ಸೀರೆ ಸೆಳೆಯುವಾಗ
ಶ್ರೀರಕ್ಷೆಯಾದ ಚಂದದ ಕೋಲು
ಧರ್ಮದ ನಡುವೆ ನಿಂತಂತಹ ಕೋಲು
ಅಧರ್ಮದ ಬೆನ್ನಟ್ಟಿದ ಕೋಲು
ಕುರುಕ್ಷೇತ್ರದ ರಂಗದಲ್ಲಿ
ಸಾರಥಿಯಾಗಿ ಮೆರೆದ ಕೋಲು
ಲೋಕಕ್ಕೆ ಭಗವದ್ಗೀತೆ ಸಾರಿದ ಕೋಲು
ನೀಲ ಮೇಘ ಶ್ಯಾಮ ನ ಆದರದ
ನಡುವೆ ನಾದಗೊಳಿಸಿದಾ ಅಂದದಾ
ಬಣ್ಣದ ಬಿದಿರಿನಾ ಕೊಳಲು
....................... ಮಣಿಕಂಠ ಎಸ್ ಎಂ ಕುಲಾಲ್
9ನೇ ತರಗತಿ
ಹೋಲಿ ರೆಡೀಮೆರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
****************************************
ಎಲ್ಲಿಂದ ಎಲ್ಲಿಗೆ ಪಯಣ
ತಿಳಿದವರು ಯಾರಿಲ್ಲ
ರಜೆಯ ಸಮಯ ಕಳೆಯಲು
ಕಾಶ್ಮೀರ ತಾಣ ನೋಡಲು
ಬಯಸಿ ಬಯಸಿ ಹೋದವರೆಲ್ಲ
ಮರಳಿ ಬಾರದ ಲೋಕಕ್ಕೆ
ನಡೆದರಲ್ಲಾ....
ಕ್ರಿಕೆಟಿನ ಜಯವನ್ನು
ಆನಂದಿಸಲು ಹೋದವರೆಲ್ಲ
ಜನರು ಕಾಲತುಳಿತಕ್ಕೆ ಬಲಿಯಾದರಲ್ಲ
ಏನು ತಪ್ಪೇ ಮಾಡದ
ವಿದ್ಯಾರ್ಥಿಗಳು ವಿಮಾನ ಪ್ರಯಾಣಿಕರು
ವಿಮಾನಪಘಾತಕ್ಕೆ
ತುತ್ತದಾವ್ಯಾವ ಧರ್ಮದ ನೀತಿ
ಇದು ಘೋರ ವಿಧಿ ಬರಹದ ರೀತಿ
ವಿಧಿ ಬರಹ ಅರಿತವರಿಲ್ಲ...!!
9ನೇ ತರಗತಿ
ಹೋಲಿ ರೆಡೀಮೆರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
****************************************