-->
ಅಪ್ಪಂದಿರ ದಿನದ ವಿಶೇಷ : ಸಂಚಿಕೆ -2 : ಬರಹ : ಸಾನ್ವಿ ಚೆಂಬರ್ಪು, 8ನೇ ತರಗತಿ

ಅಪ್ಪಂದಿರ ದಿನದ ವಿಶೇಷ : ಸಂಚಿಕೆ -2 : ಬರಹ : ಸಾನ್ವಿ ಚೆಂಬರ್ಪು, 8ನೇ ತರಗತಿ

ಅಪ್ಪಂದಿರ ದಿನದ ವಿಶೇಷ : ಸಂಚಿಕೆ -2
ಬರಹ : ಸಾನ್ವಿ ಚೆಂಬರ್ಪು
8ನೇ ತರಗತಿ
ಶ್ರೀ ಗುರುದೇವ ಆಂಗ್ಲ ಮಾಧ್ಯಮ 
ಶಾಲೆ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

ಎಲ್ಲಾ ದಿನಗಳು ವಿಶೇಷವೇ... ಹಾಗೇ ಜೂನ್ 15 - ವಿಶ್ವ ಅಪ್ಪಂದಿರ ದಿನವೆಂದು ಆಚರಿಸಲಾಗುತ್ತಿದೆ. ಆಸರೆ ಹಾಗೂ ಸ್ಪೂರ್ತಿಯಾಗುವ ತಂದೆಯನ್ನು ಸ್ಮರಿಸುವ ದಿನ. ಮಕ್ಕಳ - ಜಗಲಿಯಲ್ಲಿ ತನ್ನ ಅಪ್ಪನ ಕುರಿತ ಮಾತುಗಳು.... ಮಕ್ಕಳು ಹೇಳಿದ ಪ್ರೀತಿಯ ನುಡಿಗಳು ಇಲ್ಲಿವೆ....

                    
ನಮ್ಮೆಲ್ಲರ ಜೀವನದಲ್ಲಿ ಅಪ್ಪ ಮಹತ್ತರ ಪಾತ್ರ ವಹಿಸುತ್ತಾರೆ. ಅಪ್ಪ ಹಗಲಿಡೀ ದುಡಿದು ನಮ್ಮನ್ನೆಲ್ಲ ಸಾಕುತ್ತಾರೆ. ನನ್ನ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಪ್ಪನ ಪಾತ್ರ ಬಹು ಮುಖ್ಯವಾದುದು. 

ನನ್ನ ಅಪ್ಪ ಹೊರಗಿನಿಂದ ಎಷ್ಟೇ ಕಠೋರವಾಗಿದ್ದರೂ ಒಳಗಿನಿಂದ ಅಷ್ಟೇ ಮೃದು ಹೃದಯಿ. ನಾನು ತಪ್ಪು ಮಾಡಿದರೆ ಶಿಕ್ಷಿಸಿ, ನನ್ನ ಒಳ್ಳೆಯ ಕೆಲಸಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ. ನನಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನೂ ಅಪ್ಪ ಪೂರೈಸುತ್ತಾರೆ. ಎಷ್ಟೇ ಕೆಲಸದ ಒತ್ತಡವಿದ್ದರೂ ನಮಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಅಪ್ಪನ ನಗೆ ಚಟಾಕಿಗಳು ನನಗೆ ತುಂಬಾ ಇಷ್ಟ. ಅಪ್ಪನ ಪರೋಪಕಾರ ಹಾಗೂ ಸ್ನೇಹಪರ ಗುಣವು ನನಗೆ ತುಂಬಾ ಇಷ್ಟವಾಗಿದೆ. 

ಅಪ್ಪನ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ಅಪ್ಪ ನಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೋ, ಅದಕ್ಕಿಂತ ಹೆಚ್ಚು ಪ್ರೀತಿಯಿಂದ, ಚೆನ್ನಾಗಿ ಅಪ್ಪನ ಮುಪ್ಪಿನ ಕಾಲದಲ್ಲಿ ನೋಡಿಕೊಳ್ಳಬೇಕೆಂದು ನನ್ನ ಆಸೆ. ಅಪ್ಪ ನನ್ನ ಮಾರ್ಗದರ್ಶಕ, ಹಿತಚಿಂತಕ ಹಾಗೂ ಆತ್ಮೀಯ ಸ್ನೇಹಿತ. ಅಪ್ಪನ ಆದರ್ಶದ ಹಾದಿಯಲ್ಲಿ ನಡೆಯಬೇಕೆಂದು ನಾನು ಆಶಿಸುತ್ತೇನೆ. ಭವಿಷ್ಯದ ಪ್ರಜೆಗಳನ್ನು ನಿರ್ಮಿಸುವ ಶಿಕ್ಷಕ ವೃತ್ತಿ ನನ್ನ ಅಪ್ಪನದು ಎನ್ನುವುದು ನನಗೆ ಹೆಮ್ಮೆಯ ವಿಚಾರ.
........................................ ಸಾನ್ವಿ ಚೆಂಬರ್ಪು
8ನೇ ತರಗತಿ
ಶ್ರೀ ಗುರುದೇವ ಆಂಗ್ಲ ಮಾಧ್ಯಮ 
ಶಾಲೆ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************