ಪ್ರೀತಿಯ ಪುಸ್ತಕ : ಸಂಚಿಕೆ - 168
Saturday, June 21, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 168
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಚಿಕ್ಕವಳಿರುವಾಗ ಪತ್ತೇದಾರಿ ಕಥೆ ಕಾದಂಬರಿಗಳು ಅಂದರೆ ಸಾಕು, ಓದುವ ಮೊದಲೇ ಏನೋ ಒಂದು ತರಹ ಕುತೂಹಲ, ದಿಗಿಲು ಆಗುತ್ತಿತ್ತು. ಈ ಪತ್ತೇದಾರ ಪ್ರಣವ ಅಂದ ತಕ್ಷಣ ಬಾಲ್ಯ ನೆನಪಾಯಿತು. ಇದೊಂದು ನಿಜಕ್ಕೂ ಕುತೂಹಲಕಾರಿ ಪುಸ್ತಕ. ಪ್ರಣವ ಮಹಾ ತುಂಟ. ಅದೊಂದು ಸಾರಿ ಅಮ್ಮ ಮನೆಯಲ್ಲಿ ಸ್ಟೋರ್ ರೂಮೊಳಗೆ ಹೋದಾಗ ಹೊರಗಿನಿಂದ ಚಿಲಕ ಹಾಕಿ ಬಿಟ್ಟ. ಆಮೇಲೆ ಮರೆತು ಬಿಟ್ಟ. ಅಮ್ಮ ಅದು ಹೇಗೋ ನಟ್ಟು ಬೋಲ್ಟು ಬಿಡಿಸಿ ಹೊರಗೆ ಬಂದಳು. ಆದರೆ ಆಮೇಲಿನಿಂದ ಅವನ ಅಪ್ಪ ಕೋಣೆ ಒಳಗೆ ಹೋದಾಗ ಹೊರಗಿನಿಂದ ಚಿಲಕ ಹಾಕಲಾಗಿತ್ತು. ಅದೇ ರೀತಿ ಅಜ್ಜ, ಚಿಕ್ಕಪ್ಪನೂ ಒಂದೊಂದು ಸಾರಿ ಸಿಕ್ಕಿ ಹಾಕಿಕೊಂಡರು. ಬಾಗಿಲು ಹಾಕಿದ್ದು ಯಾರು ಅಂತ ತಿಳಿಯಲೇ ಇಲ್ಲ. ಕೊನೆಗೆ ಪ್ರಣವನೇ ಪತ್ತೇದಾರಿ ಕೆಲಸ ಮಾಡಿ ರಹಸ್ಯ ಕಂಡುಹಿಡಿದ. ರಹಸ್ಯ ತಿಳಿಯಲು ಪುಸ್ತಕ ಓದಿಬಿಡಿ.
ಲೇಖಕರು : ಅನುಪಮಾ ಕೆ ಬೆಣಚಿನಮರ್ಡಿ
ಚಿತ್ರಗಳು: ಶೈಲಜಾ ಎಸ್
ಪ್ರಕಾಶಕರು: ಅವ್ವಾ ಪುಸ್ತಕ
ಬೆಲೆ: ರೂ.175/-
4-5 ನೇ ತರಗತಿಯ ಮಕ್ಕಳು ಓದಿಕೊಳ್ಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅವ್ವಾ ಪುಸ್ತಕ, awwabooks@gmail.com; www.awwabooks.com ಫೋನ್ ಸಂಖ್ಯೆ: +91 9739266465; 9945550869
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************