ಜೂನ್ 21 - ವಿಶ್ವ ಸಂಗೀತ ದಿನಾಚರಣೆ : ಬರಹ : ದಿವ್ಯ ಜ್ಯೋತಿ ಶೆಟ್ಟಿ, 9ನೇ ತರಗತಿ
Saturday, June 21, 2025
Edit
ಮಕ್ಕಳ ಲೇಖನ : ಜೂನ್ 21 : ವಿಶ್ವ ಸಂಗೀತ ದಿನಾಚರಣೆ
ಬರಹ : ದಿವ್ಯ ಜ್ಯೋತಿ ಶೆಟ್ಟಿ
9ನೇ ತರಗತಿ
ಕ್ರೈಸ್ಟ್ ಶಾಲೆ , ಮಣಿಪಾಲ್
ಉಡುಪಿ ಜಿಲ್ಲೆ
ಸಂಗೀತಕ್ಕಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಜೂನ್ 21. ಪ್ರತಿ ವರ್ಷ ಈ ದಿನವನ್ನು ವಿಶ್ವ ಸಂಗೀತ ದಿನವೆಂದು ಆಚರಿಸಲಾಗುತ್ತದೆ.
ವಿಶ್ವ ಸಂಗೀತ ದಿನ 2025 ರ ಥೀಮ್ {"Healing Through Harmony"}.ಎಷ್ಟೇ ನೋವಿರಲಿ, ಇಷ್ಟವಾದ ಹಾಡು ಕೇಳಿದ ಕೂಡಲೇ ಮನಸ್ಸು ಹಗುರವಾಗುತ್ತದೆ. ಸಂಗೀತಕ್ಕಿರುವ ಶಕ್ತಿಯೇ ಅಂತಹದ್ದು. ಸಂಗೀತ ಎನ್ನುವುದು ಮನಸ್ಸಿನ ಕಾಯಿಲೆಗೆ ಉತ್ತಮ ಔಷಧಿ ಎಂದರೆ ತಪ್ಪಾಗಲಾರದು.
ಇಂದು ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಂಗೀತವನ್ನು ಕೇಳುತ್ತಾನೆ. ಸಂಗೀತಕ್ಕೆ ತನ್ನದೇ ಆದ ವಿಶೇಷತೆಯಿದೆ ಎಂದು ನಾನು ನಂಬುತ್ತೇನೆ. ಅದು ನಮಗೆ ಸಂತೋಷವನ್ನು ನೀಡುತ್ತದೆ. ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
ಕರ್ನಾಟಕದಲ್ಲಿ ಅನೇಕ ರೀತಿಯ ಸಂಗೀತ
ವಾದ್ಯಗಳಿವೆ :
ಪಿಟೀಲು, ಸಿತಾರ್, ತಬಲಾ, ಕೊಳಲು, ಹಾರ್ಮೋನಿಯಂ ಮತ್ತು ಇತ್ಯಾದಿ.
ಕೊನೆಯದಾಗಿ ನಾನು ಹೇಳುವುದೇನೆಂದರೆ, ಸಂಗೀತವು ಪ್ರತಿಯೊಬ್ಬರ ಜೀವನದಲ್ಲಿಯೂ ಶಾಶ್ವತವಾದ ಉತ್ತಮ ಸ್ನೇಹಿತನಾಗಿ ಪರಿಚಿತವಾಗಿದೆ.
9ನೇ ತರಗತಿ
ಕ್ರೈಸ್ಟ್ ಶಾಲೆ , ಮಣಿಪಾಲ್
ಉಡುಪಿ ಜಿಲ್ಲೆ
****************************************