-->
ವಿಶ್ವ ಯೋಗ ದಿನಾಚರಣೆ : ಬರಹ : ಜನನಿ.ಪಿ, 9ನೇ ತರಗತಿ

ವಿಶ್ವ ಯೋಗ ದಿನಾಚರಣೆ : ಬರಹ : ಜನನಿ.ಪಿ, 9ನೇ ತರಗತಿ

ಮಕ್ಕಳ ಲೇಖನ : ವಿಶ್ವ ಯೋಗ ದಿನಾಚರಣೆ
ಬರಹ : ಜನನಿ.ಪಿ
9ನೇ ತರಗತಿ 
ಶ್ರೀ ರಾಮಕುಂಜೇಶ್ವರ ಆಂಗ್ಲ 
ಮಾಧ್ಯಮ ಶಾಲೆ ರಾಮಕುಂಜ 
ಕೊಯಿಲ ಗ್ರಾಮ, ಕಡಬ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

       
ಪ್ರಥಮವಾಗಿ ಎಲ್ಲರಿಗೂ ಯೋಗ ದಿನಾಚರಣೆ ಶುಭಾಶಯಗಳು. ಇಂದು ಜೂನ್ 21. 11ನೇಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಯೋಗದ ಪಿತಾಮಹ - ಪತಂಜಲಿ ಮುನಿ. "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ" ಎನ್ನುವ ಪರಿಕಲ್ಪನೆಯಲ್ಲಿ ಈ ವರ್ಷದ ಯೋಗ ದಿನವನ್ನು ಆಚರಿಸಲಾಗುತ್ತಿದೆ.

ಯೋಗ ಎಂದರೆ ಎಲ್ಲರೂ ಒಂದಾಗುವುದು ಎಂಬ ಅರ್ಥವನ್ನು ನೀಡುತ್ತದೆ. ಮಾನವೀಯತೆಗಾಗಿ ಯೋಗ ಅತಿ ಅವಶ್ಯಕ. ಯೋಗ ಇಡೀ ಜಗತ್ತನ್ನು ಒಂದುಗೂಡಿಸುತ್ತದೆ. ಮಾನಸಿಕ ಮತ್ತು ದೈಹಿಕ ವೃದ್ಧಿಗೆ ಯೋಗ ಅತೀ ಮುಖ್ಯವಾಗಿದೆ. ಯೋಗಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. 'ಒಬ್ಬರಿಗಾಗಿ ಅಲ್ಲ, ಎಲ್ಲರಿಗಾಗಿ ಯೋಗ' ಎಂದು ಪ್ರಧಾನಿ ಮೋದಿ ಹೇಳಿದರು. 

ಯೋಗ ಎಂಬುವುದು ಒಂದೇ ದಿನಕ್ಕೆ ಸೀಮಿತವಾಗಬಾರದು. ಯೋಗವನ್ನು ಪ್ರತಿದಿನ ಮಾಡಿದರೆ ಮಾತ್ರ ದೇಹಕ್ಕೆ ಅತ್ಯುತ್ತಮ ಫಲ ಸಿಗುತ್ತದೆ. ಲಕ್ಷಾಂತರ ವಿದ್ಯಾರ್ಥಿ, ನಾಗರಿಕರ ಜೊತೆಗೆ ನಮ್ಮ ಪ್ರಧಾನಿಯವರು ಸಹ ಯೋಗವನ್ನು ಮಾಡುತ್ತಿದ್ದಾರೆ. ಯೋಗ ಇಡೀ ವಿಶ್ವವನ್ನೇ ಒಂದುಗೂಡಿಸುತ್ತದೆ. 

ಯೋಗವು ಶಿಸ್ತನ್ನು ಕಲಿಸುತ್ತದೆ. ಯೋಗದಿಂದ ಆಯಸ್ಸು ವೃದ್ಧಿಯಾಗುತ್ತದೆ. ಯೋಗದಿಂದ ದೇಹದ ವಿವಿಧ ಭಾಗಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ ಹಾಗೂ ದೇಹದ ಸುಲಲಿತ ಚಲನೆಗೆ ಪೂರಕವಾಗಿದೆ. ಯೋಗದಿಂದ ದೇಹದ ಸೌಂದರ್ಯ ಹೆಚ್ಚುತ್ತದೆ. 

ನಾನು ವಿಶೇಷವಾಗಿ ಆಪರೇಷನ್ ಸಿಂಧೂರದ ಸಮವಸ್ತ್ರವನ್ನು ಧರಿಸಿ ಯೋಗ ಮಾಡಲಾಯಿತು. ಯೋಗವನ್ನು ಮುಂದುವರಿಸೋಣ.. 
.............................................. ಜನನಿ.ಪಿ
9ನೇ ತರಗತಿ 
ಶ್ರೀ ರಾಮಕುಂಜೇಶ್ವರ ಆಂಗ್ಲ 
ಮಾಧ್ಯಮ ಶಾಲೆ ರಾಮಕುಂಜ 
ಕೊಯಿಲ ಗ್ರಾಮ, ಕಡಬ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article