-->
ಮಕ್ಕಳ ಕವನಗಳು : ಸಂಚಿಕೆ - 44 - ಕವನ ರಚನೆ : ದಿವ್ಯಶ್ರೀ, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 44 - ಕವನ ರಚನೆ : ದಿವ್ಯಶ್ರೀ, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 44
ಕವನ ರಚನೆ : ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

               
        
ಮಲೆಗಾಲದ ಸುರಿಮಳೆಯಲಿ 
ಆರಂಭದ ದಿನಗಳು 
ಹೊರಟಿರುವ ಸಂಭ್ರಮದ 
ಆ ದಿನಗಳು 
ಹೊಸದಾದ ಹೊತ್ತಗೆಯ 
ಹೊತ್ತಿಹೆನು ಬೆನ್ನಲಿ 
ಮಳೆಹನಿಯು ಪಟಪಟನೆ 
ಬೀಳುತಿದೆ ಛತ್ರಿಯಲಿ 

ಬಿರುಸಾಗಿ ನಡೆದಿರುವೆ 
ಸರಿಯುತಿದೆ ಸಮಯ 
ಘಂಟೆಯದೋ ಕೇಳಿಸಿತು 
ಪ್ರಾರ್ಥನೆಯ ಸಮಯ 
ಸಾಲಾಗಿ ನಿಂತಿರುವ ಮಕ್ಕಳ ಶಿಸ್ತು 
ನನ್ನಯ ಶಾಲೆಗೆ ದೇವರದಿರಲಿ ಅಸ್ತು 

ತರಗತಿಯ ಪಾಠಗಳೇ 
ಮುನ್ನಡೆಯ ಹಾದಿಯು 
ತುಂಟಾಟ ಚೇಷ್ಟೆಗಳೇ 
ಮಕ್ಕಳದು ಬುದ್ದಿಯು 
ಶಾಲಾ ಬಿಸಿಯೂಟ - ಕ್ಷೀರಭಾಗ್ಯ
ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ 

ಇಲ್ಲಿ ನನ್ನ ಗುರುಗಳೇ ನನಗೆ ಸ್ಪೂರ್ತಿ 
ಮುಂದೆ ತರುವೆನು ಅವರಿಗೊಂದು ಕೀರ್ತಿ 
ಸಾಧನೆಗೆ ಮುಡಿಪಿಡುವೆ ನನ್ನ ಉಸಿರು 
ಶಾಲೆಗೆ ನೀಡುವೆನು ಸಾಧನೆಯ ಹೆಸರು 

ಹತ್ತು ವರುಷಗಳ ಶಾಲಾ ಸಂಭ್ರಮದ ಸುದಿನ 
ಆ ನೆನಪುಗಳೇ ಜೀವನದಿ ಪ್ರತೀ ದಿನ 
ಮನಸ್ಸಿಗೆ ಸುಖ ದುಃಖಗಳ ತಲ್ಲಣ 
ಮರೆಯಲಾಗದು ಈ ಸುಂದರ ಜೀವನ 
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
                       


ಅಂಬರದಿ ಸೂರ್ಯನ ಹೊಂಗಿರಣ 
ಎಲ್ಲೆಲ್ಲೂ ಹಚ್ಚಹಸುರಿನ ತಳಿರು ತೋರಣ 
ಹಕ್ಕಿಗಳ ಚಿಲಿಪಿಲಿಂಪಿನ ಗಾಯನ 
ಭೂಮಿಗೆಲ್ಲಾ ಹೊಸವರುಷದ ಸುದಿನ 

ಹಿಂದೂ ಧರ್ಮಕೆ ವರ್ಷದ ಮೊದಲ ಮಾಸ 
ಬಾಳಿನಲ್ಲಿ ಯುಗದ ಆರಂಭದ ದಿವಸ ಸುಖದುಃಖದ ಸಂಕೇತ ಬೇವು ಬೆಲ್ಲದ ಮಿಶ್ರಣ 
ಸಮಪಾಲು ಸಮಬಾಳು ಜೀವನದ ಪಯಣ 

ಪ್ರಕೃತಿ ಮಾತೆಯು ಚಿಗುರೊಡೆದು ಹಚ್ಚಹಸಿರಾಗಿಹಳು 
ಹೊಸ ವರುಷಕೆ ಹರುಷವನು ತುಂಬಿಹಳು 
ಸುಮರಾಶಿಗಳು ಭೃಂಗದಿಂದ ಶೃಂಗರಿಸಿಹವು 
ಈ ಹರುಷ ತುಂಬಿರಲಿ ಪ್ರತಿದಿನವು 
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
                         


ಕನಸೊಂದಿರಬೇಕು ನಮ್ಮನ್ನು ಹುರಿದುಂಬಿಸುವಂತೆ 
ಎಷ್ಟೇ ಕಷ್ಟ ಬಂದರೂ ಎದುರಿಸುವಂತೆ 

ನಾವು ಸದಾ ಸಂತೋಷವಾಗಿರುವಂತೆ 
ನಮ್ಮತನವನ್ನು ಎತ್ತಿ ಹಿಡಿಯುವಂತೆ 

ಕನಸೆಂಬುದು ಮೂರಕ್ಷರದ ಪದವಾದರೂ 
ಛಲವಿರಬೇಕು ನನಸಾಗಿಸಲು ಹೇಗಾದರೂ 

ಕನಸೆಂಬುದು ಒಂದು ತರಹದ ಅದ್ಭುತ 
ನನಸಾಗಿಸಬೇಕೆಂಬುದು ಮನದಿಂಗಿತ 

ಬದುಕಿನ ಬಂಡಿಗೆ ಕನಸೇ ಆಧಾರವಾಗಿಹುದು 
ಕನಸಿನ ಪಯಣದಿ ಜೀವನವು ಸಾಗುವುದು 
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

                     

ಮುಂಜಾನೆಯ ಅಂಬರದಲಿನ ರವಿಯ ಬೆಳಕು 
ಮನೆಯಿಂದ ಹೊರ ಇಣುಕಿದರೆ 
ರಂಗಾದ ಹೊಳಪು 
ತುಸು ಹೊತ್ತು ಗಮನಿಸಿದಾಗ 
ಮನಸ್ಸಿಗದು ತಂಪು 
ಜಗತ್ತೆಲ್ಲಾ ವರ್ಣಮಯವಾಗಿ 
ಕಾಣುತಿದೆ ಸೊಂಪು 

ಜೀವನವೆಲ್ಲಾ ನೋವು-ನಲಿವಿನಂದದಿ 
ಹಣ ಆಸ್ತಿ ಪಾಸ್ತಿ ಮಾನವನ ನಿಯಮದಿ 
ಬೇಕು ಬೇಡಗಳೆಲ್ಲಾ ಭಗವಂತನ ನಿರ್ಣಯದಿ 
ನಾನೊಂದು ಭಗವಂತನಾಡಿಸುವ 
ಬೊಂಬೆಯ ಮಾದರಿ 

ಬಾಲ್ಯ ಹರೆಯ ಮುಪ್ಪಿನ ಜೀವನದಲಿ 
ನಾವೀನ್ಯವ ಕಾಣುವೆನು ಬಾಳೆಂಬ ಪಥದಲಿ 
ಬಾಳು ಸದಾ ಸುಖವೋ ದುಃಖವೋ ಇರಲಿ 
ನಾ ಸದಾ ಬಾಳುವೆನು ಹರುಷದಲಿ 

ಭಗವಂತನ ಸೂತ್ರದಲಿ ನಾ 
ಪಾತ್ರಧರಿಸಿದ ಬೊಂಬೆಯಾಗಿ 
ಎಲ್ಲವನು ಗಮನಿಸುತ್ತಾ ಆಡುತ್ತಾ ನಲಿಯುತ್ತಿರುವೆನು ಭಗವಂತನಾಶ್ರಯದಿ 
ಈ ಸಮಯದಿ ನನ್ನ ಹೆಜ್ಜೆ ಗುರುತು 
ಬೊಂಬೆಯಾಗಿ ಕನ್ನಡ ನಾಡಿನಲಿ...... 
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
                          



ಬೆಳದಿಂಗಳೊಂದು ಬಾನಲ್ಲಿ ಮೂಡಿ 
ಕಂಗೊಳಿಸುತಿದೆ ಚುಕ್ಕಿಗಳು ಕೂಡಿ 
ನೀಲಾಕಾಶದ ಶುಭ್ರತೆಯ ನೋಡಿ 
ತಲ್ಲಣದ ಮನಸ್ಸಿಗೆ ಮಾಡುವುದು ಮೋಡಿ 

ಮೋಡಗಳ ಅಂಚಿನಲಿ ಅವಿತಿಹನು ಚಂದಿರ 
ಸರಿಯಲು ಮೋಡವದು ಇಣುಕುವನು ಸುಂದರ 
ಪ್ರಜ್ವಲಿಪ ತಾರೆಗಳ ನರ್ತನವು ಸಿಂಚನ 
ಭೂರಮೆಯ ಸೌಂದರ್ಯ ಮನಸ್ಸಿಗದು ಪ್ರೇರಣ 

ಕಂಡಿಹುದು ದೀಪಗಳ ಸಾಲಿನ ಪಯಣ 
ದೂರದೆಡೆಗೆ ಸಾಗುವ ಬೆಳಕಿನ ವಿಮಾನ 
ತಂಗಾಳಿ ಬೀಸುತಿದೆ ಇಂಪಾದ ಗಾನ 
ನಿಶ್ಶಬ್ದ ಇರುಳೊಂದು ನೆಮ್ಮದಿಯ ತಾಣ 
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
                   
                             

ಧರಣಿಯ ಸೌಂದರ್ಯದಿ ಅರಳಿದ ಕುಸುಮ 
ಬೀರುತ ನಿಂದಿಹೆ ನಗುವಿನ ಘಮ 
ಯಾರಿಹರು ನಿನ್ನ ಸೌಂದರ್ಯದ ಸಮ 
ತೋಟದಿ ಅರಳಿರುವ ನೀನೆ ಸುಮ 

ಓ ಸುಮವೇ ನೀನೆಷ್ಟು ಸುಂದರ 
ನೀ ಬೀರುವ ನೋಟವೆಷ್ಟು ಸುಮಧುರ 
ನಿನ್ನೊಳಿರುವ ಮಕರಂದ 
ನೀ ನೀಡುವ ಸೌಗಂಧ 

ಭ್ರಮರವೊಂದು ಝೇಂಕರಿಸಿ 
ಮಕರಂದವ ಸ್ವೀಕರಿಸಿ 
ಆನಂದದದಿ ಶೃಂಗರಿಸಿದೆ 
ನಿನ್ನೊಲವಿನ ನೋಟ 

ದೇವರ ಗುಡಿ ಸೇರುವೆಯೋ 
ಯಾರ ಮುಡಿ ಏರುವೆಯೋ 
ಸ್ಮಶಾನದ ಹಾದಿ ಹಿಡಿದವರ 
ದಾರಿ ಶೃಂಗರಿಸುವೆಯೋ 

ಇದಾವುದು ತಿಳಿಯದೆ ಬೇಧವ ತೋರದೆ 
ಸರ್ವರಿಗೂ ಸ್ನೇಹ ಜೀವಿಯಾಗಿರುವೆ ನೀನು 
ಓ ಹೂವೇ ನೀನಿಲ್ಲದೆ ಹೇಗಿರಲಿ ನಾನು..!! 
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

                       

ಮನೆಯಿಡೀ ನಗುತಲಿ ಬೆಳಕನ್ನು ಚೆಲ್ಲುತ್ತಾ 
ಎಲ್ಲರ ಮನವನ್ನು ಪ್ರೇರೇಪಿಸುವ ಮಗಳು 
ದುಃಖವನ್ನೆಲ್ಲ ಮರೆಸಿ ಪ್ರೀತಿಯನ್ನು ತುಂಬುವ 
ಎಲ್ಲರ ಮನೆಯನ್ನು ಬೆಳಗುವ ಹೆಣ್ಣು 

ಜೀವಕ್ಕೆ ಜೀವಕೊಡುವ ಸೃಷ್ಟಿದಾತೆಯು ಹೆಣ್ಣು 
ಮನೆಯನ್ನು ಬೆಳಗುವ ಮಹಾಲಕ್ಷ್ಮಿಯು ಹೆಣ್ಣು 
ಹೆಣ್ಣೆಂದರೇ ಪ್ರೀತಿ ಹೆಣ್ಣೆಂದರೆ ಮಮತೆ 
ತಾಯ್ತನದ ಸೌಭಾಗ್ಯ ಪಡೆಯದಿರೆ ಕೊರತೆ 

ಎಲ್ಲರ ಒಳಿತನ್ನು ಬಯಸುವವಳು 
ತನ್ನೆಲ್ಲ ಕಷ್ಟಗಳ ಮರೆತವಳು 
ತನಗಾಗಿ ಏನನ್ನು ಬಯಸದವಳು 
ಹೆಣ್ಣಾಗಿ ಹುಟ್ಟಿದಕ್ಕೆ ಮರುಗುವಳು

ಮಗಳಾಗಿ ಸೋದರಿಯಾಗಿ ಗೆಳತಿಯಾಗಿ 
ಗಂಡನ ಮನೆಯ ಬೆಳಗುವ ಸೊಸೆಯಾಗಿ 
ಹೆಣ್ತನವ ನಿರೂಪಿಸುವ ತಾಯಿಯಾಗಿ 
ಮಕ್ಕಳ ಪಾಲಿಗೆ ದೇವತೆಯಾಗಿ 

ಮನೆಯನ್ನು ಬೆಳಗುವವಳೇ ಅವಳು ಹೆಣ್ಣು 
ಗೌರವಿಸಿ ಪೂಜಿಸಿದರವಳಾಗುವಳು 
ಸಂಸಾರದ ಕಣ್ಣು 
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

                        

ನನ್ನ ಪ್ರೀತಿಯ ಅಪ್ಪ 
ನೀನೆ ನನ್ನ ದೈರ್ಯ 
ಅಮ್ಮ ನನಗೆ ಜನ್ಮಕೊಟ್ಟಾಗ 
ಖುಷಿಪಟ್ಪ ಧೀರ 

ನಾ ಅಂಬೆಗಾಲಿಡುವಾಗ 
ನಿನ್ನಲ್ಲಿದ್ದ ಪ್ರೀತಿ ಅಪಾರ 
ಹೆಗಲ ಮೇಲೆ ಕುಳ್ಳಿರಿಸಿ 
ಪ್ರಪಂಚವ ತೋರಿದ ಶೂರ 
ಎಡವಿ ಬಿದ್ದಾಗ ಕೈ ಹಿಡಿದು ಮೇಲೆತ್ತುವವರು 
ನನ್ನ ಯಶಸ್ಸಿಗೆ ಬೆನ್ನು ತಟ್ಟಿದವರು 

ಚಿಕ್ಕ ಪುಟ್ಟ ಸಾಧನೆಗೆ ಪ್ರೋತ್ಸಾಹ ನಿಮ್ಮದು
ಅನುಸರಿಸಿ ನಡೆಯುವ ಆತ್ಮಬಲ ನನ್ನದು 
ನನಗಾಗಿ ನಿನ್ನೆಲ್ಲ ಕಷ್ಟಗಳ ಮರೆತಿರುವೆ 
ನಿನಗಾಗಿ ನಾನೆಂದು ಚಿರ ಋಣಿಯಾಗಿರುವೆ
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

                          

ಬಾಲ್ಯ ವೆಂದರೆ ಮರೆಯಲಾಗದ ನೆನಪುಗಳು 
ಎಂದೂ ಮರಳಿ ಬಾರದ ಕ್ಷಣಗಳು 

ತುಂಟಾಟ ಮಾಡಿದ ಘಟನೆಗಳು 
ಮತ್ತೆ ಮರುಕಳಿಸು ಸಿಹಿ ಕನಸುಗಳು 

ಬಾಲ್ಯದಲ್ಲಿ ತಂದೆ ತಾಯಿಯ ವಾತ್ಸಲ್ಯ 
ಜೊತೆಗೆ ತಮ್ಮ ತಂಗಿಯರ ಬಾಂಧವ್ಯ 

ಅಮ್ಮನ ಕೈ ತುತ್ತು ಅಪ್ಪನ ಸಿಹಿ ಮುತ್ತು 
ಜೀವನದಿ ಕೊನೆಯವರೆಗೂ 
ಮರೆಯಲಾಗದ ಸೊತ್ತು 
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************



ಜೀವಕ್ಕೆ ಜೀವ ಕೊಟ್ಟು 
ನೀಡಿಹರೊಂದು ಜೀವನ 
ನನ್ನ ಜನ್ಮದಾತರಿಗೊಂದು ನಮನ 

ಏಳು ಬೀಳುಗಳ ಜಂಜಾಟವನು ಅನುಭವಿಸಿ
ಹಿರಿಯರ ಅನುಭವದ ನುಡಿಗಳನ್ನು ಆಲಿಸಿ 
ತಂದೆ ತಾಯಿಯ ಮಾರ್ಗದರ್ಶನ ಪಾಲಿಸಿ 
ಜೀವನವ ಮುನ್ನಡೆಸಬೇಕು ಆಲೋಚಿಸಿ 

ಬದುಕೆಂಬ ಪಯಣದಲಿ ಬರದಂತೆ ಮುನಿಸು 
ನೀನೆಂದು ಎಲ್ಲರಿಗೂ ಒಲಿತನ್ನೆ ಬಯಸು 
ನಮ್ಮೆಲ್ಲರ ಜೀವನಕೆ ಬರದಂತೆ ಕೆಡುಕು 
ನಡೆಸಬೇಕು ಹಿರಿಯರಂತೆ ಆದರ್ಶದ ಬದುಕು              
................................................... ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article