-->
ಪ್ರೀತಿಯ ಪುಸ್ತಕ : ಸಂಚಿಕೆ - 161

ಪ್ರೀತಿಯ ಪುಸ್ತಕ : ಸಂಚಿಕೆ - 161

ಪ್ರೀತಿಯ ಪುಸ್ತಕ
ಸಂಚಿಕೆ - 161
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                    

       ಬಿಬಿರ್ – ಮಾಟಗಾತಿಗೊಂದು ಪುಟ್ಟ ಸಹಾಯ 
ಲೇಖಕರು : ಎಸ್ಥರ್ ದುಫ್ಲೋ, ಇವರು ಬರೆದಿರುವ ಈ ಪುಸ್ತಕಗಳು ಮಕ್ಕಳಿಗೆ ತಮ್ಮ ಸುತ್ತಲಿನ ಲೋಕವನ್ನು ಓದುವ, ಅರ್ಥಮಾಡಿಕೊಳ್ಳುವ ಹಾದಿಯಲ್ಲಿ ಇಟ್ಟ ಒಂದು ಹೆಜ್ಜೆ. ಈ ಕತೆಯು ಮೂಲಭೂತ ಹಕ್ಕುಗಳನ್ನು ಸಾರ್ವತ್ರಿಕವಾಗಿ ಪಡೆಯುವ ಕುರಿತಂತೆ ಇರುವ ಐದು ಪುಸ್ತಕಗಳ ಸರಣಿಯ ಭಾಗ. 

ಪ್ರೀತಿಯ ಮಕ್ಕಳೇ.... ಬಿಬಿರ್ ಮತ್ತು ಸ್ನೇಹಿತರು ಹಳ್ಳಿಯ ಹೊರವಲಯದಲ್ಲಿ ಇರುವ ಗುಡಿಸಲಿನ ಹತ್ತಿರ ಹೋಗುವುದೇ ಇಲ್ಲ. ಅಲ್ಲಿ ಒಬ್ಬ ಮಾಟಗಾತಿ ವಾಸ ಮಾಡುತ್ತಿರುತ್ತಾಳೆ. ನಿಗೂಢವಾಗಿ ಏನೇನೋ ಗೊಣಗುತ್ತಿರುತ್ತಾಳೆ. ಆದರೆ ಇದರ ನಡುವೆ ಅದೇನೋ ಸಂಗತಿ ನಡೆದು ಬಿಬಿರ ಗೆ ಆ ಮಾಟಗಾತಿ ಮುದುಕಿ ಜೊತೆಗೆ ಸ್ನೇಹ ಬೆಳೆಯುತ್ತದೆ. ಆ ಅಜ್ಜಿ ಅವನಿಗೆ ತನ್ನ ಕತೆಯನ್ನೂ ಹೇಳುತ್ತಾಳೆ. ಅವಳ ಹೆಸರು ಕೊನವು. ಏನೋ ತೊಂದರೆಗೊಳಗಾಗಿ ಅವಳು ಅಲ್ಲಿ ನೆಲೆಸಿರುತ್ತಾಳೆ. ಬಿಬಿರ್ ಗೆ ಅವಳ ಸ್ನೇಹ ಹೇಗೆ ಆಯಿತು, ಅವನು ಕೊನವುಗೆ ಹೇಗೆ ಸಹಾಯ ಮಾಡಿದ, ಎಲ್ಲವೂ ತುಂಬಾ ಆಸಕ್ತಿದಾಯಕವಾಗಿದೆ. ಆಕರ್ಷಕವಾದ ಚಿತ್ರಗಳೂ ಇವೆ. 

ಲೇಖಕರು : ಎಸ್ಥರ್ ದುಫ್ಲೋ
ಚಿತ್ರಗಳು: ಶಾಯಿನ್ ಒಲೀವ್ಹಿಯೆ  
ಅನುವಾದ: ಎಲ್. ಸಿ ನಾಗರಾಜ್ 
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.100/-

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in. 
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article