ಪ್ರೀತಿಯ ಪುಸ್ತಕ : ಸಂಚಿಕೆ - 163
Friday, May 16, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 163
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಲೇಖಕರು : ಎಸ್ಥರ್ ದುಫ್ಲೋ, ಇವರು ಬರೆದಿರುವ ಈ ಪುಸ್ತಕಗಳು ಮಕ್ಕಳಿಗೆ ತಮ್ಮ ಸುತ್ತಲಿನ ಲೋಕವನ್ನು ಓದುವ, ಅರ್ಥಮಾಡಿಕೊಳ್ಳುವ ಹಾದಿಯಲ್ಲಿ ಇಟ್ಟ ಒಂದು ಹೆಜ್ಜೆ. ಈ ಕತೆಯು ಮೂಲಭೂತ ಹಕ್ಕುಗಳನ್ನು ಸಾರ್ವತ್ರಿಕವಾಗಿ ಪಡೆಯುವ ಕುರಿತಂತೆ ಇರುವ ಐದು ಪುಸ್ತಕಗಳ ಸರಣಿಯ ಭಾಗ.
ಪ್ರೀತಿಯ ಮಕ್ಕಳೇ... ಅಫಿಯಾಗೆ ಆರೋಗ್ಯ ಚೆನ್ನಾಗಿಲ್ಲ. ಮೈನಡುಕ. ರಾತ್ರಿ ನಿದ್ದೆ ಮಾಡಿಲ್ಲ. ಹಲ್ಲು ಕಟಕಟ ಅಂತ ಶಬ್ದಮಾಡ್ತಿವೆ. ಅವಳ ಅಪ್ಪ ಅವಳನ್ನು ಹಳ್ಳಿ ವೈದ್ಯ ದಾದಾಸ್ ಹತ್ತಿರ ಕರೆದುಕೊಂಡು ಹೋಗುತ್ತಾರೆ, ಮಂತ್ರವಾದಿ ಬಕಾಲಾ ಹತ್ತಿರ ಕರೆದುಕೊಂಡು ಹೋಗುತ್ತಾರೆ. ವಾಸಿಯಾಗುವುದಿಲ್ಲ. ಅಪ್ಪನಿಗೆ ಆತಂಕವಾಗುತ್ತದೆ. ಕೊನೆಗೆ ಊರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವರಿಗೆ ಮಲೇರಿಯಾ ಬಗ್ಗೆ ಗೊತ್ತಾಗುತ್ತದೆ. ಅಫೀಯಾ ತಂದೆಗೆ ಬೇರೆ ಬೇರೆ ಕಡೆ ಏನೇನು ಅನುಭವಗಳಾದವು, ಕೊನೆಗೆ ಮಲೇರಿಯಾಗೆ ಹೇಗೆ ಔಷಧಿ ಪಡೆದುಕೊಂಡರು, ಮಲೇರಿಯಾ ತಡೆಗಟ್ಟುವ ಯಾವ ಅಂಶಗಳನ್ನು ತಿಳಿದುಕೊಂಡರು ಎಲ್ಲವನ್ನೂ ಸರಳವಾಗಿ ಈ ಕಥನದಲ್ಲಿ ಚಿತ್ರಿಸಿದ್ದಾರೆ.
ಚಿತ್ರಗಳು : ಶಾಯಿನ್ ಒಲೀವ್ಹಿಯೆ
ಅನುವಾದ : ಎಚ್.ಎಸ್. ರಾಘವೇಂದ್ರ ರಾವ್
ಪ್ರಕಾಶಕರು : ಪ್ರಥಮ್ ಬುಕ್ಸ್
ಬೆಲೆ : ರೂ.100/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************