ಮಕ್ಕಳ ಕವನಗಳು : ಸಂಚಿಕೆ - 45 : ಜಗಲಿಯ ಮಕ್ಕಳ ಸ್ವರಚಿತ ಕವನಗಳು
Saturday, May 17, 2025
Edit
ಮಕ್ಕಳ ಕವನಗಳು : ಸಂಚಿಕೆ - 45
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ರಿಧಾ ಡೋರಳ್ಳಿ, 6ನೇ ತರಗತಿ
◾ ಗುಣಶ್ರೀ, 10ನೇ ತರಗತಿ
◾ ಭಾಗ್ಯಲಕ್ಷ್ಮೀ ಆಚಾರ್ಯ, 10ನೇ ತರಗತಿ
ಒಳ್ಳೆಯ ಗುಣಗಳ ಹೊಂದೇವು
ಪಾಕ್ ನಂತ ಉಗ್ರರಲ್ಲ ನಾವು
ಮನುಷತ್ವವವ ಕಲಿತೆವು
ಹಿಂದೂ ಮುಸ್ಲಿಂ ಎನ್ನದೆ
ನಮ್ಮ ಬದುಕು ನಡಿಸೇವು
೨೬ ಜನರ ಕೊಂದವರನು
ಒಳಗೆ ನುಗ್ಗಿ ಹೊಡಿಯುವೆವು
ಮಹಿಳೆಯರ ಸಿಂಧೂರವ ಅಳಿಸಿದವರಿಗೆ
ತಕ್ಕ ಶಾಸ್ತಿಯ ಮಾಡುವೆವು
ಬಿರುಗಾಳಿಯೇ ಬರಲಿ, ಏನೇ ಆಗಲಿ
ನಮ್ಮ ಶಪಥದ ಕೈಯ ಎಂದು ಬಿಡೆವು...
ಈಗಾಗಲೇ ನಮ್ಮ ದೇಶದ ಸೈನ್ಯ
ಅವರ ಛಳಿಯ ಬಿಡಿಸಿದೆ
ಆದರೂ ಅವರಿಗೆ ನಾಚಿಕೆ ಇಲ್ಲ
ಮತ್ತೊಮ್ಮೆ ಪಾಕ್ ತನ್ನ ಬಾಲ ಬಿಚ್ಚಿದೆ...
ನಾವು ಅವರಂತೆ ಹೇಡಿಗಳಲ್ಲ
ವೀರ ತ್ಯಾಗ ಮಾಡುವೆವು
ಆ... ಪಾಕ್ ಉಗ್ರರನ್ನು
ರಣಬೇಟೆ ಆಡಿ ಹುಡುಕಿ ಹಿಡಿದು ಹೊಡಿಯುವೆವು..
6ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಸ್ಕೂಲ್
ಹುಬ್ಬಳ್ಳಿ , ಧಾರವಾಡ ಜಿಲ್ಲೆ
******************************************
ಮನೆಯೊಳಗೆ ಪ್ರವೇಶಿಸುತ್ತಾ
ನಾ ತಡವಾಗಿ ನನ್ನ ಕನಸಿನ
ಲೋಕದಿಂದ ಹೊರಬರುತ್ತಾ
ನನ್ನ ಕವನ ಏನಾಯಿತೆಂದು
ಉತ್ಸುಕದಿಂದ ವೀಕ್ಷಿಸುತ್ತಾ
ನಂತರ ಗೆಳತಿಯರ ಜೊತೆ
ಸ್ವಲ್ಪ ಹೊತ್ತು ಮಾತನಾಡುತ್ತಾ
ನಾನಿನ್ನು ಶಾಲೆಗೆ ಹೊರಡಲು ಸಿದ್ಧವಾಗುತ್ತಾ
ಅಪ್ಪ ಮಾಡಿಕೊಟ್ಟ ತಿಂಡಿಯ ತಿನ್ನುತ್ತಾ
ಅಯ್ಯೋ! ತಡವಾಯಿತೆಂದು
ಬೇಗನೆ ಹೊರಡುತ್ತಾ
ಒಬ್ಬಳೇ ದಾರಿಯಲ್ಲಿ ಮುಂದೆ ಸಾಗುತ್ತಾ
ಪರಿಚಿತ ಮಹಿಳೆಯೋರ್ವರು
ದಾರಿಮಧ್ಯೆ ಸಿಕ್ಕುತ್ತಾ
ಅವರು ನನ್ನ ಬಳಿ ತುಸು ವಿಚಾರಿಸುತ್ತಾ
ಮತ್ತೆ ನನ್ನ ಪಯಣವನ್ನು
ಶಾಲೆಯತ್ತ ಮುಂದುವರಿಸುತ್ತಾ
ತುಂಬಾ ವೇಗವಾಗಿ ನಡೆಯುತ್ತಾ
ಕೊನೆಗೂ ಶಾಲೆಯನ್ನು ತಲುಪುತ್ತಾ
ನನ್ನ ಸಹಪಾಠಿಗಳೆಲ್ಲಿ ಎಂದು ಹುಡುಕಾಡುತ್ತಾ
ಮೂರು ಮಂದಿ ಗೆಳತಿಯರನ್ನು ನೋಡುತ್ತಾ
ಯಾರು ಬಂದಿಲ್ಲವೇ ಎಂದು ಕೇಳುತ್ತಾ
ತರಗತಿ ಶಿಕ್ಷಕಿಯನ್ನು ಬಾಗಿಲ ಬಳಿ ಕಾಣುತ್ತಾ
ಅವರಿಗೆ ನಲ್ಮೆಯಿಂದ ನಾ ವಂದಿಸುತ್ತಾ
ನಮ್ಮ ಪಠ್ಯಪುಸ್ತಕಗಳನ್ನು ನೀಡುತ್ತಾ
ನಾವಿನ್ನು ಹೊರಡುತ್ತೇವೆ
ಎಂದು ಹೇಳಿ ಮರಳುತ್ತಾ
ಕಿರಿಯ ಸಹಪಾಠಿಗಳೊಂದಿಗೆ
ಮಾತನಾಡಿ ನಗುತ್ತಾ
ಸ್ವಲ್ಪವೇ ಮುಂದೆ ಇದ್ದ
ವಿಜ್ಞಾನ ಶಿಕ್ಷಕರಿಗೆ ನಮಿಸುತ್ತಾ
ಹಾದಿಯಲ್ಲಿ ಇನ್ನೋರ್ವ ಗೆಳತಿಯು
ದೂರದಿಂದ ಬರುತ್ತಾ
ಅವಳ ಗುರುತೇ ನನಗೆ ಸಿಗದೇ ಹೋಗುತ್ತಾ
ಓರ್ವ ಅಕ್ಕನನ್ನು ಭೇಟಿಯಾಗುತ್ತಾ
ಮನೆಯ ಕಡೆ ನಾ ಮುಖಮಾಡುತ್ತಾ
ದಣಿವಿನಿಂದ ಮನೆಯೊಳಗೆ ಹೆಜ್ಜೆಯನ್ನಿಡುತ್ತಾ
ಮತ್ತೊಂದು ಕಥಾ ಕವನವನ್ನು
ನಾ ಬರೆಯುತ್ತಾ....
................................................... ಗುಣಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕರಾಯ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಇರುಳಿನ ಆಗಸವ ನೋಡಲು
ಚಂದ್ರನಿಲ್ಲದ ಆಗಸವ ಕಾಣಲು
ಅದೆಲ್ಲಿ ನಾ ನಕ್ಷತ್ರಗಳನ್ನು ನೋಡಲು
ಆಗಸವನ್ನು ಕಪ್ಪು ಮೋಡಗಳು ಆವರಿಸಲು
ಮನಕ್ಕೆ ಖಾಲಿ ಖಾಲಿ ಎನಿಸಲು
ವಿಮಾನದ ಶಬ್ದವು ಕಿವಿಗೆ ಕೇಳುತಿರಲು
ನಾನದನ್ನು ನೋಡಲು ಹೊರಬರುತಿರಲು
ನಕ್ಷತ್ರಗಳ ಹುಚ್ಚು ನನ್ನ ಕಾಡಲು
ಒಂದಾದರೂ ನೋಡಬಹುದೇ ಎಂದು
ನಾ ಹುಡುಕಲು
ಸೊಳ್ಳೆಗಳ ಕಾಟ ಆರಂಭವಾಗಲು
ನಾ ಆಚೆ ಈಚೆ ನಡೆದಾಡಲು
ಬಾಹ್ಯಾಕಾಶದ ಕುರಿತು
ಹಲವು ಪ್ರಶ್ನೆಗಳು ಮೂಡಲು
ನಾನಲ್ಲಿ ಗೆ ನನ್ನ ಕನಸಲ್ಲಿ ಹೋಗಲು
ತುಂಬಾ ಚಳಿಯು ಶುರುವಾಗಲು
ಬೆಚ್ಚನೆಯ ಸ್ಥಳವ ನಾ ಹುಡುಕಲು
ಕಪ್ಪು ಮೋಡ ದೂರ ಸರಿಯಲು
ಚಂದಿರನು ಮಂದ ಬೆಳಕಿನಲ್ಲಿ ಕಂಗೊಳಿಸಲು
ಕೊನೆಗೂ ಚಂದ್ರನನ್ನು ಕಣ್ಣು ತುಂಬಿಸಲು
ಮನದಲಿ ಸಂತಸವ ಪಡೆಯಲು
ನನಗೆ ಜೋರಾಗಿ ಹಸಿವಾಗಲು
ಊಟವ ಮಾಡಲು ನಾ ಹೊರಡಲು
ನಿದ್ದೆಯು ಬರುತಿರಲು
ನಾ ಮಲಗಲು ತಯಾರಿಸುತಿರಲು
................................................... ಗುಣಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕರಾಯ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಹಾರುತಿವೆ ಬಾವಲಿ ಗಳು ವೇಗದಲಿ
ಕತ್ತಲೆಯಾಗುತಿರುವ ಆಗಸದಲಿ
ಕೆಂಪು ಮೋಡಗಳು ಚಲಿಸುತಿವೆ ಸಂತಸದಲಿ
ಸ್ವಲ್ಪ ಸಮಯ ಕಳೆಯುತಲಿ
ಕಪ್ಪು ಮೋಡಗಳು ಚಂದಿರನನ್ನು ಮರೆಮಾಚುತಲಿ
ನಕ್ಷತ್ರಗಳು ಕಾಣದ ಆಗಸದಲಿ
ಒಂದು ರೀತಿಯ ಭಾವ ಮನಸಲ್ಲಿ ಮೂಡುತಲಿ
ತಂಪಾದ ಗಾಳಿ ಬೀಸುತಲಿ
ಮೋಡಗಳು ಚಂದಿರನಿಂದ ದೂರ ಸರಿಯುತಲಿ
ಮುಂದೆ ಏನೆಂದು ಗೆಳತಿ ಕೇಳುತಲಿ
ಏನೆಂದು ಹೇಳುವುದೆಂದು ನಾ ಹೇಳುತಲಿ
ಆಕಸ್ಮಿಕವಾಗಿ ಕವನ ಬರೆಯಲು
ನಾ ಕುಳಿಯುತಲಿ
ಹೇಗೆಂದು ಮುಗಿಸಲಿ ಎಂದು ಯೋಚಿಸುತಲಿ
ಮತ್ತೆ ಚಂದಿರ ಕಣ್ಣ ಮುಚ್ಚಾಲೆ ಆಡುತಲಿ
ಮಳೆ ಬರಬಹುದೆ ಎಂದು ನಾ ಚಿಂತಿಸುತಲಿ
ಭಜನೆಯ ಹಾಡು ಕೇಳಿಸುತಿಹುದು ಮಂದಿರದಲಿ
ನಾ ಹೊರಗೆ ಕುಳಿತು ಆಲಿಸುತಲಿ
ತುಸು ನಂತರ ನಾಯಿಯೊಂದು ಬೊಗಳುತಲಿ
ನಾ ಕೂರಲು ಮನೆಯೊಳಗೆ ಸೇರುತಲಿ
ಕತ್ತಲೆಯ ಪ್ರಶಾಂತ ವಾತಾವರಣದಲಿ
ಪ್ರಕೃತಿ ಎಷ್ಟು ವಿಸ್ಮಯವೆಂದು ಅರಿಯುತಲಿ
ಕವನಕ್ಕೊಂದು ವಿರಾಮ ಇಡುತಲಿ
ನಾ ಹೋಗಿ ಬೇಗನೆ ಮಲಗುತಲಿ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕರಾಯ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಸಮುದ್ರವೇ ಉಕ್ಕಿ ಹರಿದರೂ
ನೀ ಮುನ್ನುಗ್ಗಿ ದೇಶವ ಕಾಯುವೆ
ಆ ಭಾರತ ಮಾತೆಗೆ ನಮಿಸುವೆ
ಈ ದೇಶ ಕಾಯುವ ಸೈನಿಕ
ದೇಶಕ್ಕೆ ನೀಡಿರುವ ಕೊಡುಗೆ ಅನೇಕ
ದೇಶ ಮುನ್ನಡೆಯ ಪ್ರತೀಕ
ಇವರೇ ದೇಶದ ಪ್ರಾಮಾಣಿಕ
ಸಂಬಂಧಿಕರ ಬಿಟ್ಟಿರುವೆ
ಬಯಕೆಗಳ ಕಟ್ಟಿರುವೆ
ನೆನಪುಗಳ ಅರಿತಿರುವೆ
ಈ ದೇಶಕೆ ಮಾದರಿಯಾಗಿರುವೆ
ಗಡಿಯಲ್ಲಿ ಹೋರಾಟ
ಎಲ್ಲೆಲ್ಲೂ ಸೆಳೆದಾಟ
ಉರಿಬಿಸಿಲಿನ ಒಡನಾಟ
ಈ ದೇಶಕೆ ನೀನೆ ಸಾಮ್ರಾಟ
ಬಂದೂಕು ಆಧಾರ
ನೋವಿನಲೂ ಪರಿಹಾರ
ಕಾಯಕವೇ ನಿರಂತರ
ಇದೆಲ್ಲಾ ನಿನಗೆ ಜೈಕಾರ
ಜನಗಣಮನ ಎದೆಯಲಿದೆ
ಕ್ಷಣ ಪ್ರತಿ ಕ್ಷಣ ಮನದಲಿದೆ
ಕಣ ಕಣದಲ್ಲೂ ದೇಶಪ್ರೇಮ ತುಂಬಿರುವೆ
ನಿನ್ನ ಸೇವೆಗೆ ನಾ ಋಣಿಯಾಗಿರುವೆ
............................... ಭಾಗ್ಯಲಕ್ಷ್ಮೀ ಆಚಾರ್ಯ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
ಪ್ರೀತಿಯಿಂದ ಅರಳುತ್ತದೆ ನಮ್ಮೆಲ್ಲರ ಮನ
ಭಾದ್ರಪದ ಮಾಸದ ಶುಕ್ಲ ಪಕ್ಷದ
ಚತುರ್ಥಿಯಂದು ಆಚರಿಸುವ ಹಬ್ಬ
ಇದನ್ನು ದೇಶಾದ್ಯಂತ ನೋಡುವುದೇ
ನಮ್ಮೆಲ್ಲರ ಕಣ್ಣಿಗೆ ಲಾಭ
ಗಣೇಶನಿಗೆ ಮೋದಕ, ಕಡುಬುಗಳೇ ನೈವೇದ್ಯ
ನಮ್ಮ ಬಾಳಿಗೆ ಸದಾ ಕರುಣಿಸು ವಿದ್ಯ
ಮೊದಲ ದಿನ ತಾಯಿ ಸ್ವರ್ಣ ಗೌರಿಯ ಹಬ್ಬ
ಮಾರನೇ ದಿನವೇ ವಿನಾಯಕ ದೇವರ ಹಬ್ಬ
ಈ ದಿನವೇ ಭಾದ್ರಪದ ಚೌತಿ ಎನ್ನಲಾಗಿತ್ತು.
ಮನೆಗಳಲ್ಲಿ ಮಾತ್ರ ಆಚರಿಸುವ ಹಬ್ಬ ಇದಾಗಿತ್ತು.
ಬಾಲಗಂಗಾಧರ ತಿಲಕ್ ರ
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ
ಜನರನ್ನು ಒಗ್ಗೂಡಿಸುವ ಉದ್ದೇಶವಾಗಿತ್ತು.
ಆದರೆ, ಪ್ಲಾಸ್ಟಿಕ್ ತ್ಯಜಿಸಿ
ಮಣ್ಣಿನ ಗಣೇಶನನ್ನು ಬಳಸಿ,
ಪರಿಸರ ಉಳಿಸಿ ಎಂಬ ಕರೆ ಬೇಕಾಗಿತ್ತು..
............................... ಭಾಗ್ಯಲಕ್ಷ್ಮೀ ಆಚಾರ್ಯ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
ನಿನಗಾಗಿ ಅವನಿಯಂತೆ ಕಾಯುತಿರುವೆ
ನನ್ನ ಎಲ್ಲಾ ಸುಖ-ದುಃಖಗಳಲ್ಲೂ
ನನ್ನನ್ನೇ ನೀ ಬಯಸುತಿರುವೆ
ನಿನ್ನ ಪ್ರಾಮಾಣಿಕತೆಯೇ
ಅಭಿಮಾನದ ನಿಯತ್ತು
ನಿನ್ನ ಒಲವಿನ ಆಗಮನಕ್ಕಾಗಿ
ಕಾಯುತಿರುವೆ ಇವತ್ತು
ಮುಗ್ಧ ಮನಸ್ಸಿನ ಪ್ರತಿರೂಪವೇ ನಿನ್ನೀ ನಗು
ಎಂದಿಗೂ ಬದುಕಿನಲ್ಲಿ ನಕ್ಷತ್ರದಂತೆ ಮಿನುಗು
ಹೇಳಿದಂತೆಲ್ಲಾ ಸುಲಭವಿಲ್ಲ ಈ ಜೀವನ
ನೋವು ನಲಿವಿನಲ್ಲೂ ಬದಕುತಿಹರು ಪ್ರತಿ ಕ್ಷಣ
ನಿನ್ನ ಆತ್ಮವಿಶ್ವಾಸವೇ
ನನ್ನ ಪಾಲಿಗೆ ಯಶಸ್ಸು ಇದ್ದ ಹಾಗೆ
ಪ್ರತಿ ಕ್ಷಣ ಕ್ಷಣದಲ್ಲೂ ಹಂಬಲಿಸುತಿರುವೆ
ನಿನ್ನ ಈ ಭೇಟಿಗೆ
ನನ್ನ ಜೊತೆ ಸದಾ ನೀ ಸಹಪಾಠಿಯಾಗಿರಲು
ಮನಸ್ಸಿಗೆ ಮುದ ನೀಡುವುದು
ಒಳ್ಳೆತನವೆಂಬ ತಂಪಾದ ನೆರಳು
ಗೆಳತೀ... ಗೆಳತೀ ....
ನೀನೇ ದೇವರು ನೀಡಿದ ಧೃತಿ
ಬಾಳು ನೀನು ಯಾವಾಗಲೂ
ಮಹಾರಾಣಿಯ ರೀತಿ..
............................... ಭಾಗ್ಯಲಕ್ಷ್ಮೀ ಆಚಾರ್ಯ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
ಅಮ್ಮನಷ್ಟೇ ಪ್ರೀತಿ ಮನದಲ್ಲಿ
ತೋರುವ ಆಧ್ಯಾತ್ಮವು
ದಿನದ ಪ್ರತಿಕ್ಷಣವೂ
ಕುಟುಂಬವನ್ನು ರಕ್ಷಿಸುವ ಅಪ್ಪ
ಮುಗ್ಧ ಮನಸ್ಸಿನ ಮಕ್ಕಳಿಗಂತೂ
ತಂದೆಯದೇ ಜಪ
ಮಕ್ಕಳಿಗಾಗಿ ಆಸ್ತಿ ಮಾಡುವುದರ ಜೊತೆಗೆ
ಮಕ್ಕಳನ್ನೇ ಆಸ್ತಿಯನ್ನಾಗಿಸುವ
ತಂದೆಯ ಪರಿಶ್ರಮ
ನಿನ್ನ ಈ ಪ್ರೀತಿ, ಕಾಳಜಿ,
ನಿಸ್ವಾರ್ಥ ಮನಸ್ಸಿನ ಸಹಾಯತೆಯ
ಪ್ರತಿರೂಪಕ್ಕೆ ನಿನಗೆ ನೀನೇ ಸಮ
ನಿಜಕ್ಕೂ ಅಪ್ಪನ ಸ್ಥಾನವೇ
ಒಂದು ಅದ್ಭುತವಾದ ಪಟ್ಟ
ಮಕ್ಕಳ ಭವಿಷ್ಯ ರೂಪಿಸುವಲ್ಲಿ
ತಂದೆಯೇ ನಿಜವಾದ ಸಾಮ್ರಾಟ
ತಾಯಿಯನ್ನು ಅವನಿಗೆ ಹಾಗೂ ತಂದೆಯನ್ನು
ಗಗನಕ್ಕೆ ಹೋಲಿಸುವುದುಂಟು
ಗುರುಹಿರಿಯರನ್ನು ಗೌರವಿಸಿ ಬಾಳುವುದೇ
ಉತ್ತಮ ಜೀವನದ ಚೌಕಟ್ಟು
............................... ಭಾಗ್ಯಲಕ್ಷ್ಮೀ ಆಚಾರ್ಯ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
ಹೀರುವ ಜೀವಿ
ಈ ರೀತಿ ಶುರು ಮಾಡುವುದು
ತನ್ನ ದಿನವಹಿ
ನಿನ್ನ ವಿಭಿನ್ನ ಬಣ್ಣಗಳಿಂದ
ಕಸಿದುಕೊಳ್ಳುವೆ ನಮ್ಮಯ ಜ್ಞಾನ
ನಿನ್ನ ನೋಡಿದ ಕ್ಷಣದಿಂದ
ಶುರುವಾಗಿದೆ ನಿನ್ನಯ ಧ್ಯಾನ
ಪ್ರಕೃತಿಮಾತೆಯ ಮಡಿಲೇ
ನಿನ್ನ ಸುಂದರವಾದ ತಾಣ
ಎಷ್ಟು ಹೊಗಳಿದರೂ ಸಾಲದು
ನಿನ್ನ ಸೌಂದರ್ಯದ ಗುಣಗಾನ..!
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************