ಪ್ರೀತಿಯ ಪುಸ್ತಕ : ಸಂಚಿಕೆ - 162
Friday, May 9, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 162
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಲೇಖಕರು : ಎಸ್ಥರ್ ದುಫ್ಲೋ, ಇವರು ಬರೆದಿರುವ ಈ ಪುಸ್ತಕಗಳು ಮಕ್ಕಳಿಗೆ ತಮ್ಮ ಸುತ್ತಲಿನ ಲೋಕವನ್ನು ಓದುವ, ಅರ್ಥಮಾಡಿಕೊಳ್ಳುವ ಹಾದಿಯಲ್ಲಿ ಇಟ್ಟ ಒಂದು ಹೆಜ್ಜೆ. ಈ ಕತೆಯು ಮೂಲಭೂತ ಹಕ್ಕುಗಳನ್ನು ಸಾರ್ವತ್ರಿಕವಾಗಿ ಪಡೆಯುವ ಕುರಿತಂತೆ ಇರುವ ಐದು ಪುಸ್ತಕಗಳ ಸರಣಿಯ ಭಾಗ.
ಪ್ರೀತಿಯ ಮಕ್ಕಳೇ... ನೀಲೂಗೆ ಶಾಲೆ ಇಷ್ಟವಿಲ್ಲ. ಮಕ್ಕಳಿಗೆ ಶಾಲೆ ಇಷ್ಟವಿಲ್ಲದೇ ಇರುವುದು ಹೊಸದೇನಲ್ಲ. ಅಲ್ಲವೇ? ಅವಳ ಜೊತೆಗೆ ಶಾಲೆ ಇಷ್ಟವೇ ಇರದ ಇನ್ನೂ ಒಂದಷ್ಟು ಮಕ್ಕಳು ಇರುತ್ತಾರೆ. ಎಲ್ಲೆಲ್ಲೋ ಅವಿತುಕೊಂಡು ಆಟ ಆಡಿಕೊಂಡು ಶಾಲೆಗೆ ಹೋಗದೆ ಕಾಲ ಕಳೆಯುತ್ತಿರುತ್ತಾರೆ. ಒಂದು ಸಾರಿ ಆ ಊರಿಗೆ ಅಂಬ್ರಾ ಹೆಸರಿನ ಒಬ್ಬರು ಬರುತ್ತಾರೆ. ಮಕ್ಕಳು ಏನೇನೂ ಕಲಿಯದೆ ಇರುವುದನ್ನು ಎಲ್ಲರಿಗೂ ತೋರಿಸಿಕೊಡುತ್ತಾರೆ. ಆಮೇಲೆ.. ಆಮೇಲೆ.. ಏನಾಗುತ್ತದೆ. ನೀಲೂ ಇನ್ನು ಶಾಲೆ ತಪ್ಪಿಸುವುದಿಲ್ಲ ಅಂತ ಹೇಳುವ ಹಾಗೆ ಆಗುತ್ತದೆ. ಅದು ಹೇಗೆ ಆಗುತ್ತದೆ. ಓದಿ ನೋಡಿ.
ಲೇಖಕರು : ಎಸ್ಥರ್ ದುಫ್ಲೋ
ಚಿತ್ರಗಳು: ಶಾಯಿನ್ ಒಲೀವ್ಹಿಯೆ
ಅನುವಾದ: ಜೆ.ವಿ. ಕಾರ್ಲೊ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.100/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************