-->
ಮಕ್ಕಳ ಲೇಖನ : ನೈತಿಕ ಶಿಕ್ಷಣದ ಪ್ರಾಮುಖ್ಯತೆ - ಬರಹ : ಸಪ್ತಮಿ , 10ನೇ ತರಗತಿ

ಮಕ್ಕಳ ಲೇಖನ : ನೈತಿಕ ಶಿಕ್ಷಣದ ಪ್ರಾಮುಖ್ಯತೆ - ಬರಹ : ಸಪ್ತಮಿ , 10ನೇ ತರಗತಿ

ಮಕ್ಕಳ ಲೇಖನ : ನೈತಿಕ ಶಿಕ್ಷಣದ ಪ್ರಾಮುಖ್ಯತೆ
ಬರಹ : ಸಪ್ತಮಿ 
10ನೇ ತರಗತಿ 
ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ

                
ಮಾನವನಲ್ಲಿ ಉತ್ತಮ ಸ್ವಭಾವವನ್ನು ಹಾಗೂ ಉತ್ತಮ ನಡತೆಯನ್ನು ಬೆಳೆಸುವುದೇ ನೈತಿಕ ಶಿಕ್ಷಣ. ಸಚ್ಚಾರಿತ್ರ್ಯ, ಪ್ರಾಮಾಣಿಕತೆ, ಸತ್ಯಸಂದತೆ, ವಿನಯಶೀಲತೆ, ನೈತಿಕ ಸ್ಥಿರತೆ, ದೇವರಲ್ಲಿ ಭಕ್ತಿ ಭಾವ ಇವೆಲ್ಲವುಗಳು ನೈತಿಕತೆಗೆ ಮೂಲ ಆಧಾರಗಳಾಗಿವೆ. ನೈತಿಕ ಶಿಕ್ಷಣ ಇಲ್ಲದೆ ಒಬ್ಬ ಮಗುವಿನ ಸರ್ವಾಂಗೀಣ ವಿಕಾಸ ಅಸಾಧ್ಯವಾಗುತ್ತದೆ. ಸುಸಂಭದ್ಧ ವ್ಯಕ್ತಿತ್ವದ ನಿರ್ಮಾಣಕ್ಕೆ ನೈತಿಕತೆಯೇ ಮೂಲ ಆಧಾರ. ಆದರೆ ಇಂದಿನ ವಿದ್ಯಾರ್ಥಿಗಳಲ್ಲಿ ನೈತಿಕ ಗುಣ ಧರ್ಮಗಳ ಕೊರತೆ ಎದ್ದು ಕಾಣುತ್ತಿದೆ. ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ, ಗಂಗೆ ಇದ್ದೊಡೆ, ಸಿಂಧು ಇದ್ದೊಡೆ, ಹಿಮಾಲಯವಿದ್ದೊಡೆ, ವೇದವಿದ್ದೊಡೆ, ಶಾಸ್ತ್ರ ಇದ್ದೊಡೆ ಘನಪರಂಪರೆವಿದ್ದೊಡೆ ಏನು ಸಾರ್ಥಕ. ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ..? ಎಂಬ ಕವಿವಾಣಿಯಂತೆ ಇಂದಿನ ಯುವ ಜನತೆಗೆ ತಮ್ಮ ಅಮೂಲ್ಯವಾದ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗಲು ನೈತಿಕ ಶಿಕ್ಷಣದ ಅಗತ್ಯವಿದೆ. ಆದರೆ ಇಂದು ಎಲ್ಲಡೆಯೂ ನೈತಿಕತೆಯ ಕೊರತೆಯನ್ನು ಕಾಣಬಹುದು. ಇದಕ್ಕೆ ಮುಖ್ಯ ಕಾರಣ ಇಂದಿನ ಶಿಕ್ಷಣ ಕೇವಲ ಪಠ್ಯ ಕೇಂದ್ರೀಕೃತವಾಗಿರುವುದು. 

ಆಧುನಿಕ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳನ್ನು ನೈತಿಕ ಮೌಲ್ಯಗಳಿಂದ ದೂರವಾಗಿಸಿವೆ. ನೊಂದವರ ಕಣ್ಣೀರು ಒರೆಸುವ, ಗುರು ಹಿರಿಯರನ್ನು ಗೌರವಿಸುವ, ಕಷ್ಟದಲ್ಲಿರುವವರಿಗೆ ಸಹಕಾರ ನೀಡುವ, ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಮುಂತಾದ ಜೀವನ ಮೌಲ್ಯಗಳು ಇಂದು ಮಾಸಿಹೋಗಿವೆ. ಇಂದಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ನಡೆಸುವ ಪಠ್ಯ ಆಧಾರಿತ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಕೈ ತುಂಬಾ ಸಂಬಳ ಸಂಪಾದಿಸುತ್ತಿದ್ದಾರೆ. ಆದರೆ ಜ್ಞಾನದ ಕೊರತೆ ಎದ್ದು ಕಾಣಿಸುತ್ತಿದೆ. ಸಮಾಜಘಾತುಕ ಕಾರ್ಯಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಿರಿಯರು ಹಿರಿಯರನ್ನು ಗೌರವಿಸುವ ಕಾಲದಿಂದ 'ನೀ ಗೌರವ ಕೊಟ್ಟರೆ ನಾ ನಿನಗೆ ಗೌರವ ಕೊಡುವೆ' ಎನ್ನುವಲ್ಲಿಗೆ ಬಂದು ತಲುಪಿವೆ. ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಗುಣ ಯಾರಲ್ಲಿ ಇರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯು ನಿಗ್ರಹಿಸಲಾರದು.

ಯುವಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನು ಎದುರಿಸಬಲ್ಲ ಎಂಬ ವಿವೇಕಾನಂದ ಅವರ ವಾಣಿಯಂತೆ 'ಉತ್ತಮ ಜೀವನವನ್ನು ನಡೆಸಲು ನೈತಿಕ ಶಿಕ್ಷಣವು ಅಗತ್ಯ'. ಒಟ್ಟಿನಲ್ಲಿ ಹೇಳುವುದಾದರೆ, ಸಂಸ್ಕಾರಭರಿತವಾದ ಜೀವನ, ಗುರುಹಿರಿಯರಿಗೆ ಕೊಡುವ ಗೌರವ, ನೆಲ-ಜಲದ ಬಗ್ಗೆ ಪ್ರೀತಿ ಹಾಗೂ ಮಮತೆ ನಮ್ಮೊಳಗೆ ಬೆಳೆಯಬೇಕು. ಆದ್ದರಿಂದ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಬೋಧಿಸುತ್ತಾ, ಯುವ ಜನತೆಯನ್ನು ದೇಶದ ಆಸ್ತಿಯನ್ನಾಗಿ ಮಾಡುವತ್ತ ಗಮನಹರಿಸೋಣ.
................................................... ಸಪ್ತಮಿ 
10ನೇ ತರಗತಿ 
ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್  
ಕಿರಿಮಂಜೇಶ್ವರ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article