-->
ಪಯಣ : ಸಂಚಿಕೆ - 41 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 41 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 41 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ ಸುಂದರ ದ್ವೀಪವಾದ ಕಾರವಾರ ಸಮೀಪದ ಕೂರ್ಮಗಡ - ನರಸಿಂಹಗಡಕ್ಕೆ ಪಯಣ ಮಾಡೋಣ ಬನ್ನಿ....                    

ಕಾರವಾರದ ಅಥವಾ ಚಿತ್ತಾಕುಲ ಪ್ರದೇಶದ ಸಂಬಂಧವನ್ನು ನಾಲ್ಕು ಕತ್ತರಿಸಿಕೊಂಡು ಸಮುದ್ರದ ಮಧ್ಯೆ ಸನ್ಯಾಸಿಯಂತೆ ಪ್ರತ್ಯೇಕವಾಗಿ ಇರುವ ಸುಂದರ ದ್ವೀಪಗಳಲ್ಲಿ ಒಂದಾದ ಕೂರ್ಮಗಡ ಕೂರ್ಮಾಕಾರದ್ದು. ಇದಕ್ಕೆ ಅದರದೇ ಆದ ಇತಿಹಾಸವಿದೆ. ಇಲ್ಲಿ ನರಸಿಂಹನ ದೇವಸ್ಥಾನವಿರುವುದರಿಂದ ಇದು ನರಸಿಂಹಗಡವಾಗಿದೆ.        
ಇದು ಹಿಂದೆ ಹೆನ್ರಿ ಮುಂಟೋಕೊಯ್ಲೋ ಎಂಬುವರ ಸ್ವಂತ ಆಸ್ತಿಯಾಗಿತ್ತು. ಆದರೆ ಅದಕ್ಕೂ ಹಿಂದೆ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆಯವರಿಗೆ ಸೇರಿತ್ತು. ಇದು ವಿಜಯನಗರದ ಅರಸರಿಂದ, ಬಿಜಾಪುರದ ಅರಸೊತ್ತಿಗೆಯವರ ಆಡಳಿತದ ವ್ಯಾಪ್ತಿಗೂ ಒಳಪಟ್ಟಿತ್ತು. ಸೊಂದೆ ಅರಸರ ಕಾಲಕ್ಕೆ ಇದು ವ್ಯಾಪಾರದ ದೃಷ್ಟಿಯಿಂದ ಆಡಳಿತ ಸ್ಥಾನವಾಗಿತ್ತು.

ಬ್ರಿಟಿಷರು ಕೂರ್ಮಗಡದಲ್ಲಿ 1705 ರಲ್ಲಿ ಕೋಟೆ ಕಟ್ಟಿಸಿದರೆಂದು ತಿಳಿದುಬಂದಿದೆ. ಈಗ ಇದೊಂದು ಅತ್ಯಧಿಕ ಜನಸಂದಣಿಯ ಜಾತ್ರಾ ಸ್ಥಳ. ಇಲ್ಲಿ ನರಸಿಂಹನ ಜಾತ್ರೆಯ ದಿನ ಪುಷ್ಯ ಪೂರ್ಣಿಮ, ಆಗ ಅಲ್ಲಿ ಜನರಿಗೆ ಪುಕ್ಕಟ್ಟೆ ಪಿಕ್‌ನಿಕ್ ಎಂಬಂತೆ ಈ ತಾಲ್ಲೂಕಿನ ಜನಕ್ಕೆ ಇದರ ಪ್ರವಾಸ ಒಂದು ಅಪೂರ್ವ ಅನುಭವ. 

(ಇದು ಕಾರವಾರ ಸುಂದರವಾದ ರೈಲ್ವೆ ಸ್ಟೇಷನ್)
ಈ ದೇವರ ಜಾತ್ರೆ ವರ್ಣರಂಜಿತ, ಈ ಜಾತ್ರೆಯ ಸಮಯದಲ್ಲಿ ನರಸಿಂಹನಿಗೆ ಬೆಳ್ಳಿಯ ಕವಚ ತೊಡಿಸಲಾಗುತ್ತದೆ. ಆಗ ಜನರು ಅವನಿಗೆ ಹರಕೆ ಒಪ್ಪಿಸಿ ಋಣಮುಕ್ತರಾಗುವರು. ಇದರ ಜೊತೆಗೆ ಸಮುದ್ರ ಪ್ರವಾಸದ ಅನುಭವವೂ ಸೇರಿದೆ.  
ಸೇರುವ ಬಗೆ : ಇಲ್ಲಿಗೆ ಹೋಗಲು ಸಾಕಷ್ಟು ಯಾಂತ್ರಿಕ ದೋಣಿಗಳಿವೆ. ಅಶಕ್ತರನ್ನು, ಅಬಲೆಯರನ್ನು ದೋಣಿಯ ಮೇಲೆ ಇಳಿಸುವ, ಇಳಿಸಿ ದಡಕ್ಕೆ ಸಾಗಿಸುವ ಮಂದಿ ಇದ್ದಾರೆ. ಇವರೇ ಜಟ್ಟಿಗರು.  

ಇದು ಕಾರವಾರದಿಂದ 4 ಕಿ.ಮೀ. ಚಿತ್ತಾಕುಲ ಸಮುದ್ರದ ದಡದಿಂದ 4 ಕಿ.ಮೀ. ದೂರದಲ್ಲಿದೆ. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಅತಿ ಪ್ರಾಕೃತಿಕ ಸೌಂದರ್ಯವನ್ನು ಇಲ್ಲಿ ವೀಕ್ಷಿಸುವುದರೊಂದಿಗೆ ಸುಂದರ ಕಡಲ ತೀರದ ಅನುಭವವನ್ನು ಪಡೆಯಬಹುದಾಗಿದೆ.

"ಒಂದೆಡೆ ಪ್ರಾಕೃತಿಕ ಸೌಂದರ್ಯ, ಮತ್ತೊಂದೆಡೆ ಕಡಲ ತೀರ, ಜಲಧಾರೆಯ ನಡುವಿನಲ್ಲಿ ಕೂರ್ಮಾಕಾರದ ದ್ವೀಪ, ಶ್ರೀ ನರಸಿಂಹ ಸ್ವಾಮಿಯ ದರ್ಶನ ಎಲ್ಲವೂ ನೋಡಲು ಅದ್ಭುತ ಬನ್ನಿ ಒಮ್ಮೆ ಕೂರ್ಮಗಡ - ನರಸಿಂಹಗಡಕ್ಕೆ..."

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************


Ads on article

Advertise in articles 1

advertising articles 2

Advertise under the article