ಪ್ರೀತಿಯ ಪುಸ್ತಕ : ಸಂಚಿಕೆ - 158
Saturday, April 12, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 158
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಕೊಂಚಿಗೆ ಅಂದರೆ ಗೊತ್ತಾ ನಿಮಗೆ? ಇದು ಮಗುವಿಗೆ ಹಿಂದಿನ ಕಾಲದಿಂದಲೂ ಹಾಕುವ ಒಂದು ಬಗೆಯ ಟೊಪ್ಪಿಗೆ. ಇದು ಮಗುವನ್ನು ಚಳಿ ಹಾಗೂ ಬಿಸಿಲಿನಿಂದ ಕಾಪಾಡುತ್ತದೆ. ಬಣ್ಣ ಬಣ್ಣದ ಕೊಂಚಿಗೆಗಳನ್ನು ತಲೆಯಲ್ಲಿ ಕಟ್ಟಿಕೊಂಡಾಗ ಮಕ್ಕಳೂ ಮುದ್ದಾಗಿ ಕಾಣುತ್ತಾರೆ. ಇರಲಿ, ಅಂತಹ ಒಂದು ಕೊಂಚಿಗೆ, ಸುಂದರ ಮನೆಯ ಮರದ ಸಂದೂಕದಲ್ಲಿ ಬೆಚ್ಚಗೆ ವಾಸವಾಗಿದ್ದ ಕೊಂಚಿಗೆ ಬಿಸಿಲಿನಲ್ಲಿ ಮೈ ಕಾಯಿಸುತ್ತಾ ಕುಳಿತಿದ್ದಾಗ, ಜೋರಾದ ಗಾಳಿ ಬೀಸಿತು. ಗಾಳಿಯ ರಭಸಕ್ಕೆ ಈ ಹಗುರವಾದ ಕೊಂಚಿಗೆ ಒಂದು ಕಡೆ ಉಳಿದೀತೇ? ಹಾರಿ ಹೋಯಿತು.. ಮರದ ಮೇಲೆ ಸಿಕ್ಕಿಹಾಕಿಕೊಂಡಿತು. ಆಗಸದಲ್ಲಿ ಹಾರಿತು.. ನೆಲದ ಮೇಲೆ ಇಳಿಯಿತು.. ಹಳ್ಳದ ಮೇಲೆ ಬಿದ್ದಿತು.. ಒಂದೊಂದು ಕಡೆಯೂ ಅದಕ್ಕೆ ಒಂದೊಂದು ಅನುಭವ ಆಯಿತು. ಇಷ್ಟೆಲ್ಲಾ ಆಗಿ ಕೊಂಚಿಗೆಯು ಮತ್ತೆ ತನ್ನ ಕುಟುಂಬವನ್ನು ಸೇರಿತೇ ಇಲ್ಲವೇ? ಹೇಗೆ ಸೇರಿಕೊಂಡಿತು? ಕುತೂಹಲ ಇದ್ದರೆ ಪುಸ್ತಕ ಉತ್ತರ ನೀಡುತ್ತದೆ.
ಲೇಖಕರು: ಅನುಪಮಾ ಕೆ ಬೆಣಚಿನಮರ್ಡಿ
ಚಿತ್ರಗಳು: ಭೀಮಸೇನ ಶಿ ನಾಯಿಕ
ಪ್ರಕಾಶಕರು: ಅವ್ವಾ ಪುಸ್ತಕ,ಬೆಂಗಳೂರು
ಬೆಲೆ: ರೂ.175/-
5-6 ತರಗತಿಯ ಮಕ್ಕಳು ಓದಬಹುದು; ಕಿರಿಯರಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅವ್ವಾ ಪುಸ್ತಕ, awwabooks@gmail.com; www.awwabooks.com ಫೋನ್ ಸಂಖ್ಯೆ: +91 9739266465; 9945550869
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************