-->
ಮಕ್ಕಳ ನಾಟಕ : ವೀರ ಸೈನಿಕ : ಸಂಚಿಕೆ - 03,  ರಚನೆ : ಗೌತಮಿ ಶೆಟ್ಟಿಗಾರ್, 9ನೇ ತರಗತಿ

ಮಕ್ಕಳ ನಾಟಕ : ವೀರ ಸೈನಿಕ : ಸಂಚಿಕೆ - 03, ರಚನೆ : ಗೌತಮಿ ಶೆಟ್ಟಿಗಾರ್, 9ನೇ ತರಗತಿ

ಮಕ್ಕಳ ನಾಟಕ : ವೀರ ಸೈನಿಕ
ಸಂಚಿಕೆ - 03
ರಚನೆ : ಗೌತಮಿ ಶೆಟ್ಟಿಗಾರ್ 
9ನೇ ತರಗತಿ 
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ  

           
ದ್ರಶ್ಯ - 1

(ಅಂದು ಸ್ವಾತಂತ್ರ್ಯ ದಿನಾಚರಣೆ. ಕಿಶನ್ ಶಾಲೆಯಿಂದ ಮನೆಗೆ ಬೇಗ ಬರುತ್ತಾನೆ.)

ಕಿಶನ್ : ಅಮ್ಮಾ ಅಮ್ಮಾ ನಾನು ಬಂದೆ.
ಅಮ್ಮ: (ಅಮ್ಮ ಮಗನ ಸ್ವರ ಕೇಳಿ ತಟ್ಟೆಯಲ್ಲಿ ಊಟ ತಂದು) ಹಾ ಕಿಶನ್ ಬಂದ್ಯಾ…. ಏನು ಇಷ್ಟು ಬೇಗ ಶಾಲೆಯಿಂದ ಬಂದಿದ್ಯ. ನಿಮಗೆ ಇವತ್ತು ಶಾಲೆ 11.30 ಕ್ಕೆ ಬಿಡುತ್ತಾರೆಂದು ಹೇಳಿದ್ದಲ್ವ. 
ಕಿಶನ್ : ಅಮ್ಮ ಇವತ್ತು ಸ್ವಾತಂತ್ರ್ಯ ದಿನಾಚರಣೆ ಅಲ್ವಾ, ಅದಕ್ಕೆ ಎಲ್ಲಾ ಕಾರ್ಯಕ್ರಮ ಮುಗಿದು ಬೇಗ ಬಿಡುವರಿದ್ದರು. ನನಗೆ ಹೊಟ್ಟೆ ನೋವು ಆಯ್ತಲ್ಲ, ಅದಕ್ಕೆ ಟೀಚರ್ ಹತ್ತಿರ ಕೇಳಿಕೊಂಡು ಬಂದೆ.
ಅಮ್ಮಾ : ಹಾ.. ನೀನು ಬೆಳಿಗ್ಗೆ ಏನು ತಿನ್ನಲಿಲ್ಲ ಅಲ್ವಾ , ಅದಕ್ಕೆ ಹೊಟ್ಟೆ ನೋವು ಬಂದಿರಬೇಕು. ಬಾ ಊಟ ಮಾಡುವಂತೆ.
ಕಿಶನ್ : ಅಮ್ಮ… ಜೋರಾಗಿ ಹಸಿತಾ ಇದೆ ಹೊಟ್ಟೆ. ಊಟ ಊಟ ಮಾಡ್ತೇನೆ. 
ಅಮ್ಮಾ : ಅಂದ ಹಾಗೆ ಶಾಲೆಯಲ್ಲಿ ಏನೆಲ್ಲಾ ಆಯ್ತು ಇವತ್ತು. ಯಾರ ಬಗ್ಗೆ ಭಾಷಣ ಮಾಡಿದ್ರು.
ಕಿಶನ್ : ಅವರು… ಹಾ ವೀರ ವೀರ ಸೈನಿಕ್ ಅಸಾರಾಮ್ ತ್ಯಾಗಿ ಅಂತೆ. 
ಅಮ್ಮ : ನಿನಗೆ ಅವರು ಯಾರೆಂದು ಗೊತ್ತಾ? ಅವರು ನಮ್ಮ ದೇಶಕ್ಕಾಗಿ ಹಾಗೂ ದೇಶದ ಜನರಿಗಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಮಹಾವೀರ ಆಶಾರಾಂ ತ್ಯಾಗಿ ಮಗಾ.
ಕಿಶನ್ :- ಅಮ್ಮ. ಅಮ್ಮ.. ಅವರು ಯಾಕೆ ದೇಶಕ್ಕಾಗಿ ಪ್ರಾಣಬಿಟ್ಟರು? ಹೇಗೆ? ಹೇಳಮ್ಮ.. ಹೇಳು.
ಅಮ್ಮ : ಸರಿ. ಹೇಳ್ತಿನಿ ಕೇಳು.

ದ್ರಶ್ಯ - 2

(ಇಸವಿ 1965ರಲ್ಲಿ ನಡೆದ ಘಟನೆ. ಅವನು ಚಿಕ್ಕ ವಯಸ್ಸಿನಲ್ಲಿ ಶಾಲೆಯಲ್ಲಿ ಅವನ ದೊಡ್ಡ ವಯಸ್ಸಿನ ಕನಸುಗಳ ಬಗ್ಗೆ ಟೀಚರ್ ಕೇಳಿದಾಗ.. ಟೀಚರ್ ನಾನು ದೊಡ್ಡವನಾಗಿ ದೇಶಕ್ಕಾಗಿ ಹೋರಾಡಿ ದೇಶ ಸೇವೆ ಮಾಡಬೇಕು ಎಂದುಕೊಂಡಿದ್ದೇನೆ… ಆದ್ದರಿಂದ ನಾನು ಸೈನಿಕನಾಗಬೇಕು..)
ಹಿನ್ನೆಲೆ ಧ್ವನಿಯಲ್ಲಿ 
(ಹಾಗಾಗಿ ಆ ಕನಸನ್ನು ನನಸು ಮಾಡುವ ಕ್ಷಣ ಬಂದಿತು. ಈಗ ಅವನು ಸೈನಿಕನಾಗಿ ದೇಶ ಸೇವೆ ಮಾಡಲು ಅರ್ಜಿ ಹಾಕಿದ್ದನು).

ಪೋಸ್ಟ ಮ್ಯಾನ್ : ಸರ್ ಪೋಸ್ಟ್… ಇಲ್ಲಿ ಸಹಿ ಹಾಕಿ ಬರುತ್ತೇನೆ ಸರ್.
ಆಶಾರಾಮತ್ಯಾಗಿ : ಅಮ್ಮ.. ಅಮ್ಮ… ನಾನು ಚಿಕ್ಕ ವಯಸ್ಸಿನಲ್ಲಿ ಕಂಡ ಕನಸು ನನಸಾಗಿದೆ. ಅಮ್ಮ ಕಡೆಗೂ ನಾನು ಸೈನಿಕನಾಗಿ ಆಯ್ಕೆಯಾಗಿದ್ದೇನೆ.
ಅಮ್ಮ : ಹೌದಾ. ಮಗು, ಕಡೆಗೂ ದೇವರು ನಿನ್ನ ಇಷ್ಟು ದಿನದ ಮೊರೆಯನ್ನು ಕೇಳಿ ನಿನ್ನ ಪ್ರಯತ್ನಕ್ಕೆ ಪ್ರತಿಫಲ ಕೊಟ್ಟಿದ್ದಾರೆ.
ಆಶಾರಾಮ್ ತ್ಯಾಗಿ : ಹೌದು ಅಮ್ಮ ನೀನು ಸರಿ ಹೇಳುತ್ತಿದ್ದೀಯಾ.. ಆದರೆ ಆ ಪತ್ರದಲ್ಲಿ ನಾಳೇನೇ ಹೊರಡಬೇಕೆಂದು ತಿಳಿಸಿದ್ದಾರೆ.
ಅಮ್ಮ : ಏನು ಹೇಳುತ್ತಿದ್ದೀಯಾ? ನಾಳೆನೇ ಹೋಗಬೇಕಾ?
ಆಶಾ ರಾಮ್ ತ್ಯಾಗಿ : ಹೌದು ಅಮ್ಮ ನಾನು ನಾಳೆನೇ ಹೊರಡಬೇಕು. 
ಅಮ್ಮ : ಆಯ್ತು ಮಗ..

ದೃಶ್ಯ - 3 

(ಮರುದಿನ ಹೊರಡಲು ಸಿದ್ಧರಾದಾಗ )
ಅಮ್ಮ : ಮಗ ಸ್ವಲ್ಪ ನಿಲ್ಲು… ಆರತಿ ಎತ್ತಿ ಕಳಿಸುತ್ತೇನೆ. ವಿಜಯಶ್ರೀಭವ. (ಅಳುತ್ತಾಳೆ)
ಆಶಾ ರಾಮ್ ತ್ಯಾಗಿ : ಅಮ್ಮ ಅಳಬೇಡ, ನನ್ನನ್ನು ಪ್ರೀತಿಯಿಂದ ಕಳುಹಿಸಿಕೊಡಮ್ಮ, ನನ್ನನ್ನು ಆಶೀರ್ವದಿಸು.
ಅಮ್ಮ : ನನ್ನ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತದೆ… ಆದರೆ ನನ್ನ ಒಂದು ಮಾತು ನೆನಪಿಟ್ಟುಕೊ.. ಭಾರತೀಯ ಪರಂಪರೆಯಲ್ಲಿ ಸೈನಿಕರು ಎದೆಯಲ್ಲಿ ಗುಂಡನ್ನು ತೆಗೆದುಕೊಳ್ಳುವರು ಹೊರತು ಬೆನ್ನಿಗಲ್ಲ ನೆನಪಿರಲಿ.
ಆಶಾರಾಮ್ ತ್ಯಾಗಿ : ನಿನ್ನ ಮಾತಿನಂತೆ ನಾನು ನಡೆದುಕೊಳ್ಳುತ್ತೇನೆ ಅಮ್ಮ.

ದ್ರಶ್ಯ : 4

(ಕೆಲವು ದಿನಗಳ ನಂತರ )
 ಬ್ರಿಗೇಡಿಯರ್ : ಸೋಲ್ಜರ್ ಅಟೆನ್ಷನ್. 
ಸೋಲ್ಜರ್ : ಯಸ್ ಸರ್…… 
 ಬ್ರಿಗೇಡಿಯರ್ : ಸೋಲ್ಜರ್... ನಮ್ಮ ಶತ್ರುಗಳು ನಮ್ಮ ದೇಶದ ಗಡಿ ಭಾಗದಲ್ಲಿ ದಾಳಿ ಮಾಡಿದ್ದಾರೆ ಎಲ್ಲರೂ ತಮ್ಮ ತಮ್ಮ ತಂಡಗಳಿಗೆ ಹೋಗಿ ನಿಮ್ಮ ಆಯುಧಗಳನ್ನು ತೆಗೆದು ಸಿದ್ದರಾಗಿ. get ready move...
(ಗುಂಡುಗಳ ಸುರಿಮಳೆ ಪ್ರಾರಂಭ… ಶತ್ರು ಸೇನೆಯು ಬಿಟ್ಟ ಗುಂಡು ಆಶಾರಾಮ್ ತ್ಯಾಗಿಯ ಎದೆಯನ್ನು ಸೀಳಿ ಅವನ ದೇಹಕ್ಕೆ ಸೇರಿತು… ಅದನ್ನು ಲೆಕ್ಕಿಸದೆ ತಾಯಿ ಹೇಳಿದ ಮಾತನ್ನು ನೆನಪಿಸುತ್ತ ಯುದ್ಧದಲ್ಲಿ ಮುನ್ನುಗ್ಗುತ್ತಾನೆ )
 ತಾಯಿಯ ಸ್ವರ :ಭಾರತೀಯ ಪರಂಪರೆಯಲ್ಲಿ ಸೈನಿಕರು ಎದೆಯಲ್ಲಿ ಗುಂಡನ್ನು ಪಡೆದುಕೊಳ್ಳುತ್ತಾರೋ ಹೊರತು ಬೆನ್ನಿಗಲ್ಲ. ಎಂಬ ಮಾತನ್ನು ನೆನಪಿಸಿ ಶತ್ರುಗಳ ವಿರುದ್ಧ ಹೋರಾಡುತ್ತಾನೆ. ಕೊನೆಗೂ ತನ್ನ ದೇಶ ಗೆಲುವು ಸಾಧಿಸುವುದನ್ನ ನೋಡಿ ತನ್ನ ದೇಶದ ಧ್ವಜಕ್ಕೆ ಸೆಲ್ಯೂಟ್ ಹೊಡೆದು ಭಾರತ ಮಾತಾ ಕಿ ಜೈ… ಎಂದು ಹೇಳುತ್ತಾ ಪ್ರಜ್ಞೆ ತಪ್ಪುತ್ತಾನೆ. (ಆವಾಗ ಅವನನ್ನು ಉಳಿದ ಸೈನಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ)

ದ್ರಶ್ಯ : 5
(ಆಸ್ಪತ್ರೆಯಲ್ಲಿ.. ಆಶಾ ರಾಮ್ ತ್ಯಾಗಿ ಕಣ್ಣನ್ನು ತೆರೆದಾಗ ಅವನು ತನ್ನನ್ನು ಆಸ್ಪತ್ರೆಯಲ್ಲಿ ನೋಡುತ್ತಾನೆ)
 ಡಾಕ್ಟರ್ : ಇವರು ಸ್ವಲ್ಪ ಹೊತ್ತು ಬದುಕುವ ಸಾಧ್ಯತೆ ಇದೆ. ಆದ್ದರಿಂದ ಇವರ ಕೊನೆಯ ಆಸೆಯನ್ನು ಕೇಳಿ.
 ಬ್ರಿಗೇಡಿಯರ್ : ನೀನು ಏನಾದರೂ ಹೇಳಬೇಕೆಂದು ಅಂದುಕೊಂಡಿದ್ದೀಯಾ.
 ಆಶಾರಾಂ ತ್ಯಾಗಿ : (ಕೊನೆ ಕ್ಷಣದ ಮಾತುಗಳನ್ನು ಹೇಳುತ್ತಾನೆ).. ನನ್ನ... ನನ್ನ ಅಮ್ಮನಲ್ಲಿ ಒಂದು ಸಂದೇಶವನ್ನು ಕಳುಹಿಸಿಕೊಡಿ. ನಿನ್ನ ಮಗ ಗುಂಡನ್ನು ಎದೆಯಲ್ಲಿ ತೆಗೆದುಕೊಂಡಿದ್ದಾನೆ ಹೊರತು ಬೆನ್ನಿಗಲ್ಲ.. ಎಂದು ಹೇಳಿ ಕೊನೆ ಉಸಿರು ಬಿಡುತ್ತಾನೆ….. (ದೇಶಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಮಹಾವೀರ ಅನಿಸಿಕೊಂಡ ಆಶಾರಾಮ್ ತ್ಯಾಗಿ)
 ಆಶಾ ರಾಮ್ ತ್ಯಾಗಿ ಅವರನ್ನು ಭಾರತೀಯ ಸೇನೆ ಒಬ್ಬ ಮಹಾವೀರ ಸೈನಿಕ ಎಂದು.. 21 ಸೆಪ್ಟೆಂಬರ್ 1965 ರಂದು ವೀರ ಮರಣಕ್ಕಾಗಿ… ಮಹಾವೀರ ಚಕ್ರ ಪದವಿಯನ್ನು ಮರುಣೋತ್ತರ ಅವರ ತಾಯಿಗೆ ನೀಡಿ ಗೌರವಿಸಿದರು.

ದ್ರಶ್ಯ : 6

ಅಮ್ಮ: ಕೇಳಿದೆಯಾ ಮಗು… ಆ ಸೈನಿಕ ಯಾರೆಂದು… ದೇಶಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನು ಬಿಟ್ಟ ಮಹಾವೀರ ಅವರೇ ಆಶಾರಾಂತ್ಯಾಗಿ.
ಕಿಶನ್ : ಅಮ್ಮ ನಾನು ಕೂಡ ಇವರ ಹಾಗೆ ದೇಶ ಸೇವೆ ಮಾಡುತ್ತೇನೆ. ದೇಶಕ್ಕಾಗಿ ಹೋರಾಡುತ್ತೇನೆ.
ಅಮ್ಮ : ನಿನ್ನ ಅಸೆ ನೆರವೇರಲಿ. 
 ಧನ್ಯವಾದಗಳು.
....................................... ಗೌತಮಿ ಶೆಟ್ಟಿಗಾರ್ 
9ನೇ ತರಗತಿ 
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 
***************************************
ಮಾರ್ಗದರ್ಶಕ ಶಿಕ್ಷಕರು : ಐರಿನ್ ಫೆರ್ನಾಂಡಿಸ್
***************************************





Ads on article

Advertise in articles 1

advertising articles 2

Advertise under the article