-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 66

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 66

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 66
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ.... ವಿಜ್ಞಾನ ಶೋಧಗಳು ಸಾಮಾನ್ಯವಾಗಿ ಆಕಸ್ಮಿಕಗಳೇ. ಆದರೆ ಅಲ್ಲಿನ ಸನ್ನಿವೇಶ ಸಂಶೋಧನೆಯಲ್ಲಿ ಪಾತ್ರ ವಹಿಸುತ್ತದೆ. ಆಗ ಎರಡನೆಯ ಮಹಾಯುದ್ಧದ ಸಮಯ. ಶತ್ರು ವಿಮಾನಗಳ ಪತ್ತೆಗೆ ರಡಾರ್ ತುಂಬಾ ಸಹಕಾರಿಯಾಗಿದ್ದುದರಿಂದ ಅದರ ಮೇಲಿನ ಸಂಶೋಧನೆ ತ್ವರಿತವಾಗಿ ನಡೆಯುತ್ತಿತ್ತು. ಕ್ಯಾವಿಟಿ ಮಗ್ನೆಟ್ರಾನ್ (cavity magnetron) ತಂತ್ರಜ್ಞಾನದ ಮೂಲಕ ಕಡಿಮೆ ತರಂಗಾಂತರದ ವಿದ್ಯುತ್ಕಾಂತೀಯ ತರಂಗಗಳನ್ನು ಉತ್ಪಾದಿಸುವ ಬಗ್ಗೆ ಹುಡುಕಾಟ ನಡೆದಿತ್ತು. ಇಂಗ್ಲೆಂಡಿನ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಯಶಸ್ವಿಯಾದದ್ದು ಮಾತ್ರವಲ್ಲ ಈ ತರಂಗಗಳು ನೀರನ್ನು ಬಿಸಿ ಮಾಡುತ್ತದೆ ಎಂದು ಕಂಡುಕೊಂಡಿದ್ದರು. ಅವರು ಅರ್ಜುನನ ಹಾಗೆ ಗುರಿ ನಿಖರವಾಗಿ ಹಕ್ಕಿಯ ಕಣ್ಣು ಮಾತ್ರ ಕಾಣುವಂತೆ ಅವರಿಗೆ ರಡಾರ್ ಸಂಶೋಧನೆ ಮಾತ್ರ ಮುಖ್ಯವಾಗಿತ್ತು. 1945 ರಲ್ಲಿ ಅಮೆರಿಕಾದ ಇಂಜಿನಿಯರ್ ಪರ್ಸಿ ಸ್ಪೆನ್ಸರ್ ಇದೇ ಪ್ರಯೋಗ ಮಾಡುತ್ತಿದ್ದ. ಆತ ಕ್ಯಾವಿಟಿ ಮೆಗ್ನೆಟ್ರಾನ್ ಮೂಲಕ ಅಲೆಗಳನ್ನು ಉತ್ಪಾದಿಸಿದ. ಆತನ ಕಿಸೆಯಲ್ಲಿ ಮಗ ತರಲು ಹೇಳಿದ್ದ ಕ್ಯಾಡ್ಬರಿ ಚಾಕೊಲೇಟ್ ಇತ್ತು. ಪ್ರಯೋಗದ ವೇಳೆ ಕಿಸೆ ಮುಟ್ಟಿ ನೋಡಿದ ಚಾಕಲೇಟ್ ಕರಗಿ ನೀರಾಗಿತ್ತು. ಅಂದರೆ‌ ಅದು ಬಿಸಿಯಾಗಿತ್ತು. ಕೂಡಲೇ ಜೋಳದ ಕಾಳುಗಳನ್ನು ತರಿಸಿದ. ಪಾಪ್ ಕಾರ್ನ್ ರೆಡಿ ಆಯ್ತು. ಮೊಟ್ಟೆ ತರಿಸಿದ ನೀರು ಬೆಂಕಿ ಇಲ್ಲದೆ ಮೊಟ್ಟೆ ಬೇಯಿಸಿದ. ಆತ ರಡಾರ್ ಅನ್ನು ಮರೆತ. ಈ ಬಿಸಿ ಮಾಡುವಿಕೆಯ ಬೆನ್ನು ಹತ್ತಿ ಹೊರಟ. ನೀರು ಬೆಂಕಿ ಇಲ್ಲದೇ ಆಹಾರ ಬೇಯಿಸುವ ಒಲೆ ಕಂಡುಹಿಡಿದ. ಆಗ ಅದು 350 kg ತೂಕ ಮತ್ತು 6 ಅಡಿ ಎತ್ತರವಿತ್ತು. ಅದನ್ನು ಮೈಕ್ರೋವೇವ್ ಓವನ್ ಎಂದು ಕರೆದ. ಇದರ ಮೇಲೆ ತುಂಬಾ ಸುಧಾರಣೆಗಳಾಗಿವೆ. ಈಗ ನೋಡಿ 1' x 1' ಅಳತೆಯ ಚಿಕ್ಕ ಮೈಕ್ರೋವೇವ್ ಒಲೆ ನಿಮ್ಮ ಅಡುಗೆ ಮನೆ ಮೂಲೆಯಲ್ಲಿ ಸಣ್ಣಗೆ ತಣ್ಣಗೆ ಕುಳಿತಿರುತ್ತವೆ. ಇಂತಹ ಮೈಕ್ರೋವೇವ್ ಒಲೆಗಳ ಪೇಟೆಂಟ್ ಪರ್ಸಿ ಸ್ಪೆನ್ಸರ್ ಹೆಸರಿನಲ್ಲಿದೆ.

ಈ ವಿಕಿರಣಗಳು ರೇಡಿಯೋ ತರಂಗಗಳಿಗಿಂತ ತೀರ ಸಣ್ಣವು ಅಂದರೆ ಒಂದು ಮಿಲಿ ಮೀಟರ್ ನಿಂದ ಒಂದು ಮೀಟರ್ ತರಂಗಾಂತರವನ್ನು ಹೊಂದಿರುತ್ತವೆ. ಆದ್ದರಿಂದ ಇವುಗಳನ್ನು ಮೈಕ್ರೋವೇವ್ ಎಂದು ನಾಮಕರಣ ಮಾಡಿದರು.

ನಿಮ್ಮ ಮೈಕ್ರೋವೇವ್ ಒಲೆಯಲ್ಲಿ ಮುಖ್ಯವಾಗಿರುವುದು ಮೆಗ್ನೆಟ್ರಾನ್ (magnetron). ಇದಕ್ಕೆ ವಿದ್ಯುತ್ ಸಂಪರ್ಕ ಕೊಟ್ಟ ಕೂಡಲೇ ಈ ಮೆಗ್ನೆಟ್ರಾನ್ ಮೈಕ್ರೋವೇವ್ ಗಳನ್ನು ಉತ್ಪಾದನೆ ಮಾಡುತ್ತವೆ. ಇವು ಒಲೆಯ ಗೋಡೆಯ ಲೋಹದ ಫಲಕಕ್ಕೆ ಬಡಿದು ಪದೇ ಪದೇ ಪ್ರತಿಫಲನಗೊಳ್ಳುತ್ತವೆ. ಇವು ಆಹಾರದಲ್ಲಿರುವ ನೀರಿನ ಕಣಗಳನ್ನು ಇವುಗಳು ಬಡಿಯುತ್ತವೆ. ಆಗ ನೀರಿನಾಣುಗಳು ಕಂಪಿಸುತ್ತವೆ ತಿರುಗಿಸಲ್ಪಡುತ್ತವೆ. ಆಗ ಉಂಟಾಗುವ ಘರ್ಷಣೆಯಿಂದ ಶಾಖ ಉತ್ಪತ್ತಿಯಾಗುತ್ತದೆ. ಈ ಶಾಖ ಆಡುಗೆಯನ್ನು ಬೇಯಿಸುತ್ತದೆ. ಲೋಹಗಳು ಮೈಕ್ರೋವೇವ್ ಅಲೆಗಳಿಗೆ ಅಪಾರದರ್ಶಕ ಆದರೆ ಕಾಗದ, ಗಾಜು ಮತ್ತು ಪ್ಲಾಸ್ಟಿಕ್ ಗಳು ತಮ್ಮ ಮೂಲಕ ಹಾದು ಹೋಗಲು ಬಿಡುತ್ತದೆ ಅಂದರೆ ಪಾರದರ್ಶಕ. ಆದ್ದರಿಂದ ನಾವು ಅದೇ ಧಾರಕಗಳನ್ನು ಬಳಸುವುದು. ಆದರೆ ಲೋಹದ ಪಾತ್ರೆಗಳನ್ನು ಬಳಸಬಾರದು. ಮೊದಲನೆಯದು ಲೋಹ ಅಲೆಗಳಿಗೆ ಅಪಾರದರ್ಶಕ ಎರಡನೆಯದು ಅಲ್ಲಿ ವಿದ್ಯುತ್ ಕಿಡಿಗಳು ಉಂಟಾಗಬಹುದು. ನಿಮ್ಮ ಒಲೆಯಲ್ಲಿರುವ ತಿರುಗುವ ಪ್ಲೇಟ್ ಆಹಾರ ಸಮನಾಗಿ ಬೇಯುವ ಹಾಗೆ ಮಾಡುತ್ತದೆ.

ಈ ಮೈಕ್ರೋವೇವ್ ನ ಇನ್ನಿತರ ಬಳಕೆಗಳೆಂದರೆ:
1. ಟಿವಿ ಮತ್ತು ಟೆಲಿಫೋನ್ ಪ್ರಸಾರದಲ್ಲಿ.
2. ದೂರ ನಿಯಂತ್ರಣದಲ್ಲಿ ಕಾರಿನ ವೇಗ ನಿರ್ಧಾರ ಮತ್ತು ನೆಲದ ತೇವಾಂಶ ಅಳೆಯಲು.
3. ಕೈಗಾರಿಕಾ ಕ್ಷೇತ್ರದಲ್ಲಿ ಪ್ಲೈವುಡ್ ಒಣಗಿಸಲು ಮತ್ತು ಹದಗೊಳಿಸಲು, ರಬ್ಬರ್, ರಾಳಗಳನ್ನು (resins) ಒಣಗಿಸಲು, ಬ್ರೆಡ್ ಉಬ್ಬುವಂತೆ ಮಾಡಲು ಬಳಸುವರು. 

ಹೇಗಿದೆ ವಿದ್ಯುತ್ಕಾಂತೀಯ ತರಂಗಗಳೊಂದಿಗಿನ ನಿಮ್ಮ ಪಯಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article