ಪ್ರೀತಿಯ ಪುಸ್ತಕ : ಸಂಚಿಕೆ - 150
Friday, February 14, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 150
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ರುಕ್ಕುವಿಗೆ ಸೈಕಲ್ ಓಡಿಸುವ ಕನಸು.. ಅವಳ ಕನಸಿಗೆ ಪೂರಕವಾಗಿ ಶಾಲೆಯಲ್ಲಿ ಅವಳಿಗೆ ಸೈಕಲ್ ಸಿಗುತ್ತದೆ. ಓಡಿಸಲು ಬರುವುದಿಲ್ಲ. ದೂಡಿಕೊಂಡೇ ಮನೆಗೆ ತರುತ್ತಾಳೆ. ರಾತ್ರಿಯೆಲ್ಲಾ ತಾನು ಸೈಕಲ್ ಓಡಿಸುವ ಕನಸು ಕಾಣುತ್ತಾಳೆ. ಆದರೆ ಬೆಳಗ್ಗೆ ಎದ್ದು ನೋಡಿದರೆ ಅವಳ ತಮ್ಮ ಸೈಕಲ್ ಓಡಿಸುತ್ತಾ ಮಜಾ ಮಾಡುತ್ತಿದ್ದಾನೆ. ಅಮ್ಮನಿಗೆ ಹೇಳಿದರೆ ಅಮ್ಮನೂ ತಲೆಕೆಡಿಸಿಕೊಳ್ಳುವುದಿಲ್ಲ. ಪಾಪ ರುಕ್ಕು ನೋವಿನಿಂದ ಕಣ್ಣೀರು ಹಾಕುತ್ತಾಳೆ. ಹೆಣ್ಣು ಮಕ್ಕಳಿಗೆ ಸೈಕಲ್ ಓಡಿಸುವ ಆಸೆ ಇರಬಾರದೇ? ಹೀಗಿರಬೇಕಾದರೆ ಅವಳ ಗೆಳತಿ ಜಮೀಲಾ ಸುದ್ದಿ ತಿಳಿದು ರುಕ್ಕುವಿನ ಮನೆಗೆ ಬರುತ್ತಾಳೆ. ರುಕ್ಕುವಿನ ಕನಸಿಗೆ ಪ್ರೋತ್ಸಾಹ ತುಂಬುತ್ತಾಳೆ. ಆಮೇಲೆ ರುಕ್ಕು ಹೇಗೆ ಕಲಿತಳು? ಹೇಗೆ ಅವಳ ತಮ್ಮ ಸೈಕಲ್ ಬಿಟ್ಟುಕೊಟ್ಟ? ಚಂದದ ಕಥೆ. ಓದಿ ನೋಡಿ. ಗುಜ್ಜಾರಪ್ಪ ಅವರ ಚಿತ್ರಗಳೇ ಕಥೆ ಹೇಳುವ ಹಾಗೆ ಇದೆ. ಓದಿ ನೋಡಿ. ಹೆಣ್ಣು ಗಂಡಿನ ನಡುವಿನ ತಾರತಮ್ಯದ ಬಗ್ಗೆ ಯೋಚನೆ ಮಾಡಿ.
ಲೇಖಕರು: ವಾಣಿ ಪೆರಿಯೋಡಿ
ಚಿತ್ರಗಳು: ಬಿ.ಜಿ ಗುಜ್ಜಾರಪ್ಪ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್
ಬೆಲೆ: ರೂ.70/-
5-6 ತರಗತಿಯ ಮಕ್ಕಳು ಓದಬಹುದು; ಕಿರಿಯರಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************