-->
ಪ್ರೀತಿಯ ಪುಸ್ತಕ : ಸಂಚಿಕೆ - 143

ಪ್ರೀತಿಯ ಪುಸ್ತಕ : ಸಂಚಿಕೆ - 143

ಪ್ರೀತಿಯ ಪುಸ್ತಕ
ಸಂಚಿಕೆ - 143
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

         ಹಸಿರು ಕಿನ್ನರಿಯ ಜಲತರಂಗ್ 
ಪ್ರೀತಿಯ ಮಕ್ಕಳೇ... ಪರಿಸರದ ಬಗ್ಗೆ ಒಂದು ಹಾಸ್ಯ ನಾಟಕ ಇದು. ಅದೊಂದು ಕೆರೆ, ಅದರ ಪಕ್ಕ ಯಾರೂ ಹೋಗುವುದಿಲ್ಲ. ಅಲ್ಲಿ ಹಸಿರು ಬಣ್ಣದ ಬೆಳಕು ಚೆಲ್ಲುತ್ತಾ, ಜಲತರಂಗ್ ವಾದ್ಯ ನುಡಿಸುತ್ತಾ, ಕೆರೆಯ ಹತ್ತಿರ ಬರುವ ಮುಗ್ಧ ಜನರನ್ನು ವಶಪಡಿಸಿಕೊಳ್ಳುವ ಕಿನ್ನರಿ ಇದ್ದಾಳೆ ಎಂದು ಆ ಹಳ್ಳಿಯ ಜನರು ನಂಬಿದ್ದರು. ಆದರೆ ಕಾಸ್ಮಿ ಮತ್ತು ಫೈಜಾಬ್ ಹೆಸರಿನ ಮಕ್ಕಳು ಇದನ್ನು ಯಾಕೋ ನಂಬುವುದಿಲ್ಲ. ಈ ಕಿನ್ನರಿ ಬಗ್ಗೆ ಶೋಧನೆ ನಡೆಸುವ ಸಾಹಸದ ನಿರ್ಧಾರ ಮಾಡುತ್ತಾರೆ. ಹುಡುಕಿಕೊಂಡು ಹೋಗಿಯೇ ಬಿಡುತ್ತಾರೆ; ಸತ್ಯವನ್ನು ಕಂಡು ಹಿಡಿಯುತ್ತಾರೆ. ಅವರು ಕಂಡು ಕೊಂಡ ಸತ್ಯವನ್ನು ನೀವು ಓದಿ ತಿಳಿದುಕೊಳ್ಳಿ. ಪರಿಸರದ ರಕ್ಷಣೆಯ ಬಗೆಗಿನ ಸಂದೇಶವನ್ನು ಈ ರೂಪಕದಲ್ಲಿ ಹೆಣೆದಿದ್ದಾರೆ. ನಾಟಕ ಓದಿ, ಸ್ನೇಹಿತರೊಂದಿಗೆ ಸೇರಿ ಅಭಿನಯಿಸಿ. 
ಲೇಖಕರು: ಶಾಹಿದ್ ಅನ್ವರ್
ಚಿತ್ರಗಳು: ನೀಲೇಶ್ ಗೆಹ್ಲೋಟ್
ಅನುವಾದ: ಬೃಂದಾ ಎನ್. ರಾವ್ 
ಪ್ರಕಾಶಕರು: ಪ್ರಥಮ್ ಬುಕ್ಸ್ 
ಬೆಲೆ: ರೂ.90/-
ಪ್ರಥಮ್ ಪ್ರಕಾರ ಇದು 4ನೇ ಹಂತದ ಪುಸ್ತಕ. ಸುಲಭವಾಗಿ ಓದುವ ಸಾಮರ್ಥ್ಯವಿರುವ ಮಕ್ಕಳಿಗಾಗಿ; ವಿಶ್ವಾಸದಿಂದ ಓದಬಲ್ಲಂತಹ ದೊಡ್ಡ ಮಕ್ಕಳಿಗಾಗಿ 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article