ಮಕ್ಕಳ ಲೇಖನ : ದಸರಾ - ಬರಹ : ಸಿಂಧು ಜಿ ಭಟ್ ಕಲ್ಕಾರ್, 7ನೇ ತರಗತಿ
Friday, November 8, 2024
Edit
ಮಕ್ಕಳ ಲೇಖನ : ದಸರಾ
ಬರಹ : ಸಿಂಧು ಜಿ ಭಟ್ ಕಲ್ಕಾರ್
7ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನವರಾತ್ರಿ ಹಬ್ಬ ಕಳೆದ ಒಂದು ತಿಂಗಳಾದರೂ ಅದರ ನೆನಪು ಹಾಗೆ ಇದೆ. ದಸರಾ ಎಂದರೆ ಮಕ್ಕಳಿಗೆ ರಜೆಯ ಸಂಭ್ರಮ ಎಂದುಕೊಳ್ತೇವೆ. ಆದರೆ ಅದರ ಸಂಭ್ರಮವೇ ಬೇರೆ. ದಸರ ಎಂದರೆ ಒಂಬತ್ತು ದಿನಗಳಲ್ಲಿ ನವಶಕ್ತಿಯರನ್ನು ಆರಾಧಿಸಿ ಹತ್ತನೆಯ ದಿನ ವಿಜಯದಶಮಿ ಆಚರಿಸುವುದು ಎಂದರ್ಥ. ದಸರ ನಮ್ಮ ನಾಡ ಹಬ್ಬ. ಹಿಂದೆ ನಮ್ಮ ರಾಜರುಗಳ ಕಾಲದಲ್ಲಿ ಮೈಸೂರು ರಾಜರು ಶ್ರೀರಾಮಚಂದ್ರರ ವಿಜಯೊತ್ಸವದ ನೆನಪಿಗಾಗಿ ಆಚರಿಸುತ್ತಿದ್ದರಂತೆ. ಹಾಗೆಯೆ ಈ ಒಂಬತ್ತು ದಿನಗಳಲ್ಲಿ ನವಶಕ್ತಿಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿದೇವಿ, ಇವರನ್ನು ಒಂಬತ್ತು ದಿನಗಳಲ್ಲಿ ಪೂಜಿಸಿ ಆರಾಧಿಸುವುದೇ ನವರಾತ್ರಿ. ಆದರೆ ನನ್ನಂತ ಮಕ್ಕಳ ಪಾಲಿಗೆ ಹಬ್ಬ... ಪ್ರತಿದಿನ ಬೇರೆ ಬೇರೆ ಬಗೆಯ ತಿನಿಸುಗಳನ್ನು ಮಾಡಿ ನೈವೇದ್ಯ ಮಾಡಿ ಸವಿಯಲು ತುಂಬಾ ಇಷ್ಟ. ಶಾಲೆಗೆ ರಜೆಯಿರುವುದರಿಂದ ಅಮ್ಮನ ಬೆಳಗ್ಗೆಯ ತಿಂಡಿಯ ಸವಿಯೇ ಬೇರೆ.
ಮೈಸೂರು ದಸರಾ ಚೆಂದವಂತೆ. ನಾನಿನ್ನು ಹೊಗಿಲ್ಲ. ನವರಾತ್ರಿ ಸಮಯದಲ್ಲಿ ನಮ್ಮ ತುಳುನಾಡ ಪದ್ದತಿಯ ಹಾಗೆ ಸಿಂಹ, ಹುಲಿವೇಷ ಮನೆಮುಂದೆ ಬಂದು ಕುಣಿಯುವುದುಂಟು. ಮೂರ್ನಾಲ್ಕು ಜನರ ತಂಡ ಬರುವುದು. ನಾನಂತೂ ಹೆದರಿ ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ತೇನೆ. ತಮ್ಮನಿಗೂ ಹುಲಿ ವೇಷದ ಭಯ. ಆದರೆ ಅಮ್ಮ ಅಂದರು, ನಮ್ಮ ಸಂಸ್ಕೃತಿಯನ್ನು ಮರೆಯದಂತೆ ನೆನಪಿಸಲು ಆ ತಂಡದವರು ಕಷ್ಟಪಡುವರೆಂದು. ಹಿಂದೆ ಈ ರೀತಿಯಾಗಿ ವೇಷದರಿಸಿ ಬಂದು ಕುಣಿದು ಹಬ್ಬದ ಸಂಭ್ರಮ ಹೆಚ್ಚಿಸುತ್ತಿದ್ದರಂತೆ. ಅವರಿಗೆ ಚಿಕ್ಕ ಕಾಣಿಕೆ, ಕುಡಿಯಲು ಮಜ್ಜಿಗೆ ಕೊಟ್ಟು ಕಳುಹಿಸಿದರು.
ನವರಾತ್ರಿಯಲ್ಲಿ ನನಗೆ ಇಷ್ಟವಾಗುವ ದಿನ ಶಾರದಾಪೂಜೆ ದಿನ. ಆ ದಿನ ಮನೆಯಲ್ಲಿ ನನ್ನ ಒದುವ ಬೇಂಚ್ ಸ್ವಚ್ಚಗೊಳಿಸಿ ನನ್ನ ಓದುವ ಪುಸ್ತಕಗಳು ನಮ್ಮ ಗ್ರಂಥಗಳು ಶ್ರೀಮದ್ಬಗವದ್ಗೀತ, ಶ್ರೀರಾಮಾಯಣ, ಮಹಾಭಾರತ... ಹೀಗೆ ಎಲ್ಲವನ್ನು ಪೂಜೆಗಿರಿಸಿ ಭಕ್ತಿಯಿಂದ ಐದು ದಿನಗಳ ಕಾಲ ಅಂದರೆ ವಿಜಯದಶಮಿಯ ವರೆಗೂ ವಿಷೇಶ ಪೂಜೆ ಮಾಡುವುದು ನನಗೆ ತುಂಬಾ ಇಷ್ಟ. ಪ್ರತಿದಿನದ ಭಜನೆಯನ್ನು ಹೆಚ್ಚು ಮಾಡಿ ಅಮ್ಮನೂ ಸೇರಿ ಭಜನೆ ಹೇಳುವುದು. ಇದೆಲ್ಲ ತುಂಬಾ ಸುಂದರವಾದ ನವರಾತ್ರಿಯ ದಿನಗಳಲ್ಲಿ ಮಾತ್ರ ಸಾದ್ಯ.
7ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************