ಪ್ರೀತಿಯ ಪುಸ್ತಕ : ಸಂಚಿಕೆ - 136
Friday, November 8, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 136
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
(ಹವಾಮಾನ ಬದಲಾವಣೆಯ ಬಗ್ಗೆ ಮಕ್ಕಳ ಚಿಂತನೆ)
ಪ್ರೀತಿಯ ಮಕ್ಕಳೇ... ಭೂಮಿ ಸಕಲ ಜೀವರಾಶಿಗಳಿಗೆ ಮನೆ. ಅಂದರೆ ನಮ್ಮ ಎಲ್ಲರ ಮನೆ. ಆದರೆ ಇಂದು ನಮ್ಮ ಮನೆ ಸುರಕ್ಷಿತವಾಗಿಲ್ಲ. ಹವಾಮಾನ ಬಿಕ್ಕಟ್ಟಿನಿಂದಾಗಿ ಎಲ್ಲರಿಗು ತೊಂದರೆ ಆಗಿದೆ. ಈ ಪುಸ್ತಕದಲ್ಲಿ ಭಾರತದ ವಿವಿಧ ಪ್ರದೇಶದ ಮಕ್ಕಳು ಹವಾಮಾನ ಬದಲಾವಣೆಯಿಂದ ತಮ್ಮ ಬದುಕಿನ ಮೇಲೆ, ಸುತ್ತಲಿನ ಪರಿಸರದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ನೀವು ಕೂಡಾ ಇಂತಹ ಎಷ್ಟೋ ಪರಿಣಾಮಗಳನ್ನು ಈಗಾಗಲೇ ಗುರುತಿಸಿರಬಹುದು. ನಿಮ್ಮ ಮನೆಯ ಹಿರಿಯರು ಹೇಳುತ್ತಲೂ ಇರಬಹುದು. ವಿಶೇಷವೆಂದರೆ ಹದಿಮೂರು ಕಲಾವಿದರು ಅದ್ಭುತವಾದ ಮನಮುಟ್ಟುವಂತಹ ಚಿತ್ರಗಳನ್ನು ಬಿಡಿಸಿದ್ದಾರೆ. ಓದಿ.. ನೀವೂ ಕೂಡಾ ಇಂತಹ ವಿಚಾರ ಚರ್ಚೆ ಮಾಡಿ.
ಹೆಚ್ಚುವರಿ ಪಠ್ಯ: ರಾಧಾ ರಂಗರಾಜನ್
ಚಿತ್ರಗಳು: ಹದಿಮೂರು ಬೇರೆ ಬೇರೆ ಕಲಾವಿದರು ಚಿತ್ರ ಬಿಡಿಸಿದ್ದಾರೆ
ಅನುವಾದ: ಡಾ.ಕೆ. ಪುಟ್ಟಸ್ವಾಮಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.100/-
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************