-->
ಮಕ್ಕಳ ಕವನಗಳು : ಸಂಚಿಕೆ - 34 : 69ನೇ ಕನ್ನಡ ರಾಜ್ಯೋತ್ಸವದ ವಿಶೇಷ ಸಂಚಿಕೆ

ಮಕ್ಕಳ ಕವನಗಳು : ಸಂಚಿಕೆ - 34 : 69ನೇ ಕನ್ನಡ ರಾಜ್ಯೋತ್ಸವದ ವಿಶೇಷ ಸಂಚಿಕೆ

ಮಕ್ಕಳ ಕವನಗಳು : ಸಂಚಿಕೆ - 34
69ನೇ ಕನ್ನಡ ರಾಜ್ಯೋತ್ಸವದ
ವಿಶೇಷ ಸಂಚಿಕೆ
ಜಗಲಿಯ ಮಕ್ಕಳ ಸ್ವರಚಿತ ಕವನಗಳು

ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಧನ್ವಿತಾ ಕಾರಂತ್, 10ನೇ ತರಗತಿ
◾ ಪ್ರಾರ್ಥನಾ ಗೌಡ H D, 9ನೇ ತರಗತಿ
◾ ಭವಾನಿ ಬಸಪ್ಪ ಕೂರಗುಂದ, 9ನೇ ತರಗತಿ
◾ ಶ್ರೇಯಾ, 10ನೇ ತರಗತಿ

        

ಸಹ್ಯಾದ್ರಿ ಗಿರಿಗಳ ಸಾಲು ಸಾಲಲಿ
ಅಬ್ಬರಿಸುತಿಹ ಕಡಲ ತೀರದಿ
ತೆಂಗು ಅಡಿಕೆಯ ಹಸಿರ ಕೂಟದಿ
ಮೈದಳೆದು ನಿಂತಿಹ ನಮ್ಮ ನಾಡಿದು

ಮಲೆಯ ನಾಡಿನ ಹಸಿರ ಸಿರಿಯಲಿ
ಭೋರ್ಗರೆವ ಜಲಪಾತದಿಂದಲಿ
ಶ್ರೀಗಂಧ ತರುಗಳ ಘಮದ ಹೊನಲಲಿ
ಕಂಗೊಳಿಸುತಿಹ ನಮ್ಮ ನಾಡಿದು

ಸುಗಂಧ ತುಂಬಿದ ಸುಮ ಸಮೂಹದಿ
ಮೆರುಗು ನೀಡಿಹ ಗವಿಗಿರಿಗಳಲಿ
ಹಚ್ಚ ಹಸಿರಿನ ಭತ್ತ ಪೈರಲಿ
ಮೆರೆಯುತಿರುವ ನಮ್ಮ ನಾಡಿದು

ಜೀವನದಿಗಳ ಜಲದ ಸ್ರೋತದಿ
ಶೌರ್ಯ ಸಾರುವ ಬಯಲು ಸೀಮೆಯು
ವಿವಿಧ ಸಂಸ್ಕೃತಿ ಪರಂಪರೆಗಳು
ಹಸನುಗೊಂಡಿಹ ಕರು ನಾಡಿದು
............................................. ಧನ್ವಿತಾ ಕಾರಂತ್
10 ನೇ ತರಗತಿ
ಶ್ರೀ ಸತ್ಯಸಾಯಿ ಲೋಕಸೇವಾ 
ಪ್ರೌಢಶಾಲೆ ಅಳಿಕೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



ಯಾರಿವಳು ಕನ್ನಡಾಂಬೆ 
ಭಾರತಾಂಬೆಯ ಸುಪುತ್ರಿ ಇವಳು 
 ಬೀದರ್ ಎಂಬ ಬಿಂಕ ಇವಳಿಗೆ  
ತುಮುಕೂರು ಎಂಬ ತಲೆಯಲ್ಲಿ 
ಕೋಲಾರದ ಚಿನ್ನದ ಕಿರೀಟ ಧರಿಸಿರಲು
ಮೈಸೂರ ಮಲ್ಲಿಗೆ ಮುಡಿದಿರಲು 
ಮಂಗಳೂರು ಮನೆಯಲ್ಲಿ ನೆಲೆಸಿರಲು
ಚಿಕ್ಕಮಗಳೂರಿನಂತೆ ಚಂಚಲೆ ಇವಳು 
ಯಾರಿವಳು ಕನ್ನಡಾಂಬೆ 
 ಕಣ್ಣಿಗೆ ಕೊಡಗಿನ ಕಾಡಿಗೆ ಹಚ್ಚಿರಲು 
ಬೆಂಗಳೂರು ಎಂಬ ಬೆಡಗಿ ಇವಳು 
ಗುಲ್ಬರ್ಗ ದಂತಹ ಗುಲಗಂಜಿ ಕಣ್ಣವಳು 
 ಯಾರಿವಳು ಕನ್ನಡಾಂಬೆ            
ರಾಯಚೂರಿನ ರಂಬೆಯಂತಿರಲು 
ಬಳ್ಳಾರಿಯಂತ ಬಣ್ಣ ಇವಳಿಗೆ 
ಮಂಡ್ಯದಂಥ ಮೂಗು ಇವಳಿಗೆ 
ಯಾರಿವಳು ಕನ್ನಡಾಂಬೆ 
 ಚಿಕ್ಕಬಳ್ಳಾಪುರದ ಛತ್ರಿಯ ಹಿಡಿದಿರಲು 
ಹುಬ್ಬಳ್ಳಿಯ ಹುಬ್ಬು ಇವಳಿಗೆ 
ಧಾರವಾಡದ ದಾರಿಯಲ್ಲಿ ನಿಂತಿರಲು 
ಗದಗ ಎಂಬ ಗತ್ತಿನಲ್ಲಿ 
ಯಾರಿವಳು ಕನ್ನಡಾಂಬೆ.
.................................. ಪ್ರಾರ್ಥನಾ ಗೌಡ H D
9ನೇ ತರಗತಿ                            
ಮುರಾರ್ಜಿ ದೇಸಾಯಿ ವಸತಿ ಶಾಲೆ 
ಬ್ಯಾಕರವಳ್ಳಿ, ಸಕ್ಲೇಶಪುರ, ಹಾಸನ ಜಿಲ್ಲೆ
******************************************


 
ನಮ್ಮ ಕರುನಾಡು
ರಸ ಋಷಿಗಳ ಬಿಡು
ಇದುವೇ ಕನ್ನಡಿಗರ ನಾಡು

ಜಾತಿ ಮತವ ಮೀರಿ
ನೀನಾಗು ಕನ್ನಡದ ಸಿರಿ
ಐಕ್ಯತೆಯನ್ನೆಲ್ಲೆಡೆ ಸಾರಿ

ಅವಳ ಮಡಿಲದು ಹಸಿರು
ಸುರಿಸು ಶಾಂತಿಯ ಬೆವರು
ಉಳಿಸು ಕನ್ನಡಮ್ಮನ ಹೆಸರು

ಸರ್ಕಾರದಿಂದಲೇ ಕನ್ನಡಕ್ಕೆ ಸನ್ಮಾನ
ಕನ್ನಡಿಗರ ಜೀವನವೇ ಪಾವನ
ಕನ್ನಡ ತಾಯಿಗೆ ಕೋಟಿ ಕೋಟಿ ನಮನ
......................... ಭವಾನಿ ಬಸಪ್ಪ ಕೂರಗುಂದ
9ನೇ ತರಗತಿ
ಶ್ರೀ ಬೀರೇಶ್ವರ ಪ್ರೌಢಶಾಲೆ ಮೇಲೇರಿ
******************************************


ಹಚ್ಚ ಹಸಿರಿನ ಸುಭದ್ರ ನಾಡಿನಲಿ
ಶುದ್ಧ ಕನ್ನಡದ ಕವಿತೆಗಳ ತವರಲಿ
ಕನ್ನಡ ಪ್ರೇಮವ ಹರಿಸು ಜನರ ಮನದಲಿ
ನೀ ಬಾರಿಸು ಕನ್ನಡ ಡಿಂಡಿಮವ

ಶಿವರಾಮ ಕಾರಂತರ ಗಾಂಭೀರ್ಯದಲಿ
ಕುವೆಂಪುರವರ ಸರಳತೆಯಲಿ
ಕನ್ನಡ ಸಾಹಿತಿಗಳ ವೀರ ಸೈನ್ಯದಲಿ
ನೀ ಬಾರಿಸು ಕನ್ನಡ ಡಿಂಡಿಮವ

ಕನ್ನಡಕ್ಕಾಗಿ ಪ್ರಾಣವ ತೊರೆದ ಯೋಧರಲಿ
ಕನ್ನಡ ಮಣ್ಣಿನಲಿ ದುಡಿವ ರೈತರಲಿ
ಕಲೆ, ಸಂಸ್ಕೃತಿ ಭಾಷೆಗಳ ಗೂಡಿನಲಿ
ನೀ ಬಾರಿಸು ಕನ್ನಡ ಡಿಂಡಿಮವ
................................................ ಶ್ರೇಯಾ 
10ನೇ ತರಗತಿ
ಕೋಟ ವಿವೇಕ ಹೈಸ್ಕೂಲ್
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
****************************************



Ads on article

Advertise in articles 1

advertising articles 2

Advertise under the article