ಪ್ರೀತಿಯ ಪುಸ್ತಕ : ಸಂಚಿಕೆ - 135
Friday, November 1, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 135
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ತಿಂಡಿ ಜೊತೆಗೆ ಆಟ ಆಡುವ ಅಭ್ಯಾಸ ನಿಮಗೆ ಇದೆಯೇ? ಕೆಲವರು ಅನ್ನದ ಮೇಲೆ ಅಕ್ಷರ ಬರೀತಾರೆ, ಕೆಲವರು ಚಪಾತಿಗೆ ಏನೇನೋ ಆಕಾರ ಕೊಡುತ್ತಾರೆ. ಇರಲಿ, ಈ ಪುಸ್ತಕದಲ್ಲಿ ಇರುವ ಪುಟ್ಟ ಹುಡುಗಿ ಉಮಾಗೆ ಮಾತ್ರ ತಿಂಡಿ ಅಂದರೆ ಆಟದ ವಸ್ತು. ಏನು ಕೊಟ್ಟರೂ ಅವಳು ಅದರಲ್ಲಿ ಒಂದು ಆಟ ಆಡುತ್ತಾಳೆ. ವಡಾ ಕೊಟ್ಟರೆ ಉಂಗುರ ಮಾಡಿಕೊಳ್ಳುತ್ತಾಳೆ. ಹೀಗಿದ್ದರೂ ಕೊನೆಯಲ್ಲಿ ಉಮಾ ಆಟ ಆಡೋದು ನಿಲ್ಲಿಸಿ ರುಚಿರುಚಿಯಾಗಿ ತಿನ್ನುವ ಹಾಗೆ ಆಗುತ್ತದೆ. ಅದು ಹೇಗೆ ಅಂತ ತಿಳಿಯಲು ಮಜ ಮಜಾ ಚಿತ್ರಗಳಿರುವ ಈ ಪುಸ್ತಕ ಓದಿ..
ಲೇಖಕರು: ಮೀರಾ ಗಣಪತಿ
ಚಿತ್ರಗಳು: ರೇಣುಕಾ ರಾಜೀವ್
ಅನುವಾದ: ಸೋಮಶೇಖರ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.75/-
ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************