ಪ್ರೀತಿಯ ಪುಸ್ತಕ : ಸಂಚಿಕೆ - 138
Friday, November 22, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 138
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಕನಸು ಕಾಣುತ್ತಾ ಅದರ ಬೆನ್ನು ಹತ್ತುತ್ತಾ ಸಾಧನೆ ಮಾಡಿದ ಉಷಾ ಅವರ ಕಥೆ ಇದು. ಹೆಸರೇ ಎಷ್ಟು ಚೆನ್ನಾಗಿದೆ. ರಾಕ್ ಸ್ಟಾರ್ ಅಂದರೆ ಎಂತಹ ಉಡುಗೆ ತೊಡುಗೆ ನೆನಪಾಗುತ್ತದೆ.? ಉಷಾ ರಾಕ್ ಸ್ಟಾರೇ ಆಗಿ ಬೆಳೆದವರು, ಹೆಸರುವಾಸಿಯಾದವರು. ಆದರೆ ಅವರು ಸೀರೆಧಾರಿ ರಾಕ್ ಸ್ಟಾರ್. ಚಿಕ್ಕಂದಿನಿಂದಲೂ ಹಾಡುವ ಕನಸು. ಅವರ ಸ್ವರಕ್ಕೆ ಮೊದಮೊದಲ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ. ಉಷಾ ಉತ್ತುಪ್ ಹಿಂಜರಿಯಲಿಲ್ಲ. ಹಾಡುತ್ತಲೇ ಹೋದರು. ವಿವಿಧ ಭಾಷೆಗಳಲ್ಲಿ ಹಾಡಿದರು. ಸಂಗೀತ ಜಗತ್ತಿನಲ್ಲಿ ಖ್ಯಾತಿ ಪಡೆದರು. ನಿಜಕ್ಕೂ ಖುಶಿ ಅನಿಸುತ್ತದೆ. ಓದಿ ನೋಡಿ. ಮಾತ್ರವಲ್ಲ, ನಿಮ್ಮ ಕನಸುಗಳನ್ನು ಗುರುತಿಸಿಕೊಳ್ಳಿ.. ಬೆಂಬತ್ತಿ ಹೋಗಿ..
ಲೇಖಕರು: ಪರ್ಲ್ ಡಿಸಿಲ್ವಾ
ಚಿತ್ರಗಳು: ವಸುಂಧರಾ ಅರೋರ
ಅನುವಾದ: ಎಂ.ಡಿ. ಪಲ್ಲವಿ
ಪ್ರಕಾಶಕರು: ಬಹುರೂಪಿ
ಬೆಲೆ: ರೂ.160/-
4-5ನೇ ತರಗತಿಯ ಮಕ್ಕಳು ತಾವಾಗಿಯೇ ಓದಿಕೊಳ್ಳಬಹುದು. ಚಿಕ್ಕ ದೊಡ್ಡ ಎಲ್ಲಾ ಮಕ್ಕಳು ಓದಿಕೊಳ್ಳುವ ಹಾಗೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: Bahuroopi, Fire Flies; whatsapp bookstore – 7019182729; online bookstore – bahuroopi.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************