-->
ಮಕ್ಕಳ ಕವನಗಳು : ಸಂಚಿಕೆ - 35 - ಕವನ ರಚನೆ : ಬಾಲಕೃಷ್ಣ ಬಿ, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 35 - ಕವನ ರಚನೆ : ಬಾಲಕೃಷ್ಣ ಬಿ, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 35
ಕವನ ರಚನೆ : ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

            ಮೌನ

ಮೌನವನ್ನು ಬೆಳೆಸಿಕೊ 
ನಗುವನ್ನು ಸೃಷ್ಟಿಸಿಕೊ 
ಜಗತ್ತಿನ ಸಮೃದ್ಧ ಭಾಷೆ ಮೌನ
ಅದರೊಂದಿಗೆ ಸ್ವಲ್ಪ ಹಂಚಿಕೋ ನಗುವನ್ನ
ಮಾತು ಬೆಳ್ಳಿಯಾಗಿದೆ 
ಮೌನ ಬಂಗಾರವಾಗಿದೆ 
ಇವೆರಡನ್ನೂ ಸ್ವೀಕರಿಸಿ 
ರೂಪಿಸಿಕೋ ನಿನ್ನ ಜೀವನಾನ...
ನಗಿಸುತ್ತಾ ಇರು ನಗುತ್ತ ಇರು 
ಆದರೆ ಒಂಟಿಯಾಗಿದ್ದಾಗ ಮೌನಿಯಾಗಿರು 
ಮೌನಂ ಸಮ್ಮತಿ ಲಕ್ಷಣಂ 
ಎಂದು ತಿಳಿದು ಇರು
ನಗು ಆರೋಗ್ಯಕ್ಕೆ ಉತ್ತಮ 
ಎಂದು ಅರಿತು ಇರು 
ನಿನ್ನ ಜೀವನದಲ್ಲಿ ಇವೆರಡನ್ನು 
ಸ್ವೀಕರಿಸಿ ಬಿಡು ನಿನ್ನ ಜೀವನದ 
ಪಯಣವನ್ನು 
ಸಾಗಿಸುತ್ತಾ ಇರು...
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

              ಸಾಧನೆ

ತಲೆ ಬಾಗಿಸಿ ಎಲ್ಲರ ಎದುರು ನಿಂತೆ 
ತಲೆ ಎತ್ತಿ ನಿಲ್ಲು ಎಂದು 
ಹೇಳಿದ್ದನ್ನು ನೆನಪಿಸಿಕೊಂಡೆ 
ವೇದಿಕೆ ಮುಂದೆ ಹೋದೆ
ದೈರ್ಯವಂತನಾದೆ 
ಅವಕಾಶಗಳನ್ನು ಅಲಕ್ಷಿಸದೆ 
ಮುಂದೆ ಹೋದೆ
ವೇದಿಕೆ ಮುಂದೆ ಹೋಗಿ 
ಹೆಸರುಗಳಿಸುವಂತನಾದೆ
ನೃತ್ಯ ಮಾಡಿದೆ, ಹಾಡು ಹಾಡಿದೆ 
ವೇಷಗಳನ್ನು ಧಾರಣೆ ಮಾಡಿದೆ
ಕುಣಿಯುತ್ತಾ ನಲಿಯುತ್ತ 
ನನ್ನ ಪ್ರತಿಭೆಯನ್ನು ತೋರಿಸಿದೆ 
ಪ್ರಯತ್ನ ಮಾಡಿದೆ  
ಧೈರ್ಯವನ್ನು ತಂದುಕೊಂಡೆ 
ಕೊನೆಗೆ ಸಾಧಿಸಿದೆ ಹೆಸರನ್ನು ಗಳಿಸಿದೆ 
ಕೊನೆಗೆ ಎಲ್ಲರ ಹಾರೈಕೆಯ 
ಪ್ರತಿಭಾವಂತ ವ್ಯಕ್ತಿಯಾದೆ....!!       
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ಇಂದು - ನಾಳೆ

ನಾಳೆ ಎಂಬುದು ಕಲ್ಪನೆ 
ಇವತ್ತು ಬದುಕು ನೀ ಸುಮ್ಮನೆ 
ಇವತ್ತು ಸಂಭ್ರಮಿಸು ಎಲ್ಲರ ಜೊತೆ 
ನಾಳೆ ಎಂಬುದು ಬರದೇ ಇರಬಹುದು ಜಾಗೃತೆ 
ಹಳೆ ನೆನಪುಗಳುದುರಲಿ ಬಿಡು
ಬೀಸುವ ಗಾಳಿಗೆ 
ಹೊಸತನವನ್ನು ಸೃಷ್ಟಿಸಿಕೊ 
ನಿನ್ನನ್ನು ಪ್ರೀತಿಸುವ ಜನಗಳಿಗೆ 
ನಾಳೆ ಎಂದು ಕೂತರೆ 
ಆ ನಾಳೆಯೇ ನೀನು ಕಣ್ಣು ಮುಚ್ಚಿಕೊಂಡರೆ 
ಬಿಟ್ಟು ಬಿಡು ಆ ನಾಳೆ ಎಂಬುವ ಶಬ್ದವನ್ನ 
ಅನುಸರಿಸು ಇವತ್ತು ಎಂಬ ದಿನವನ್ನ
ನಾಳೆ ಎಂಬುದು ಜೀವನದಲ್ಲಿ 
ಕಾಲ್ಪನಿಕವಾಗಿಯೇ ಇರಲಿ 
ಇವತ್ತು ಎಂಬುದು ಬದುಕಿನಲ್ಲಿ 
ಶಾಶ್ವತವಾಗಿರಲಿ
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
          
         ಪ್ರಕೃತಿ 

ಆಕಾಶದ ಮೋಡ ಕರಗಿತು 
ನಾ ಬರೆಯುತ್ತಿರುವ ವೇಳೆಗೆ 
ಹನಿ ಹನಿಯಾಗಿ ಹರಿಯ ತೊಡಗಿತು 
ಮಳೆರಾಯನ ಮಳೆಗೆ 
ಚಳಿ ಚಳಿಯಾಗತೊಡಗಿತು
ಚಳಿರಾಯನ ತಂಪಿಗೆ 
ಬಿಸಿ ಬಿಸಿ ಯಾಗತೊಡಗಿತು 
ಬೇಸಿಗೆ ರಾಯನ ಬೇಸಿಗೆಗೆ 
ಮಂದಹಾಸ ಉಂಟಾಯಿತು 
ನಾ ಕಳೆದ ಸಮಯಗಳಿಗೆ 
ದುಃಖದ ಭಾವನೆ ಉಂಟಾಯಿತು 
ನಾ ನಂಬಿದ ಜನಗಳಿಂದಲೇ 
ಸಂತೋಷದ ಸಮಯವೂ ಬರಲು ತೊಡಗಿತು
ಎನ್ನ ಗೆಳತಿ ಕಾಲ್ಗುಣಕ್ಕೆ
ಯಶಸ್ಸಿನಂತಾಗಿಬಿಟ್ಟೆ 
ನನ್ನ ಗುರುಗಳ ಆಶೀರ್ವಾದಕ್ಕೆ 
ಜೀವನ ಸಾಗತೊಡಗಿತು 
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ಒಂಟಿ ತನಕ

ಒಂಟಿಯಾಗಿರುವೇ ಎಂದು 
ನೀ ಕುಗ್ಗ ಬೇಡವೋ ಗೆಳೆಯ
ಬಂದೆ ಬರುವುದು ಒಂದು ದಿನ 
ನೀನು ಸಾಧಿಸಿ ತೋರಿಸು 
ನಿನ್ನನ್ನು ಅವಮಾನ ಮಾಡಿದ 
ವ್ಯಕ್ತಿಗಳು ನಿನ್ನ ಸಂಗಡ
ಬರುವುದಂತೂ ಆ ದಿನ
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ಯೋಧ

ಮನೆಯನ್ನು ಬಿಟ್ಟು ಹೋದೆ 
ದೇಶವನ್ನು ಕಾಯಲು ಹೋದೆ 
ನಿನ್ನ ಪ್ರಾಣವನ್ನು ಲೆಕ್ಕಿಸದೆ 
ಗಡಿ ಕಾಯಲು ನಿಂತೆ 
ಪತ್ನಿ ಮಕ್ಕಳು ಎಂದು ಅರಿಯದೆ 
ದೇಶದ ಮಾತಿಗೆ ದೇಶದ ಜನರಿಗೆ 
ಕಾವಲುಗಾರನಾಗಿ ನಿಂತು ಬಿಟ್ಟೆ 
ಕೊನೆಗೆ ದೇಶಕೋಸ್ಕರ 
ನಿನ್ನ ಪ್ರಾಣವನ್ನೇ ಬಲಿ ಕೊಟ್ಟೆ 
ಭಾರತ ಭೂಮಿಯ ಮಗನೆಂಬ 
ಯೋಧನೆಂಬ ಹೆಮ್ಮೆಯ ಹೆಗ್ಗಳಿಕೆಯನ್ನು 
ಪ್ರಾಪ್ತಿ ಮಾಡಿಕೊಂಡೆ 
ಕೊನೆಗೆ ಸ್ವರ್ಗಲೋಕಕ್ಕೆ ನೆಮ್ಮದಿಯಾಗಿ 
ನಿನ್ನ ಪಯಣದ ಕೊನೆಯಾಗಿ
ಹೇ ಯೋಧ ನಿನಗೆ ನನ್ನ
ಸಾಷ್ಟಾಂಗ ನಮಸ್ಕಾರ....!!
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ಕಥಾ ನಾಯಕ ನೀನಲ್ಲ 
ಜೀವನ ನಾಯಕನಾದೆನಲ್ಲ
ಪ್ರೀತಿಗೆ ತಕ್ಕ ವ್ಯಕ್ತಿಯಲ್ಲ 
ಆದರೆ ನಿಸ್ವಾರ್ಥ ಪ್ರೀತಿಯನ್ನು ಕೊಟ್ಟೆಯಲ್ಲ 
ಆಸೆಗಳನ್ನು ಹೊತ್ತು ಸಾಗುತಿದ್ದೆ 
ನಿರಾಸೆಯೂ ನಿನಗೆ ಉಂಟಾಯಿತಲ್ಲ
ಜೀವನದಲ್ಲಿ ಅಹಂಕಾರವನ್ನು 
ಇಟ್ಟುಕೊಂಡೆಯಲ್ಲ 
ಅದೇ ಅಹಂಕಾರ ಕಪ್ಪು ಚುಕ್ಕಿ ಆಯ್ತಲ್ಲ 
ಕೊನೆಗೂ ಜೀವನ ಏನು 
ಎಂದು ನಿನಗೆ ಅರ್ಥವಾಯ್ತಲ್ಲ..!!
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ಪ್ರಕೃತಿ

ನಾ ಕೇಳಿದೆ ಕೋಗಿಲೆಯ ಹಾಡನ್ನ
ನೋಡು ಅದರ ಇಂಪಾದ ಗಾನವನ್ನ
ಮನಸ್ಸುಗಳಾದವು ಗುಲಾಬಿಯನ್ನ
ನೋಡಲು ಅದರ ಚಂದವನ್ನ
ಹಕ್ಕಿಗಳ ಚಿಲಿಪಿಲಿ ನಾದರಸ
ಅದನ್ನು ನೋಡಿ ಆಯ್ತು 
ಎನ್ನ ಮನ ಮಂದಹಾಸ 
ಚಾ ಕುಡಿಯುತ್ತಾ ಇದ್ದೆ 
ಹನಿಹನಿಯಾಗಿ ಮಳೆ ಬರುವುದನ್ನ 
ನಾ ನೋಡುತ್ತಾ ಎದ್ದೆ 
ತಂಪು ತಂಪಾದ ಭಾವನೆ 
ಎನ್ನ ಮನದೊಳಗೆ ಹಾದು ಹೋಯಿತು 
ಪ್ರಕೃತಿಯ ರಸಭಾವನೆಯನ್ನು ನೋಡಿ 
ನನಗೆ ಖುಷಿಯಾಯಿತು 
ಆಹಾ! ಓಹೋ!
ಪ್ರಕೃತಿಯನ್ನು ಕಂಡು 
ಎನ್ನ ಮನ ಪ್ರಸನ್ನವಾಯಿತು 
ಪ್ರಕೃತಿಯೊಳು ಎಂಥ ಅಂದವನ್ನು 
ನಾ ಕಂಡು ಮನ ಬೆರಗಾಯಿತು
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ಪ್ರಕೃತಿಯ ಸೌಂದರ್ಯ

ಹಸಿರೆಲೆಗಳ ತಾಣದಲ್ಲಿ 
ಕಂಗಳಿಸೋ ಗಿಡ ಮರಗಳು 
ನಿಸರ್ಗದ ನಿಗೂಢತೆಯನ್ನು 
ಕಂಡು ಬೆರಗಾದ ವಿಸ್ಮಯ 
ಸಮಯಗಳು 
ಅಳಿಸಲಾಗದ ದೃಶ್ಯ ಪ್ರಕೃತಿ 
ಎಂದು ಅರಿತ ಮನುಜರು
ತನು ಮನಗಳ ಸಂಪರ್ಕ
ಸಾಧಿಸುವ ಪ್ರಕೃತಿಯಲ್ಲಿ 
ಮನೋಹರ ವಯ್ಯಾರದ ದೃಶ್ಯಗಳು 
ಹನಿ ಹನಿಯಾಗಿ ಹರಿಯುತ್ತಿರುವ
ಮಳೆ ಹನಿಯ ಮುತ್ತುಗಳು
ತಂಪು ತಂಪಾದ ವಾತಾವರಣದಲ್ಲಿ
ಪ್ರಕೃತಿಯ ಸೌಂದರ್ಯಗಳು 
ಹಸಿ ಹಸಿರಾದ ಗಿಡಮರಗಳೆಷ್ಟೋ
ರುಚಿ ರುಚಿಯಾದ ಹಣ್ಣುಗಳೆಷ್ಟೋ
ಇವುಗಳನ್ನು ಸವಿಯಲು 
ಪ್ರಾಣಿ ಪಕ್ಷಿಗಳೆಷ್ಟೋ
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ಜೀವನದಲ್ಲಿ ತಾಳ್ಮೆಯನ್ನು ಇಟ್ಟುಕೊಂಡರೆ 
ಮನವನ್ನೇ ಗೆದ್ದಂತೆ 
ವಿನಯವನ್ನು ಇಟ್ಟುಕೊಂಡರೆ 
ಲೋಕವನ್ನೇ ಗೆದ್ದಂತೆ 
ಹಾಗೆಯೇ ಬುದ್ದಿಯನ್ನು ಬಳಸಿಕೊಂಡರೆ 
ಜ್ಞಾನವನ್ನೇ ಪಡೆದುಕೊಂಡಂತೆ 
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ಪ್ರಕೃತಿ ಮಾತೆ 

ಹೇ! ಪ್ರಕೃತಿ ಮಾತೆ 
ನೀನೆಷ್ಟು ಚಂದ ಅಲ್ವಾ..
ಭೂತಾಯಿಯ ಮಡಿಲಲ್ಲಿ 
ಪ್ರಕೃತಿ ಎಂಬ ದೇವಿ ನೀನು
ಸುಂದರವಾದ ಬನದಂಚಲಿ
ನಿನ್ನೀ ಅಮೋಘ ದೃಶ್ಯಗಳ 
ಕಂಡಿರುವೆ ನಾನು
ಬನಗಳ ಬೀಡು ನಿನ್ನದು
ಜನಗಳ ನಾಡು ನಿನ್ನದು 
ಮಾತೆಯ ರೂಪಿ ನೀನು 
ನಿನ್ನ ಮಕ್ಕಳಾಗಿರುವೆವು ನಾವು 
ಹೇ! ಪ್ರಕೃತಿ ಮಾತೆ 
ನೀನೆಷ್ಟು ಚಂದ ಅಲ್ವಾ..
ಕಾರ್ಮೋಡ ಕರಗಿ
ಹನಿ ಹನಿಯಾಗಿ ಸುರಿಸುತ್ತಿರುವೆ ನೀನು
ಹಸಿರೆಲೆಗಳು ಬಿಗಿದಪ್ಪಿರುವುದನ್ನು 
ಕಂಡಿರುವೆ ನಾನು
ತುಂತುರು ಮಳೆಯಾಗಿ ಬರುವೆ ನೀನು
ತಂಪಿನ ಖುಷಿಯನ್ನು ತರುವೆ ನೀನು
ಕಾಂತಾರದಲ್ಲಿ ಪ್ರಾಣಿ ಪಕ್ಷಿಗಳ ಕೂಗನ್ನು 
ಕೇಳಲು ಬಯಸುವೆ ನಾನು
ಆದರೆ ಕಾಂತಾರವನ್ನು ನಶಿಸುತ್ತಿದೇವೆ ನಾವು 
ಸೂರ್ಯನಂತೆ ದಿನಹೊತ್ತವಳು ನೀನು
ಸೂರ್ಯಕಾಂತಿಯಾಗಿ ನಿನ್ನಿಂದ 
ಬದುಕುತ್ತಿರುವೆವು ನಾವು 
ಹೇ ಪ್ರಕೃತಿ ಮಾತೆ 
ನೀನೆಷ್ಟು ಚಂದ ಅಲ್ವಾ!
ಹಸಿದಿರುವಾಗ ಹಣ್ಣು ಹಂಪಲು ಕೊಟ್ಟಿರುವೆ 
ಉಸಿರಾಡಲು ಮರ ಗಿಡಗಳ ನಡುವೆ ಉಸಿರಾಗಿರುವೆ 
ಮನೋಹರವಾದ ಸೌಂದರ್ಯ ಹೊಂದಿರುವೆ 
ನಾವೇ ನಿನ್ನ ಮಕ್ಕಳು 
ಎಂದು ನೀನು ನಿರೂಪಿಸಿರುವೆ 
ಆಹಾ! ಓಹೋ! ಪ್ರಕೃತಿ ಮಾತೆ 
ನೀನೆಷ್ಟು ಚಂದ ಅಲ್ವಾ!
............................................ ಬಾಲಕೃಷ್ಣ ಬಿ
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article