ಮಕ್ಕಳ ಕವನಗಳು : ಸಂಚಿಕೆ - 32: ಜಗಲಿಯ ಮಕ್ಕಳ ಸ್ವರಚಿತ ಕವನಗಳು
Wednesday, October 16, 2024
Edit
ಮಕ್ಕಳ ಕವನಗಳು : ಸಂಚಿಕೆ - 32
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಕೆ ಧರಿತ್ರಿ ಭಟ್, 9ನೇ ತರಗತಿ
◾ ಧನ್ವಿ, 6ನೇ ತರಗತಿ
◾ ರಕ್ಷಿತಾ, 9ನೇ ತರಗತಿ
◾ ಗೀತಾ ಮ ಕೂನವೇವು, 9ನೇ ತರಗತಿ
◾ ಚಂದ್ರಿಕಾ ಮಾ ಕಂಬಳಿ, 9ನೇ ತರಗತಿ
◾ ಮಾಳವ್ವ ದಿ ಕಂಬಳಿ, 9ನೇ ತರಗತಿ
◾ ಧನ್ವಿನ್ ಮೇಸ್ತ, 6ನೇ ತರಗತಿ
◾ ಕುಮಾರಿ ಪ್ರಾಕ್ಷಿ ಶೆಟ್ಟಿ, 10ನೇ ತರಗತಿ
◾ ದೀಪಾ.ಮಲ್ಲಪ್ಪ.ಜಾಗಟಿ, 9ನೇ ತರಗತಿ
ವಿಕಸಿತ ಭಾರತ ಕಟ್ಟೋಣ
ಸರ್ವರ ಪ್ರಗತಿಯ ಬಯಸುವ ನಾವು
ಬಡವರ ಏಳಿಗೆ ಬಯಸೋಣ
ಮಾತೃ ಶಕ್ತಿಯೇ ವಿಶ್ವಶಕ್ತಿಯು
ಸ್ರೀ ಸಮಾನತೆ ಕಾಯೋಣ
ಯುವಕರೆ ದೇಶದ ಭದ್ರಬುನಾದಿ
ಯುವ ಜನತೆಯ ಬಲಗೊಳಿಸೋಣ
ರೈತನೆ ದೇಶದ ಬೆನ್ನೆಲುಬು
ಅನ್ನದಾತನ ಸುಖ ಬಯಸೋಣ
ದೇಶ ರಕ್ಷಣೆಯ ಕಂಕಣ ತೊಟ್ಟಿಹ
ಸೈನಿಕರಿಗೆ ಶಿರಬಾಗೋಣ
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು
ಸಾಕ್ಷರ ಭಾರತ ರಚಿಸೋಣ
ಆರ್ಥಿಕ ಸದೃಢ ಭಾರತವಾಗಲು
ಕಾರ್ಯ ಕ್ಷಮತೆಯ ಗುಣ ಬೆಳೆಸೋಣ
ಇತಿಹಾಸ ಸಂಸ್ಕೃತಿ ಉತ್ಕೃಷ್ಟಗೊಳಿಸುವ
ಕೌಶಲ ಕಲೆಗಳ ಸಂರಕ್ಷಿಸೋಣ
ಸಂಗೀತ ನೃತ್ಯ ಶಿಲ್ಪಕಲೆಗಳ
ಪ್ರಗತಿಗೆ ಅವಿರತ ಶ್ರಮಿಸೋಣ
ಚಂದ್ರಯಾನದ ಸಾರ್ಥಕ ಕ್ಷಣಗಳ
ಅನುದಿನ ನಾವು ಸ್ಮರಿಸೋಣ
ಸೂರ್ಯನ ವಿಶೇಷ ಅರಿಯಲು ನಾವು
ಆದಿತ್ಯನ ಸಂಶೋಧನೆ ಗೈಯೋಣ
ವಿಕಸಿತ ಭಾರತ ವಿಶ್ವಗುರುವಾಗಲಿ
ಒಗ್ಗಟ್ಟಿನ ಮಂತ್ರವ ಜಪಿಸೋಣ
ಜಾತಿ ಪಂಥಗಳ ಮೆರೆಯುತ ನಾವು
ಸೌಹಾರ್ದ ಜೀವನ ನಡೆಸೋಣ
9ನೇ ತರಗತಿ
ಕೆ.ಪಿ.ಎಸ್ (ಪ್ರೌಢಶಾಲೆ) ಕುಂಬ್ರ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಸಂಜೆಯಾದರೆ ಅರಳಿ ನಿಂತಿರುವೆ
ದಿನನಿತ್ಯವು ನೀನು ದೇವರ
ಪಾದಕ್ಕೆ ಆಗುವೆ ಶೃಂಗಾರ
ಕೆಂಪು, ಬಿಳಿ, ಕೇಸರಿ
ನೀಲಿ, ಹಳದಿ, ಗುಲಾಬಿ
ವಿಧ ವಿಧ ಬಣ್ಣದಿಂದ
ಶೃಂಗಾರಿಸುವೆ ನೀ ಪರಿಸರ
ಅಂಗಡಿಯಲ್ಲಿ ಮಾರಾಟಾಕ್ಕಾಗುವೆ
ದೇವಸ್ಥಾನದಲ್ಲಿ ಪೂಜೆಗಾಗುವೆ
ಶೃಂಗಾರಕ್ಕಾಗುವೆ ನೀ ಕಾರ್ಯಕ್ರಮದಲ್ಲಿ
ತರಿಸುವೆ ನಗುವ ಎಲ್ಲರ ಮೊಗದಲ್ಲಿ
ಬತ್ತಿ ಹೋಗಿರುವ ಬರಗಾಲದಿ
ಭರವಸೆ ತರುವೆ ನೀ ಅರಳಿ
ಪ್ರೀತಿ ಭಕ್ತಿ ಶೃಂಗಾರವು
ನಿನ್ನ ಅರ್ಪಣೆಯಿಂದ ಸಾರ್ಥಕವಾಗುವುದು
6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ
ಶಾಲೆ, ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಇವನೆ ನಮ್ಮ ದೇಶದ ಸಂರಕ್ಷಕ||
ರೈತನಿಲ್ಲದೆ ದೇಶ ಸಾಗಬಹುದೇ?
ಜೀವನ ಸಾಗಬಹುದೇ?
ಕೃಷಿ ದೇಶದ ಅಭಿವೃದ್ಧಿ
ರೈತ ದೇಶದ ಬೆನ್ನೆಲುಬು||
ರೈತನೆಂದು ಬೇಡ ಅವಮಾನ
ರೈತರೆ ದೇವರಿಗೆ ಸಮಾನ
ರೈತರಿಗೆ ಆಗಬೇಕು ಸನ್ಮಾನ
ರೈತರಿಗೆ ಸಿಗಬೇಕು ದೊಡ್ಡ ಬಹುಮಾನ||
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ
******************************************
ಗೆಳೆಯರ ಮಾತು ಎಂದಿಗೂ ಹಿತ
ನಮ್ಮ ಸ್ನೇಹವೇ ಶಾಶ್ವತ
ಅವಳ ಗೆಲುವಲ್ಲಿ ನಾ ನಗಲು
ಅವಳ ಪ್ರೀತಿ ತಾಯ್ತುಗೂ ತೊಟ್ಟಿಲು
ನಮ್ಮ ಸಾಧನೆಗೆ ಸೋಲೇ ಮೆಟ್ಟಿಲು
ಹುಟ್ಟಿನಿಂದ ಬೆಳೆದ ಸಂಬಂಧವೇ
ನಮ್ಮ ಈ ಅನುಬಂಧವು
ಸ್ನೇಹಿತನೇ ನಮ್ಮೊಲವು
ಮನಸಲ್ಲಿದೆ ಸ್ನೇಹವೆಂಬ ಪ್ರೀತಿ
ಸ್ನೇಹಕ್ಕೆ ಇಲ್ಲ ಯಾವುದೇ ಭೀತಿ
ಇದುವೇ ಜಗದ ರೀತಿ
ಸ್ನೇಹವೆಂಬುದು ಸಾಗರ
ಅಲೆಗಳಂತೆ ನಮ್ಮ ಮನಸ್ಸು ಹಗುರ
ನಮ್ಮ ಸ್ನೇಹ ಸಂಬಂಧವೇ ಮಧುರ
9ನೇ ತರಗತಿ
ಎಸ್ ಬಿ ಎಚ್ ಎಸ್ ಮೆಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
******************************************
ಜ್ಞಾನ ತುಂಬಾ ಪುಸ್ತಕ
ಪಾಠವನ್ನು ಓದೋಣ
ಅಕ್ಷರವನ್ನು ತಿಳಿಯೋಣ
ಅಕ್ಷರವೇ ನಮ್ಮ ಜ್ಞಾನ
ಅದುವೇ ನಮ್ಮ ಜೀವನದ ವಿಜ್ಞಾನ
ಜ್ಞಾನ ತಿಳಿದುಕೊಳ್ಳೋಣ
ಜೀವ ಜ್ಞಾನಿ ಆಗೋಣ
................................ ಚಂದ್ರಿಕಾ ಮಾ ಕಂಬಳಿ
9ನೇ ತರಗತಿ
ಎಸ್ ಬಿ ಎಚ್ ಎಸ್ ಮೆಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
******************************************
ಪ್ರತಿದಿನ ಹರ ಹರ ಹರನೇ
ಶಿವನಿಗೆ ಬಹಳ ಶಕ್ತಿ
ನಾವು ಕೋರಿದೆವು ಭಕ್ತಿ
ಶಿವನ ಪೂಜೆಗೆ ಹೂಗಳು
ಪ್ರತಿ ವರ್ಷದ ಶಿವರಾತ್ರಿಗೆ ಹಣ್ಣುಗಳು
ಶಿವನಿಗೆ ಮಾಡಬೇಕು ತಲಬಾಗಿ ನಮನ
ಶಿವನ ಕೈಯಲ್ಲಿದೆ ನಮ್ಮಿ ಜೀವನ
..................................... ಮಾಳವ್ವ ದಿ ಕಂಬಳಿ
9ನೇ ತರಗತಿ
ಎಸ್ ಬಿ ಎಚ್ ಎಸ್ ಮೇಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
******************************************
ಜಗವನು ಬೆಳಗುವನು
ಬಾನಲ್ಲಿ ಹಕ್ಕಿಗಳು ಚಿಲಿಪಿಲಿ ಗುಟ್ಟುತ
ನೇಸರನ ಸೊಗಸನು ಸವಿಯುವರು.
ಬೆಳಕನು ಬಿಸಿಲನು ನೀಡುವ ನೇಸರ
ಮರ ಗಿಡಗಳಿಗೆ ಆಧಾರವಾಗಿಹನು
ಮರೆಯದೆ ಕರ್ತವ್ಯ ಮಾಡುತ
ಭೂಮಿಯ ಪೋಷಕನಾಗಿಹನು.
ಸೂರ್ಯನ ಕರ್ತವ್ಯ ತಿಳಿದ ನಾವು
ಮರೆಯದೆ ನಮ್ಮ ಕರ್ತವ್ಯ ಮಾಡುತ
ನಮ್ಮ ಬದುಕನ್ನು ಹಸನಾಗಿಸುತ
ನಲಿಯುತ ಬಾಳೋಣ.
6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕೆರೆಕಾಡು, ಮಂಗಳೂರು ಉತ್ತರ
ದಕ್ಷಿಣ ಕನ್ನಡ ಜಿಲ್ಲೆ
******************************************
ನಮ್ಮಊರಿಗೆ
ಅದೆ ನಮ್ಮ ಕುಂದಾಪ್ರ ಊರಿಗೆ
ಹೊಯ್ಯ್ ಬನೀಯೇ ನಮ್ಮ ಊರ ಬದಿಗೆ
ಅದೆ ನಮ್ಮ ಕುಂದಾಪ್ರದ ಬದಿಗೆ
ನನ್ನ ಊರ ನಂಗೆ ಇಷ್ಟ
ತೀರಿಸುವೆ ಋಣ ಹಾಂಗಾರು ಕಷ್ಟ
ನನ್ನ ಊರ ನಂಗೆ ಪ್ರಾಣ
ನನ್ನ ಊರಿಗೆ ನಾನಾತೆ ಜಾಣ
ಕುಂದಾಪ್ರ ಊರ ಒಂದು
ನಾವೆಲ್ಲ ವಟ್ಟ ಆಪಾ ಎಂದೆಂದು
ನೋಡು ನಮ್ಮ ಕುಂದಾಪ್ರ ಸ್ಥಾನ
ಅದ ಆಗಿದೆ ವಿವಿಧ ಆಶ್ರಯ ತಾಣ
ಇದೆ ಆಸಾಡಿ ಅಮಾಸಿ ಕುಂದಾಪ್ರ ಕನ್ನಡ ದಿನ
ಸಪ್ತ ಸ್ವರಗಳಲಿ ನಾ ಹಾಡುವೆ
ಕುಂದಾಪ್ರ ಕನ್ನಡ ದಿನ.
10ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************
ಮುಂದೆ ನಾಡಿನ ಪ್ರಜೆಯಾದರು
ನಾಡಿನ ಬೆಳಕು ಮಹಿಳೆ
ಹರುಷದ ದಾರಿ ತೋರುವಳು ಮಹಿಳೆ
ಸಂಸಾರದ ಕಣ್ಣು
ಅವಳೆ ನಮ್ಮ ಹೆಣ್ಣು
ಹೆಣ್ಣಿನಲ್ಲಿದೆ ತಾಕತ್ತು
ಸಂಸಾರದ ಗಮ್ಮತ್ತು
ಹೆಣ್ಣನ್ನು ಭೂತಾಯಿಗೆ ಹೋಲಿಸಿ
ಭಾರವನ್ನು ಸಹಿಸಿ ಎಲ್ಲರನ್ನು ಹಾರೈಸಿ
ಹೆಣ್ಣಿಗಿದೆ ಅಪಾರ ಗೌರವ
ಸಂತೋಷದಿಂದ ನಲಿಯುವ
9ನೇ ತರಗತಿ
ಎಸ್.ಬಿ.ಎಚ್.ಎಸ್.ಮೇಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
******************************************