-->
ಜಗಲಿ ಕಟ್ಟೆ : ಸಂಚಿಕೆ - 63

ಜಗಲಿ ಕಟ್ಟೆ : ಸಂಚಿಕೆ - 63

ಜಗಲಿ ಕಟ್ಟೆ : ಸಂಚಿಕೆ - 63
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ

     ಈ ಬಾರಿಯ ಶಿಕ್ಷಕರ ದಿನಾಚರಣೆ - 2024 ನಿಮಿತ್ತ ಮಕ್ಕಳ ಜಗಲಿಯ ಮಕ್ಕಳಿಗೆ ಹಾಗೂ ಹಿರಿಯರಿಗೆ 'ನಾನು ಮೆಚ್ಚಿದ ಶಿಕ್ಷಕರು' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.. ಬರಹಗಳನ್ನು ಕೇಳಿದ್ದೆವು. ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬರಹಗಳನ್ನು ಕಳುಹಿಸಿ ಕೊಟ್ಟಿದ್ದೀರಿ. ಬಂದಿರುವ ಎಲ್ಲಾ ಬರಹಗಳನ್ನು ವಿವಿಧ ಸಂಚಿಕೆಗಳಲ್ಲಿ ಪ್ರಕಟಿಸಿದ್ದೇವೆ. ಪ್ರತಿಯೊಂದು ಬರಹಗಳು ಕೂಡ ಸೊಗಸಾಗಿದ್ದವು. ಭಾಗವಹಿಸಿದ ಎಲ್ಲಾ ಹಿರಿಯರಿಗೆ ಮತ್ತು ಕಿರಿಯರಿಗೆ ಮಕ್ಕಳ ಜಗಲಿಯ ಪರವಾಗಿ ಪ್ರೀತಿಪೂರ್ವಕ ಧನ್ಯವಾದಗಳು...
     2024 ನವೆಂಬರ್ 14ನೇ ತಾರೀಕು - ಮಕ್ಕಳ ಜಗಲಿಯ ನಾಲ್ಕನೇ ವರ್ಷದ ಹುಟ್ಟು ಸಂಭ್ರಮ. ಪ್ರತಿ ವರ್ಷ ಜಗಲಿಯ ವರ್ಷದ ದಿನದ ನೆನಪಿಗಾಗಿ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ಕಥೆ ಮತ್ತು ಕವನ ರಾಜ್ಯಮಟ್ಟದ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಚಿತ್ರಕಲೆಯಲ್ಲಿ "ಮಕ್ಕಳ ಜಗಲಿ ಕಲಾ ಪ್ರಶಸ್ತಿ" ಯನ್ನು ಪ್ರತಿ ವಿಭಾಗದಲ್ಲಿ ಮೂರು ವಿದ್ಯಾರ್ಥಿಗಳಂತೆ ಒಟ್ಟು 12 ವಿದ್ಯಾರ್ಥಿಗಳಿಗೆ ನೀಡುತ್ತೇವೆ. ಈಗಾಗಲೇ ರಾಜ್ಯದ ಒಟ್ಟು 36 ವಿದ್ಯಾರ್ಥಿಗಳು ಈ ಪ್ರಶಸ್ತಿ ಪಡೆದಿದ್ದಾರೆ. ಈ ಬಾರಿಯ ನಾಲ್ಕನೇ ವರ್ಷದ "ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ" ಮಾಹಿತಿಯನ್ನು ನವೆಂಬರ್ 14ರ ನಂತರ ಬಿಡುಗಡೆ ಮಾಡುತ್ತೇವೆ. ಜನವರಿ 26ರಂದು ಈ ಚಿತ್ರಕಲಾ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸುತ್ತೇವೆ. 
     ಎಂದಿನಂತೆ ಈ ಬಾರಿಯೂ ಮಕ್ಕಳ ಜಗಲಿಯಲ್ಲಿ ಮೂರನೇ ವರ್ಷದ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಗಳನ್ನು ಆಯೋಜಿಸುತ್ತೇವೆ. ಈ ರಾಜ್ಯಮಟ್ಟದ ಸ್ಪರ್ಧೆಯ ವಿಜೇತರಿಗೆ ಮಕ್ಕಳ ಜಗಲಿ ಕವನಸಿರಿ ಮತ್ತು ಮಕ್ಕಳ ಜಗಲಿ ಕಥಾ ಸಿರಿ ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ. ಈ ಸ್ಪರ್ಧೆಯಲ್ಲಿ ಒಟ್ಟು ಎರಡು ವಿಭಾಗಗಳಿದ್ದು ಪ್ರತಿ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕವನಸಿರಿ ಪ್ರಶಸ್ತಿ ಅದೇ ರೀತಿ ಇಬ್ಬರು ವಿದ್ಯಾರ್ಥಿಗಳಿಗೆ ಕಥಾ ಸಿರಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸುತ್ತೇವೆ. ಈಗಾಗಲೇ ರಾಜ್ಯದ ಒಟ್ಟು ಎಂಟು ವಿದ್ಯಾರ್ಥಿಗಳು ಕಥಾ ಸ್ಪರ್ಧೆಯಲ್ಲಿ ಕಥಾಸಿರಿ ಪ್ರಶಸ್ತಿ ಮತ್ತು ಕವನ ಸ್ಪರ್ಧೆಯಲ್ಲಿ ಎಂಟು ವಿದ್ಯಾರ್ಥಿಗಳು ಕವನ ಸಿರಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. 
    ಈ ಬಾರಿಯ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯ ಮಾಹಿತಿಯನ್ನು ಈ ವಾರದಲ್ಲಿ ಪ್ರಕಟಿಸುತ್ತೇವೆ. ಮಧ್ಯಾವಧಿಯ ಪರೀಕ್ಷೆಯ ತಯಾರಿಯಲ್ಲಿರುವ ತಾವೆಲ್ಲರೂ ದಸರಾ ರಜೆಯಲ್ಲಿ ಈ ಸ್ಪರ್ಧೆಗಾಗಿ ತಯಾರಿ ನಡೆಸಬಹುದು. ಅಕ್ಟೋಬರ್ 28 ಕಥೆ ಮತ್ತು ಕವನಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕವಾಗಿರುತ್ತದೆ. ಉತ್ತಮ ಬರಹಗಾರರಿಗೆ ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಸದಾವಕಾಶವಿದೆ. ಎಂದಿನಂತೆ ಸಹಕರಿಸಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತಾಗಲಿ. ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************

ಕಳೆದ ಸಂಚಿಕೆಯ ಜಗಲಿಕಟ್ಟೆ - 62 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಶಾಂತಾ ಎಸ್ ಹಿಂದಿ ಭಾಷಾ ಶಿಕ್ಷಕರು, ರಮ್ಯಾ ಆರ್ ಭಟ್ - ಸಹ ಶಿಕ್ಷಕಿ ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಎರಡು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ನಮಸ್ತೇ....
    ಸತ್ಯಜ್ಞಾನ ಪಡೆಯುವ ವಿಧಾನವೇ ವೇದ ಸ್ವಾಧ್ಯಾಯ. ಪಾತಂಜಲ ಮಹರ್ಷಿಯ ವೇದ ಸ್ವಾಧ್ಯಾಯದ ಕುರಿತಾದ ವಿವರಣಾತ್ಮಕ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
    ಎಲ್ಲರಿಗೂ ಹಿತವಾಗುವುದನ್ನೇ ಬಯಸುವ ಮಾನವ ಮಾತ್ರ ಮಾಧವನಾಗಬಲ್ಲ. ಹಿತ-ಅಹಿತ ಸುಂದರ ಲೇಖನ ರಮೇಶ್ ಬಾಯಾರು ಸರ್ ರವರಿಂದ.
    ಪ್ರಾಣಿಗಳಲ್ಲಿ ವಿಸರ್ಜನಾ ಕ್ರಿಯೆ ನಡೆಯುವ ವಿಧಾನವನ್ನು ಬಹಳ ಸರಳವಾಗಿ ಅರ್ಥವತ್ತಾಗಿ ವಿವರಿಸಿದ್ದಾರೆ ದಿವಾಕರ ಸರ್ ರವರು ತಮ್ಮ ಈ ಸಲದ ಸಂಚಿಕೆಯಲ್ಲಿ. ಧನ್ಯವಾದಗಳು ಸರ್.
     2024 ನೇ ಸಾಲಿನ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ವಿ ಕೆ ವಿಟ್ಲರವರ ಕುರಿತಾದ ಲೇಖನ ಉತ್ತಮವಾಗಿತ್ತು. ಅರ್ಹವಾಗಿಯೇ ಪ್ರಶಸ್ತಿ ಪಡೆದ ಶ್ರೀ ವಿ ಕೆ ವಿಟ್ಲರವರಿಗೆ ಅಭಿನಂದನೆಗಳು. ಹೊಸ ಕಲಾವಿದರ ಪರಿಚಯಕ್ಕಾಗಿ ಧನ್ಯವಾದಗಳು ಸರ್ .
     ವಿಜಯಾ ಮೇಡಂರವರ ಈ ಸಲದ ಸಂಚಿಕೆಯಲ್ಲಿ ಮಳೆಗಾಲದಲ್ಲಿ ತುಂಬಾ ಹುಲುಸಾಗಿ ಬೆಳೆಯುವ ಹಲ್ಲು ಜಾತಿಯ ಲವ್ ಗ್ರಾಸ್ ಸಸ್ಯದ ಪರಿಚಯ ತುಂಬಾ ಸೊಗಸಾಗಿ ಮೂಡಿ ಬಂದಿದೆ.
     ಪ್ರವಾಸ ಕಥನ - ಪಯಣ ಸಂಚಿಕೆಯಲ್ಲಿ ರಮೇಶ್ ಉಪ್ಪುಂದರವರಿಂದ ಇಡಗುಂಜಿ ಕ್ಷೇತ್ರದ ವಿವರಣೆ ಚೆನ್ನಾಗಿ ಮೂಡಿ ಬಂದಿದೆ.
     ವಾಣಿಯಕ್ಕನವರಿಂದ ದಗ್ಗಾ ಎಂಬ ನಾಯಿಯ ಕುರಿತಾದ ಪುಸ್ತಕದ ಪರಿಚಯ ಚೆನ್ನಾಗಿತ್ತು.
     ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾದ ಹಿರಿಯರ ಬರಹಗಳು ಸೊಗಸಾಗಿದ್ದುವು.
      ಗೌರಿ ಗಣೇಶ ಹಬ್ಬದ ಕುರಿತಾಗಿ ಸಿಂಧುರವರ ಲೇಖನ ಸಂಕ್ಷಿಪ್ತವಾಗಿದ್ದರೂ ಚೊಕ್ಕದಾಗಿತ್ತು. ಅಭಿನಂದನೆಗಳು ಸಿಂಧು.
      ಚೌತಿಯ ವಿಶೇಷ ಚಿತ್ರ ಸಂಚಿಕೆಯಲ್ಲಿ ಗಣೇಶನ ಎಲ್ಲಾ ಚಿತ್ರಗಳು ಸೊಗಸಾಗಿದ್ದುವು. ಮಕ್ಕಳೆಲ್ಲರಿಗೂ ಅಭಿನಂದನೆಗಳು.
     ಶಿಕ್ಷಕರ ದಿನಾಚರಣೆ ಅಂಗವಾಗಿ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾದ ಎಲ್ಲಾ ಮಕ್ಕಳ ಬರಹಗಳು ಚೆನ್ನಾಗಿದ್ದುವು. ಮಕ್ಕಳಿಗೆಲ್ಲರಿಗೂ ವೈಯಕ್ತಿಕ ಅಭಿನಂದನೆಗಳು.
    ಎಲ್ಲರಿಗೂ ಮನದಾಳದ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ನಮಸ್ತೇ,
     ಯಾವುದರಿಂದ ಮನಸ್ಸಿನ ಚಿಂತೆ ದೂರವಾಗುತ್ತದೋ ಯಾವುದರಿಂದ ಮನಸ್ಸು ಅರಳುತ್ತದೋ ಯಾವುದರಿಂದ ದೋಷಗಳ ನಿವಾರಣೆಯಾಗುತ್ತದೋ ಅದನ್ನೆ ಮಂತ್ರ ಎನ್ನುವರು. ಪಾತಂಜಲ ಮಹರ್ಷಿಯ ಮಂತ್ರ ಸ್ವಧ್ಯಾಯದ ಕುರಿತಾಗಿ ಸುಂದರ ವಿಶ್ಲೇಷಣೆ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
      ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ ಎಲ್ಲಾ ಹಿರಿಯರ ಬರಹಗಳು ಸೊಗಸಾಗಿದ್ದುವು.
      ವಿದುರ ಹೇಳಿದ ಪಂಚ ತತ್ವದಲ್ಲಡಗಿದೆ ರಾಜಧರ್ಮ. ಪಂಚತತ್ವಗಳ ವಿವರಣೆಯ ಮೂಲಕ ರಾಜಧರ್ಮದ ಮರ್ಮವನ್ನು ಸುಂದರವಾಗಿ ವಿವರಿಸಿದ್ದಾರೆ ರಮೇಶ್ ಸರ್ ರವರು.
       ಸಸ್ಯದ ಬೆಳವಣಿಗೆಗೆ ಕಾರಣವಾದ ವರ್ಧನ ಅಂಗಾಂಶದ ಕುರಿತಾದ ಸವಿವರ ಮಾಹಿತಿ ದಿವಾಕರ ಸರ್ ರವರಿಂದ ಈ ಸಲದ ವೈಜ್ಞಾನಿಕ ಸಂಚಿಕೆಯಲ್ಲಿ.
     ತಮ್ಮ ನೆಚ್ಚಿನ ಶಿಕ್ಷಕರ ಕುರಿತಾದ ಮಕ್ಕಳ ಮನದಾಳದ ಮಾತುಗಳು ಸೊಗಸಾಗಿ ಮೂಡಿ ಬಂದಿವೆ. ಅಭಿನಂದನೆಗಳು ಮಕ್ಕಳಿಗೆ.
      ವಿಜಯ ಮೇಡಂರವರ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ಸುಗಂಧಿ ಪುಷ್ಪ ಗಿಡದ ಕುರಿತಾದ ಸವಿವರವಾದ ಮಾಹಿತಿ ಸಿಕ್ಕಿತು.
      ಶಿಲ್ಪ ಕಲಾ ವೈಭವದ ಬೀಡಾಗಿರುವ ಸೋಮನಾಥ ಪುರದ ಕುರಿತಾದ ಅಗತ್ಯ ಮಾಹಿತಿಗಳನ್ನು ರಮೇಶ್ ಉಪ್ಪುಂದರವರು ತಮ್ಮ ಪಯಣ ಸಂಚಿಕೆಯಲ್ಲಿ ಸೊಗಸಾಗಿ ವಿವರಿಸಿದ್ದಾರೆ.
      ವಾಣಿಯಕ್ಕನವರಿಂದ ಅತ್ಯಂತ ಕುತೂಹಲ ಭರಿತ 'ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ' ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು. ಧನ್ಯವಾದಗಳು ಮೇಡಂ.
      ಶಿಕ್ಷಕರ ಡೈರಿ ಸಂಚಿಕೆಯಲ್ಲಿ ಮಗುವಿನಲ್ಲಿರುವ ಅತ್ಮವಿಶ್ವಾಸದ ಕುರಿತಾಗಿ ಬಹಳ ಸೊಗಸಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ರಮ್ಯ ಮೇಡಂರವರು.
      ಪದಗಳನ್ನು ಹುಡುಕುತ್ತಾ ಜೋಡಿಸುವ ಪದದಂಗಳ ಈ ಸಲ ಸ್ವಲ್ಪ ಸುಲಭವಾಗಿತ್ತು. ಇಂತಹ ಪ್ರಯಾಸದ ಸಂಚಿಕೆಯನ್ನು ಸಲೀಸಾಗಿ ಕೊಡುತ್ತಿರುವ ರಮೇಶ್ ಉಪ್ಪುಂದರವರಿಗೆ ನನ್ನ ನಮನಗಳು.
     ಜಗಲಿಯಲ್ಲಿ ನಿರಂತರವಾಗಿ ಬರೆಯುತ್ತಿರುವ ಹಿರಿಯರಿಗೆ ಹಾಗೂ ಕಿರಿಯರಿಗೆ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article