ಪ್ರೀತಿಯ ಪುಸ್ತಕ : ಸಂಚಿಕೆ - 129
Friday, September 20, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 129
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಇದೊಂದು ಪುಟ್ಟ ಕಥೆ. ಮಕ್ಕಳ ಜಗತ್ತಿನಲ್ಲಿ ಏನೇನು ನಡೆಯಬಹುದು ಅಂತ ತೋರಿಸಿಕೊಡುವ ಕಥೆ. ರೋಹಿತ್ ಶಾಲೆಗೆ ಹೋಗುತ್ತಾನೆ. ಆದರೆ ಶಾಲೆಯ ನಾಲ್ಕು ಗೋಡೆಗಳ ಒಳಗೆ ಚಡಪಡಿಸುತ್ತಿರುತ್ತಾನೆ. ಅವನು ಬರೆಯಲು ಪ್ರಯತ್ನಿಸುತ್ತಾನೆ. ಆದರೆ ಅವನ ಬರಹಗಳು ಅಡಿಮೇಲು ಆಗುತ್ತಿರುತ್ತವೆ. ಸುಧಾ ಮೇಡಂಗೆ ರೋಹಿತನ ಚಡಪಡಿಕೆ ಅರ್ಥವಾಗುತ್ತದೆ. ಅವರು ಅವನನ್ನು ಕರೆದುಕೊಂಡು ಕೊಳದ ಪಕ್ಕ ಹೆಜ್ಜೆ ಹಾಕುತ್ತಾರೆ. ಅಲ್ಲಿ ಅವರು ರೋಹಿತನ ಹಾಗೆ ತನ್ನದೆ ಹಾದಿ ಹಿಡಿದು ನಡೆವ ಆಮೆಚಿಪ್ಪಿನ ಜೀರುಂಡೆಯನ್ನು ಕಾಣುತ್ತಾರೆ. ಚಂದದ ಚಿತ್ರಗಳಿಂದ ತುಂಬಿದ ಈ ಪುಸ್ತಕ ನೀವು ಓದಿದರೆ ಖುಶಿ ಪಡುತ್ತೀರಿ. ಮಕ್ಕಳು ಹೇಗೆ ಬೇರೆ ಬೇರೆ ತರಹ ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳುತ್ತೀರಿ.
ಲೇಖಕರು: ಯುವನ್ ಅವೆಸ್
ಚಿತ್ರಗಳು: ರೇಶು ಸಿಂಗ್
ಅನುವಾದ: ವಾಣಿ ಪೆರಿಯೋಡಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.80/-
ಪ್ರಥಮ್ ಬುಕ್ಸ್ ಇವರ ಪ್ರಕಾರ ಇದು 3ನೇ ಹಂತದ ಪುಸ್ತಕ. ಸುಲಭವಾಗಿ ಓದುವ ಸಾಮರ್ಥ್ಯ ಬೆಳೆಸಿಕೊಂಡಿರುವ ಯಾವುದೇ ಮಕ್ಕಳಿಗೆ ಸೂಕ್ತವಾಗಿದೆ. ದೊಡ್ಡವರ ಸಹಕಾರದೊಂದಿಗೆ ಇತರರೂ ಓದಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************