ಮಕ್ಕಳ ಕವನಗಳು : ಸಂಚಿಕೆ -28
Thursday, August 22, 2024
Edit
ಮಕ್ಕಳ ಕವನಗಳು : ಸಂಚಿಕೆ -28
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ವೈಷ್ಣವಿ, 9ನೇ ತರಗತಿ
◾ ದಕ್ಷಾ ಕುಮಾರಿ ಕೆ, 9ನೇ ತರಗತಿ
◾ ಸಿಂಚನ, 10ನೇ ತರಗತಿ
◾ ಜಯಶ್ರೀ, 8ನೇ ತರಗತಿ
◾ ಮೋಕ್ಷಾ, 10ನೇ ತರಗತಿ
ಬರವಣಿಗೆಯ ದಾರಿ
ಯೋಚಿಸುತ್ತಾ ನಿಂತೆ
ಬರವಣಿಗೆಯ ರಹಸ್ಯ
ಓದಿದೆ ಪುಸ್ತಕದ ಅಕ್ಷರಗಳನು
ಬರೆದೆ ಕವನದ ಸಾಲುಗಳನು
ಸಲಹಿ ತಿದ್ದಿ ಬರೆದೆ ಪದಗಳನು
ಕೊನೆಗೂ ಬರೆದೆ ಕವನಗಳನು
9ನೇ ತರಗತಿ
ಜಿ ಎಚ್ ಎಸ್ ಮೊಗ್ರಾಲ್ ಪುತ್ತೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಭೂಮಿಗೆ ಬೀಳುವಾಗ
ಧರೆಗೆ ಆನಂದವೋ-ಆನಂದ....
ಹನಿಗಳ ರಭಸ ಹೆಚ್ಚಿದಾಗ
ಮನಸ್ಸಿಗೆ ತಂಪೋ-ತಂಪು....
ತಣ್ಣನೆ ಬೀಸುವ ಗಾಳಿಗೆ
ಮರಗಿಡಗಳು ನೆಲಕ್ಕುರುಳಿ ಸಮಾಪ್ತಿ....
ಗುಡುಗು-ಮಿಂಚಿನ ನೋಟಕ್ಕೆ
ಮರದಲ್ಲಿ ಏನೋ ಭೀತಿಯೋ ಭೀತಿ....
ಸುರಿಯುವ ಮಳೆಗೆ....
ಗುಡುಗು ಮಿಂಚು ವಾದ್ಯ ಮೇಳಗಳಂತೆ
ಗಾಳಿ ಕುಣಿಯುವ ಜೋಡಿಯಂತೆ
ಮರಗಿಡಗಳು ನೆರೆದಿರುವ ಜನರಂತೆ
ಭೂಮಿಯು ಕುಣಿಯುವ ವೇದಿಕೆಯಿದ್ದಂತೆ
ಇಂತಹ ಸುಂದರ ಸನ್ನಿವೇಶ
ನೋಡಲು ತುಂಬಾ ವಿಶೇಷ....
ಕಣ್ಣಿಗೂ ಸೊಗಸು.... ಮನಸ್ಸಿಗೂ ಇಂಪು
ಬೆಳೆಗಳು ಇಳೆಯಲಿ ತಂಪು
9ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು
ಸವಣೂರು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನೀನು ನನ್ನ ಜೀವಕೆ ಉಸಿರು
ಕೊಟ್ಟ ದೇವತೆ.....
ನನಗೆ ಪ್ರೀತಿ ಸಹನೆಯಿಂದ
ಬದುಕಿನ ಪಾಠ ಕಲಿಸಿದ ಮಾತೆ.....
ಜಗತ್ತಿನಲ್ಲಿ ಬೇರೆ ಯಾರು
ಕೊಡಲಾರರು ತಾಯಿಯ ಮಮತೆ....
ನೀ ಸದಾ ನಗುತ್ತಿದ್ದರೆ ಬರಲಾರದು
ನನಗೆ ಯಾವುದೇ ಕೊರತೆ....
ನಾ ಎಲ್ಲೆ ಇರಲಿ ಹೇಗೆ ಇರಲಿ ನೆನೆಯುವೆ
ನಿನ್ನನ್ನೇ ಅಮ್ಮಾ.. ಅಮ್ಮಾ.. ಅಮ್ಮಾ...
9ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು
ಸವಣೂರು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಬಾ ನನ್ನ ಬಳಿ
ಓಡುವೆ ನೀನೆಲ್ಲಿ
ಬಾರೇ ನೀ ನನ್ನ ಬಳಿ
ನಾ ತಂದೆನು ನಿನಗಾಗಿ ಪಂಜರ
ಬಾರೋ ನನ್ನ ಮುದ್ದಿನ ಸರದಾರ
ನಿನ್ನ ಆ ಬಣ್ಣ
ತೇಲಿ ಎಲ್ಲೋ ನನ್ನ ಮನ
ಓ ನಿಲ್ಲೋ ರಾಮ
ಕರೆದಿರುವೆ ನಾ ನಿನ್ನ ಮುದ್ದಿನ ಶಮ
8ನೇ ತರಗತಿ
ಸರಕಾರಿ ಪ್ರೌಢ ಶಾಲೆ ಸರ್ವೆ
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಅಮ್ಮನ ಮಮತೆ
ಅಪ್ಪ ಅಮ್ಮನ ಸಂತೋಷದ ಮುಖ
ಅದರಲ್ಲಿ ಅಡಗಿರುವ ಸಾವಿರ ದುಃಖ
ಅಪ್ಪ ತೋರಿಸುವ ಪ್ರೀತಿ
ಅಮ್ಮ ಹೇಳುವ ನೀತಿ
ಅಪ್ಪ ಅಮ್ಮ ನವರ ಸ್ಪೂರ್ತಿ
ನಾನು ಹೆಚ್ಚಿಸಬೇಕು ಅವರ ಕೀರ್ತಿ
ಅಪ್ಪ ಅಮ್ಮ ನ ಕನಸು
ನಾನು ಮಾಡಬೇಕು ನನಸು
ಅಪ್ಪ ಅಮ್ಮ ನವರ ಒಳ್ಳೆಯ ಮಾರ್ಗ
ಅದವೇ ನನಗೆ ತೋರಿಸುವ ಸ್ವರ್ಗ
ಅಪ್ಪ ನನಗೆ ದೇವರು ಕೊಟ್ಟ ಬಹುಮಾನ
ಅಮ್ಮ ನನಗೆ ದೇವರು ಕೊಟ್ಟ ವರದಾನ
ಹೆತ್ತವರ ಪ್ರೀತಿ ನಯನ
ಅದುವೇ ನನ್ನಯ ಕವನ
10ನೇ ತರಗತಿ
ಕೆ. ಪಿ. ಎಸ್. ಕೆಯ್ಯೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************