-->
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 11

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 11

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 11
ಲೇಖನ : ನಮ್ಮೂರ ಶಾಲೆ
ಬರಹ : ಶ್ರೇಯ 
ಪ್ರಥಮ ಪಿಯುಸಿ 
ಸರಕಾರಿ ಪದವಿಪೂರ್ವ ಕಾಲೇಜು ಅಳದಂಗಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
    

ನಮ್ಮೂರ ಶಾಲೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಶಿರ್ಲಾಲು. ಈ ಶಾಲೆಯು ಕೇವಲ ಪಠ್ಯ ವಿಷಯಗಳು ಮಾತ್ರವಲ್ಲದೆ ಗ್ರಾಮೀಣ ಮಕ್ಕಳಲ್ಲಿರುವ ಪ್ರತಿಭೆಗಳಿಗೂ ಪ್ರೋತ್ಸಾಹಿಸುವಂತಹ ಅತ್ಯುತ್ತಮವಾದ ಕೆಲಸವನ್ನು ಈ ಶಾಲೆ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳ ಉಜ್ವಲ ಮತ್ತು ಸುಂದರ ಭವಿಷ್ಯದ ನಿರ್ಮಾಣಕ್ಕೆ ಶಿಕ್ಷಕರ ಅಮೋಘವಾದ ಪ್ರಯತ್ನವೇ ಕಾರಣ. ನಮ್ಮ ಶಾಲೆಯಲ್ಲಿ ಉತ್ತಮವಾದ ಶಿಕ್ಷಕ ವರ್ಗವಿದ್ದು ಮುಗ್ಧ ಮನಸ್ಸಿನ ಪುಟ್ಟ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರಲ್ಲಿರೋ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಾ ಉತ್ತಮವಾದ ಶಿಕ್ಷಣ ಹಾಗೂ ಜೀವನಕ್ಕೆ ಬೇಕಾದ ಮೌಲ್ಯಾಧಾರಿತ ವಿಷಯಗಳನ್ನು ಕೂಡ ಹೇಳಿಕೊಡುತ್ತಾರೆ.

ಮೊದಲ ಅಕ್ಷರ ಕಲಿತ ನನ್ನ ಶಾಲೆ ಎಂಬ ಮಮತೆ ಭಾಂದವ್ಯ ನಮ್ಮ ಊರಿನ ಸಮಸ್ತರಿಗೂ ಇರುವ ಕಾರಣ ಶಾಲೆಯ ಎಲ್ಲಾ ಕಾರ್ಯಕ್ರಮ ಹಾಗೂ ಕೆಲಸಗಳಿಗೂ ಊರಿನ ಸಮಸ್ತರು ಬೆನ್ನೆಲುಬಾಗಿದ್ದಾರೆ.

ಶಾಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳಿಗೂ ಶಾಲೆಯ ಎಲ್ಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು, ದಾನಿಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಮಸ್ತ ಊರವರು ನಮ್ಮ ಶಾಲೆ ನಾವು ಕಲಿತ ಶಾಲೆಯೆಂದು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಒಂದಾಗಿ ಶ್ರಮಿಸಿ ಶಾಲೆಯನ್ನು ಅಭಿವೃದ್ಧಿಪಡಿಸಿದ ರೀತಿ ಮೆಚ್ಚುವಂತದ್ದು.

ಹಚ್ಚ ಹಸಿರಿನ ಸುಂದರ ಪರಿಸರದ ನಡುವೆ ಈ ಶಾಲೆ ಇದ್ದು ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡಿ ಹಾಗೂ ಅವರ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಾ ಅವರ ಸುಂದರ ಭವಿಷ್ಯವನ್ನು ಈ ಶಾಲೆಯು ರೂಪಿಸಿಕೊಟ್ಟಿರುತ್ತದೆ.

ಈ ಶಾಲೆಯಲ್ಲಿ ಎನ್.ಎಂ.ಎಂ.ಎಸ್ ತರಬೇತಿ, ಇನ್ಸ್ಪಯರಿಂಗ್ ಅವಾರ್ಡ್, ಸ್ಮಾರ್ಟ್ ಕ್ಲಾಸ್, ಅಕ್ಷರ ದಾಸೋಹ, ಕ್ಷೀರಭಾಗ್ಯ, ಬಿಸಿಊಟ, ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಆರೋಗ್ಯ ತಪಾಸನೆ, ಶೌಚಾಲಯ, ಕ್ರೀಡೆ, ಪ್ರತಿಭಾ ಕಾರಂಜಿ, ಪ್ರತಿಭಾ ಪುರಸ್ಕಾರ ಮುಂತಾದ ಸೌಲಭ್ಯಗಳನ್ನು ಈ ಶಾಲೆಯು ಹೊಂದಿದೆ.

ಈಗಿನ ಕಾಲದಲ್ಲಿ ಸರಕಾರಿ ಶಾಲೆಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲ ಎಂದು ಖಾಸಗಿ ಶಾಲೆಗಳತ್ತ ಮುಖ ಮಾಡಿರುವವರಿಗೆ ಈ ಶಾಲೆ ಮಾದರಿಯಾಗಿದೆ. ಸರಕಾರಿ ಶಾಲೆಗಳು ಬೇರೆ ಯಾವ ಶಾಲೆಗಳಿಗೂ ಕಡಿಮೆ ಇಲ್ಲ ಎಂದು ನಾವು ಈ ಶಾಲೆಯನ್ನು ನೋಡಿ ಹೇಳಬಹುದು.

ಇಂತಹ ಉತ್ತಮವಾದ ಶಾಲೆಯಲ್ಲಿ ನಾನು ಕೂಡ ವಿದ್ಯಾಭ್ಯಾಸವನ್ನು ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ.

ನಮ್ಮೂರ ಶಾಲೆ ನಮ್ಮ ಹೆಮ್ಮೆ.
ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ.
.................................................... ಶ್ರೇಯ 
ಪ್ರಥಮ ಪಿಯುಸಿ 
ಸರಕಾರಿ ಪದವಿಪೂರ್ವ ಕಾಲೇಜು ಅಳದಂಗಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*********************************************



Ads on article

Advertise in articles 1

advertising articles 2

Advertise under the article