ಪ್ರೀತಿಯ ಪುಸ್ತಕ : ಸಂಚಿಕೆ - 123
Friday, August 9, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 123
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ..... ಮುಖ ಪುಟ ನೋಡುವಾಗಲೇ ಖುಶಿ ಆಗುತ್ತದೆ. ಸಬ್ರಿಯ ದೊಡ್ಡ ದೊಡ್ಡ ಕಂಗಳ ಎದುರು ಬಣ್ಣ ಬಣ್ಣದ ದೊಡ್ಡ ದೊಡ್ಡ ಪೆನ್ಸಿಲುಗಳು. ಸಬ್ರಿಗೆ ಚಿತ್ರ ಬರೆಯುವುದು ಅಂದರೆ ಇಷ್ಟ. ತನ್ನ ಬಳಿ ಇರುವ ಒಂದೇ ಒಂದು ಪೆನ್ಸಿಲಿನಲ್ಲಿ ಹಳೆಯ ಪುಸ್ತಕದ ಮೇಲೆ ಚಿತ್ರ ಬರೆಯುತ್ತಾ ಇರುತ್ತಾಳೆ. ಕಣ್ಣಿಗೆ ಕಾಣುವ ಎಲ್ಲ ವಸ್ತುಗಳ ಚಿತ್ರ ಬರೆಯುತ್ತಾಳೆ. ಅದಕ್ಕೆ ತಕ್ಕ ಹಾಗೆ ಬಣ್ಣ ಕೊಡಲು ಬಣ್ಣ ಬಣ್ಣದ ಪೆನ್ಸಿಲುಗಳು ಅವಳ ಬಳಿ ಇಲ್ಲ. ಆದರೂ ಅವನ್ನು ಪಡೆದುಕೊಳ್ಳುವ ಛಲ ಮನಮಿಡಿಯುವ ಹಾಗೆ ಇದೆ. ಇದು ಮಧ್ಯಪ್ರದೇಶದ ನೀಮಾರ್ ಪ್ರಾಂತ್ಯದ ಭಿಲ್-ಬಾರೆಲಾ ಜನಾಂಗದ ಹುಡುಗಿಯೊಬ್ಬಳ ಕಥೆ. ಅವಳು ಓದುವ ಶಾಲೆಯಲ್ಲಿ ಸರಕಾರದಿಂದ ಮಕ್ಕಳಿಗೆ ಪುಸ್ತಕ, ಪೆನ್ಸಿಲುಗಳು ಬರಬೇಕು. ಅದಕ್ಕಾಗಿ ಕಾಯುವುದೇ ಸಬ್ರಿಯ ದಿನಚರಿ ಆಗಿದೆ. ಇದರ ನಡುವೇ ತಾನೇ ಬೇರೆ ಬೇರೆ ವಸ್ತುಗಳಿಂದ ಬಣ್ಣಗಳನ್ನು ತಯಾರಿಸಿದರೆ ಹೇಗೆ ಎಂದು ಆಲೋಚನೆ ಬರುತ್ತಿರುತ್ತದೆ.
ಲೇಖಕರು: ರಿನ್ ಚಿನ್
ಚಿತ್ರಗಳು: ಶೈಲಜಾ ಜೈನ್
ಅನುವಾದ: ಬಾಗೇಶ್ರೀ
ಪ್ರಕಾಶಕರು: ತುಲಿಕಾ
ಬೆಲೆ: ರೂ135/
5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಉಪಯೋಗ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************