-->
ಮಕ್ಕಳ ಕವನಗಳು : ಸಂಚಿಕೆ - 22 : ಕವನ ರಚನೆ : ಸಿಂಚನಾ. ಎಸ್. ಶೆಟ್ಟಿ, ದ್ವಿತೀಯ ಪಿ ಯು ಸಿ

ಮಕ್ಕಳ ಕವನಗಳು : ಸಂಚಿಕೆ - 22 : ಕವನ ರಚನೆ : ಸಿಂಚನಾ. ಎಸ್. ಶೆಟ್ಟಿ, ದ್ವಿತೀಯ ಪಿ ಯು ಸಿ

ಮಕ್ಕಳ ಕವನಗಳು : ಸಂಚಿಕೆ - 22
ಕವನ ರಚನೆ : ಸಿಂಚನಾ. ಎಸ್. ಶೆಟ್ಟಿ
ದ್ವಿತೀಯ ಪಿ ಯು ಸಿ
ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು 
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
        

                
ಎಷ್ಟೊಂದು ಸುಂದರ 
ನಮ್ಮ ಹಳ್ಳಿ ಜೀವನ
ಆದಕ್ಕಾಗಿಯೇ ಬರೆಯುತ್ತಿರುವೆ 
ನಾನೊಂದು ಕವನ
ಅಲ್ಲಿರುವ ಕೋಳಿ 
ಎತ್ತು, ನಾಯಿ, ದನ
ಅನಿಸುವುದು ಅಲ್ಲಿಯೇ 
ಇರಬೇಕೆಂದು ಪ್ರತೀ ದಿನ

ಆಹಾ.. ಹಸಿರು ಹಸಿರಾಗಿರುವ 
ಹಳ್ಳಿಯ ಹೊಲ
ಅದರ ಮಧ್ಯೆ ಓಡಾಡಿಕೊಂಡಿರುವ 
ಬಿಳಿ ಬಣ್ಣದ ಮೊಲ
ಊರ ಮುಂದಿನಲ್ಲಿರುವ 
ದೊಡ್ಡದಾದ ನಳ
ಬಾನು ನೀಲಿ, ಇಳೆ 
ಹಸಿರು ಹೊಳೆಯುತ್ತಿದೆ ಫಳಫಳ

ಬೆಳಗೆದ್ದು ರೈತ 
ಕೆಲಸಕ್ಕೆ ಹೋಗುವ ರೀತಿ
ಅಜ್ಜಿ ಮೊಮ್ಮಕ್ಕಳಿಗೆ 
ಹೇಳಿ ಕೊಡುವ ನೀತಿ
ಫಲಭರಿತ ಮರಗಳಲ್ಲಿ 
ನೇತಾಡುತ್ತಿರುವ ಕೋತಿ
ಹಳ್ಳಿಯ ಸೊಬಗನ್ನು 
ಬಿಡುವಿನಿಂದ ಮಾಡಿಹನು ದೇವ ಕೆತ್ತಿ
................................... ಸಿಂಚನಾ. ಎಸ್. ಶೆಟ್ಟಿ
ದ್ವಿತೀಯ ಪಿ ಯು ಸಿ
ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು 
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
********************************************
         
        

ರಜೆ ಸಿಕ್ಕರೆ ಸಾಕು ಓಡುವೆವು 
ಅಜ್ಜಿಯ ಮನೆಗೆ 
ಹಿಂತಿರುಗಿ ಬರುವಾಗ ಕರೆದುಕೊಂಡು ಬರುವೆವು
ಅಜ್ಜಿಯನ್ನು ಜೊತೆಗೆ 
ಯಾವ ಪಕ್ಷಿಯೂ ಕೂಡ 
ಕೋಗಿಲೆಯಷ್ಟು ಇಂಪಾಗಿ ಹಾಡದು 
ಹಾಗೆ ಯಾವ ಪ್ರವಾಸ ತಾಣವು 
ಅಜ್ಜಿ ಮನೆಯಷ್ಟು ಖುಷಿ ನೀಡದು 

ನಿಷ್ಕಲ್ಮಶವಾದ ಪ್ರೀತಿಗೆ 
ಇನ್ನೊಂದು ಹೆಸರೇ ಅಜ್ಜಿ
ಆಹಾ.. ಚಪ್ಪರಿಸಿಕೊಂಡು ತಿನ್ನಬೇಕು 
ಆಕೆ ಮಾಡುವ ಬಜ್ಜಿ 
ಮಾರ್ಗದರ್ಶನ ನೀಡುವಲ್ಲಿ 
ಅಜ್ಜಿಯರದ್ದೇ ಎತ್ತಿದ ಕೈ 
ಹೆಮ್ಮೆಯಿಂದ ಹೇಳುವ 
ನಮ್ಮೆಲ್ಲರ ಅಜ್ಜಿಯರಿಗೊಂದು ಜೈ 

ಅಜ್ಜಿಯ ಮನೆಯಲ್ಲಿದೆ 
ಎರಡು ಎಕರೆ ಮಾವಿನ ತೋಟ
ಅದರ ಪಕ್ಕದಲ್ಲಿಯೇ ಇದೆ 
ಎಣಿಸಲಾಗದಷ್ಟು ಸಪೋಟ 
ಅದ ಕೀಳಲು 
ಗೆಳೆಯರೊಡನೆ ಎಲ್ಲಿಲ್ಲದ ಓಟ 
ರಜಾದಿನಗಳು ಕಳೆದು 
ಶುರುವಾಗಿದೆ ಈಗ ಶಾಲೆಯ ಪಾಠ 
................................... ಸಿಂಚನಾ. ಎಸ್. ಶೆಟ್ಟಿ
ದ್ವಿತೀಯ ಪಿ ಯು ಸಿ
ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು 
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article