-->
ಮಕ್ಕಳ ಕವನಗಳು : ಸಂಚಿಕೆ - 20 : ಕವನ ರಚನೆ : ಚೈತನ್ಯ , 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 20 : ಕವನ ರಚನೆ : ಚೈತನ್ಯ , 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 20
ಕವನ ರಚನೆ : ಚೈತನ್ಯ 
10ನೇ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
         
ಹೂವಿಗೆ ಬೇಕು 
ಬಳ್ಳಿಯ ಆಸರೆ 
ಮಗುವಿಗೆ ಬೇಕು 
ತಾಯಿಯ ಆಸರೆ 
ರೋಗಿಗೆ ಬೇಕು
ವೈದ್ಯರ ಆಸರೆ
ದೇಶಕೆ ಬೇಕು
ಸೈನಿಕರ ಆಸರೆ
ಭಕ್ತರಿಗೆ ಬೇಕು 
ದೇವರ ಆಸರೆ 
ಮಾನವೀಯತೆಗೆ ಬೇಕು
ಸಜ್ಜನರ ಆಸರೆ
.................................................. ಚೈತನ್ಯ 
10ನೇ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ಮಳೆ ಬಂತು ಮಳೆ 
ಭೂಮಿಗೆ ಬಂತು ಮಳೆ
ತುಂಬಿ ಹರಿಯಿತು ಹೊಳೆ
ರೈತರಿಗಾಯಿತು ಬೆಳೆ
ಗದ್ದೆ ತುಂಬಾ ಹಸಿರಿನ ಪೈರು
ಹರ್ಷದಿ ಎಲ್ಲರು ಕುಣಿದರು 
.................................................. ಚೈತನ್ಯ 
10ನೇ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ಕಣ್ಣಿಗೆ ಕಾಣುವ ದೇವರು 
ನಮ್ಮ ತಂದೆ ತಾಯಂದಿರು 
ಹೊತ್ತು ಹೆತ್ತು ಸಲಹುವರು 
ಕಷ್ಟಪಟ್ಟು ಬೆಳೆಸುವರು 

ಕೇಳಿದ್ದು ಕೊಡಿಸುವರು 
ಬುಧ್ಧಿ ಮಾತನು ಹೇಳುವರು 
ಬೆಟ್ಟದಷ್ಟು ನಮ್ಮ ಪ್ರೀತಿಸುವರು 
ಒಳ್ಳೆಯ ದಾರಿಯಲಿ ನಡೆಸುವರು

ಒಳ್ಳೆಯ ವಿದ್ಯೆ ಕೊಡಿಸುವರು 
ಅವರ ಕರ್ತವ್ಯ ನಿರ್ವಹಿಸುವರು 
ದುಡಿದು ನಮ್ಮನ್ನು ಸಾಕುವರು 
ನಮಗೆ ಅವರೇ ಮೊದಲ ಗುರುವರ್ಯರು

ಕಣ್ಣಿಗೆ ಕಾಣುವ ದೇವರು 
ತಂದೆ ತಾಯಿ ಇಬ್ಬರು
ಕೊನೆಯ ತನಕ ಕೈ ಬಿಡದವರು 
ನಮ್ಮ ಪಾಲಿಗೆ ಅವರೇ ದೇವರು 
.................................................. ಚೈತನ್ಯ 
10ನೇ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ನಮ್ಮನ್ನು ರಕ್ಷಿಸುವ ಧೀರರು
ನಮಗೆ ಅವರೇ ಶೂರರು 
ನಮ್ಮ ಜೀವನದ ಯೋಧರು 
ಅವರೇ ನಮ್ಮ ಸೈನಿಕರು 

ನಮ್ಮನ್ನು ಕಾಯುವ ರಕ್ಷಕರು 
ಶ್ರಮ ಪಡುವ ದೇವರು 
ಪ್ರಾಣ ಪಣಕ್ಕಿಡುವ ಗುಂಡಿಗೆಯವರು
ಅವರೇ ನಮ್ಮ ಸೈನಿಕರು

ಕಷ್ಟ ಸಹಿಸುವ ಮಹನೀಯರು 
ನಮ್ಮ ಬೆನ್ನೆಲುಬಾಗಿ ನಿಂತಿರುವವರು 
ನಮ್ಮ ದೇಶದ ಗಡಿಯ ಹೋರಾಟಗಾರರು 
ನಮ್ಮ ನೆಮ್ಮದಿಯ ಜೀವನಕೆ ಸಾಕ್ಷಿ ಅವರು
ಅವರೇ ನಮ್ಮ ಸೈನಿಕರು
.................................................. ಚೈತನ್ಯ 
10ನೇ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ರೈತ ನಮ್ಮ ಅನ್ನದಾತ 
ಹಸಿವು ನೀಗಿಸುವ ಆಪ್ತ
ರೈತ ನಮ್ಮ ಬೆನ್ನೆಲುಬು
ಅವನದೇ ಶ್ರೇಷ್ಠ ಕಸುಬು 

ರೈತನು ದೇವರ ಸಮಾನ 
ರೈತನಿಗೆ ಬೆಳೆಯೇ ದೇವರು
ರೈತನಿಗೆ ಪ್ರೋತ್ಸಾಹಿಸುವ 
ಅವನ ಹಸಿವನ್ನು ನೀಗಿಸುವ 

ರೈತರನ್ನು ಗೌರವಿಸುತ್ತ 
ಅವರಿಗೆ ಕೈಜೋಡಿಸುತ್ತಾ
ನಮ್ಮ ಭೂಮಿಯ ಉಳಿಸುವ 
ಹಸಿರು ಪರಿಸರ ಬೆಳೆಸುವ
.................................................. ಚೈತನ್ಯ 
10ನೇ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ನಮ್ಮನ್ನು ಸಾಕುವ ತಾಯಿ 
ಅವಳೇ ನಮ್ಮ ಭೂಮಿ ತಾಯಿ 
ನಾವು ಅವಳಿಂದಲೇ ಬದುಕಿರುವೆವು
ನಮಗೆ ಅವಳೇ ಆಧಾರವು

ಸೃಷ್ಟಿಯ ಮಾಯೆಯ ಒಳಗೆ
ಬದುಕುವೆವು ಪ್ರಕೃತಿಯ ಕೆಳಗೆ 
ಜನಮಂಡಲವನು ಹೊರುವ ಕರುಣಾಮಯೆ
ನೀನೇ ನಮ್ಮ ಭೂಮಿ ತಾಯೆ

ನಡೆಸುವರು ದೌರ್ಜನ್ಯ ಅವಳೊಲು 
ಆದರೂ ಸಹಿಸುವಳು ಅವಳು 
ಕಷ್ಟ ಕೊಟ್ಟರು ಮನ್ನಿಸುವಳು
ಅಂತಹ ದೇವತೆ ಅವಳು

ಪ್ಲಾಸ್ಟಿಕ್ ಕಸ ನಿತ್ಯ ಅರ್ಪಿಸುವೆವು 
ತಾಳ್ಮೆಗೂ ಒಂದು ಮಿತಿ ಇದೆ ಬೇಕು ಅರಿವು
ಕೊನೆಗೊಮ್ಮೆ ಮುಕ್ತಿ ಪಡೆಯುವಳು 
ಕಸವ ಗುಡಿಸಿ ಸ್ವಚ್ಛಗೊಳಿಸುವಳು
.................................................. ಚೈತನ್ಯ 
10ನೇ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ದೀಪದಿಂದ ದೀಪವ 
ಹಚ್ಚಬೇಕು ಮಾನವ 
ಮನೆ ಮನೆಗೆ ಬೆಳಕ ಬೆಳಗಲು
ಮನಸ್ಸಿನೊಳಗೆ ಭಾವನೆ ತುಂಬಲು 

ಭಾವನೆವೆಂಬುವ ದೀಪವನು 
ಬೆಳಗಿ ಬೆಳಕಾಗಿಸುವ ಬದುಕನು 
ಮತ್ತೆ ಮತ್ತೆ ಕಟ್ಟುವ ಏಕತೆಯನು
ಮರೆಯಬೇಡಿ ಗಟ್ಟಿಗೊಳಿಸುವ ಒಗ್ಗಟ್ಟನ್ನು
.................................................. ಚೈತನ್ಯ 
10ನೇ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ಕಷ್ಟಕ್ಕಾಗುವವರೇ ಸಂಬಂಧಿಕರು
ನೋವು ನಲಿವಲ್ಲೂ ಸಂಬಂಧಿಕರು
ಸೋಲು ಗೆಲುವಲ್ಲೂ ಸಂಬಂಧಿಕರು
ಸಂಬಂಧ ಅನ್ನುವ ಬಂಧ
ಮರೆಯಲಾಗದ ಅನುಬಂಧ 

ರಕ್ತ ಸಂಬಂಧ ಅನ್ನೋದು 
ಒಡಹುಟ್ಟಿನ ಕರುಳಿನ ಸಂಬಂಧ 
ಅದಕ್ಕಿಂತ ಮೀರಿದ ಬಂಧ 
ಸ್ನೇಹದ ಅನುಬಂಧ 

ತಾಯಿ ಅನ್ನುವ ಸಂಬಂಧ 
ಕಣ್ಣ ಕಂಬನಿಯ ಒರೆಸುವ ಬಂಧ
ತಂದೆ ಅನ್ನುವ ಸಂಬಂಧ 
ಭರವಸೆಯನ್ನು ತುಂಬುವ ಬಂಧ

ಅಣ್ಣ ತಂಗಿ ಸಂಬಂಧ 
ಏಳು ಜನುಮದ ಅನುಬಂಧ 
ಅಣ್ಣನಿಗೆ ತಂಗಿ ತಂಗಿಗೆ ಅಣ್ಣ 
ಹೀಗೆ ಬಾಳುವುದೇ ನಮಗೆ ಆನಂದ 
.................................................. ಚೈತನ್ಯ 
10ನೇ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article