ಪ್ರೀತಿಯ ಪುಸ್ತಕ : ಸಂಚಿಕೆ - 119
Friday, July 12, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 119
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಭಾರತದ ಸ್ವಾತಂತ್ರ್ಯದ ಕಥೆ ಗೊತ್ತಿದ್ದರೆ ಜಲಿಯನ್ ವಾಲಾ ಬಾಗ್ ಹೆಸರು ಗೊತ್ತಿರಲೇ ಬೇಕು. ಇತಿಹಾಸದ ಪುಟಗಳಲ್ಲಿ ಇರುವ ಅತ್ಯಂತ ನೋವಿನ ಕಥೆಗಳಲ್ಲಿ ಇದೂ ಒಂದು. ಪಂಜಾಬಿನ ಅಮೃತಸರದಲ್ಲಿ ಇರುವ ಜಲಿಯನ್ ವಾಲಾ ಬಾಗ್ ನಲ್ಲಿ 1919ರ ಏಪ್ರಿಲ್ 13ರಂದು ಸಾವಿರಾರು ಜನರ ಮೇಲೆ ಗುಂಡು ಹಾರಿಸಲಾಯಿತು. ಇಂತಹ ಒಂದು ಘೋರ ಕೃತ್ಯ ಹೇಗೆ ನಡೆಯಿತು ಮತ್ತು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದರ ಮಹತ್ವ ಏನು ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಿಲಾಗಿದೆ. 1919ರ ಸಂಜೆ, ಹತ್ಯಾಕಾಂಡದ ಬಳಿಕ ಮಹಿಳೆಯೊಬ್ಬಳು ತನ್ನ ಗಂಡನನ್ನು ಹುಡುಕುತ್ತಾ ಜಲಿಯನ್ ವಾಲಾ ಬಾಗ್ ಗೆ ತಲುಪಿದ ಸಂದರ್ಭವನ್ನು ತನ್ನದೇ ಮಾತುಗಳಲ್ಲಿ ಹೇಳುವುದರ ಜೊತೆಗೆ ಇದರ ನಿರೂಪಣೆ ಶುರು ಆಗುತ್ತದೆ. ಜನರಲ್ ಡೈರ್ ನಡೆಸಿದ ಈ ದಾರುಣ ಕಥೆಯನ್ನು ಓದಿ ತಿಳಿದುಕೊಳ್ಳಿ. ಇದು ಬೇಸರ ತರುವ ಕಥೆ, ಆದರೆ ನಮ್ಮ ಇತಿಹಾಸದ ಅರಿವಿಗಾಗಿ ಓದಲೇ ಬೇಕಾದ ಪುಸ್ತಕ.
ಲೇಖಕರು: ಭೀಷ್ಮ ಸಹಾನಿ
ಚಿತ್ರಗಳು: ಪ್ರಶಾಂತ ಮುಖರ್ಜಿ
ಅನುವಾದ: ಜಿ.ಆರ್. ರಂಗಸ್ವಾಮಯ್ಯ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ
ಬೆಲೆ: ರೂ.35/-
7-8ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಸಾಧಾರಣವಾಗಿ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತದೆ www.nbtindia.gov.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************