-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 51

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 51

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 51
ಲೇಖಕರು : ಐರಿನ್ ಫರ್ನಾಂಡಿಸ್
ಸಹಶಿಕ್ಷಕಿ
ಲಿಟ್ಲ್  ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ 
ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
Mob: +91 80735 47398
           
      
       
         ಕಳೆದ 20 ವರ್ಷಗಳ ನನ್ನ ಶಿಕ್ಷಕ ವೃತ್ತಿಯ ಅನುಭವದ ಪ್ರಕಾರ, ನಾನು ನೋಡಿದ ಹಲವು ವಿದ್ಯಾರ್ಥಿಗಳಲ್ಲಿ, ಕೆಲವರು ತುಂಬಾ ವಿಶಿಷ್ಟ  ಜ್ಞಾನವನ್ನು ಹೊಂದಿದ್ದರೆ, ಕೆಲವರಿಗೆ ಬರವಣಿಗೆ ಕೂಡಾ ತುಂಬಾ ಕಷ್ಟವಾಗುತ್ತಿತ್ತು. ಅಂಥ  ಮಗುವನ್ನು 10ನೇ ತರಗತಿಯಲ್ಲಿ ಪಾಸ್ ಮಾಡೋದು ಒಂದು  ಸವಾಲಾಗುತ್ತಿತ್ತು. ಆದರೆ ನಾನು ಕಂಡುಕೊಂಡ ಒಂದು ದಾರಿಯೇ ಬೇರೆಯಾಗಿತ್ತು. ಕಲಿಕೆಯಲ್ಲಿ ಉತ್ತಮವಾಗಿರುವ ಮಗುವಿಗೆ ಪೂರ್ತಿ ಅಂಕ ಬರುವಂತೆ ದಿನನಿತ್ಯ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ರೀತಿಯನ್ನು ಹೇಳಿಕೊಡುತ್ತಿದ್ದೆ. ಅದರಂತೆ ಮಗು ನೂರಕ್ಕೆ ನೂರು, 125ಕ್ಕೆ 125 ಅಂಕಗಳು ನನ್ನ ವಿಷಯದಲ್ಲಿ ಪಡೆದಿದ್ದಾರೆ. ಇದು ತುಂಬಾ ಸಂತೋಷದ ವಿಷಯ. 
      ಆದರೆ ಕಲಿಕೆಯಲ್ಲಿ ತುಂಬಾ ಹಿಂದೆ ಇರುವ ಮಗು, ಪರೀಕ್ಷೆ ಹತ್ತಿರ ಬರುವಾಗ ಆ ಮಗುವಿನ ಒದ್ದಾಟ, ಕಣ್ಣೀರು ನನಗೆ ತುಂಬಾ ದುಃಖ ವಾಗುತ್ತಿತ್ತು. ಆದಕಾರಣ ನಾನು ಒಂದು ಹೊಸ ದಾರಿಯನ್ನು ಇಂಥ ಮಗುವಿನ ಕಲಿಕೆಯಲ್ಲಿ ಕಂಡುಕೊಂಡೆ. ಅದೇನೆಂದರೆ  ಪರೀಕ್ಷೆಗೆ  ಬರುವ ಕೆಲವು ನಿಶ್ಚಿತ ಪ್ರಶ್ನೆಗಳನ್ನು ವರ್ಷದ ಪ್ರಾರಂಭದಿಂದಲೇ ಬರೆಸಲು ಪ್ರಾರಂಭಿಸಿದೆ. ಅಷ್ಟೇ ಅಲ್ಲ ಕನ್ನಡ ವಿಷಯದ ಪಾಸಿಂಗ್ ಪ್ಯಾಕೆಜ್ ಉತ್ತಮವಾಗಿ ರಿವಿಶನ್ ಮಾಡಿಸಿದ್ದೆ. ಪ್ರತಿ ಪಾಠದ ವಿಷಯವನ್ನು ಕೇವಲ ಐದು ವಾಕ್ಯಗಳಲ್ಲಿ ಬರುವಂತೆ ಅದನ್ನು ರಚಿಸಿದೆ. ಈ ವಾಕ್ಯಗಳು ಮಗುವಿಗೆ ಎರಡು ಮೂರು ಅಂಕಗಳಿಗೆ ಹಾಗೂ ಸಂದರ್ಭಗಳು ಬರೆಯಲು ಅನುವು ಮಾಡಿಕೊಟ್ಟಿತು. ಇದರಿಂದ ಮಗು ಹಠ ಹಿಡಿದು ಬರೆದು ಕೊನೆಯಲ್ಲಿ  ಹಿಂದಿ 28  ಹಾಗೂ ಕನ್ನಡ ಭಾಷೆಯಲ್ಲಿ 36ಅಂಕಗಳನ್ನು ಗಳಿಸಲು  ಸಾಧ್ಯವಾಯಿತು. ಅಷ್ಟೇ ಅಲ್ಲ ಮಗುವಿಗೆ ನೀನು ಕೊನೆಯಲ್ಲಿ ಪಾಸು ಆಗುತ್ತೀಯಾ ಎಂದು ಪ್ರೇರಣೆಯನ್ನು ನೀಡುತ್ತಿದ್ದೆ. ಕೇವಲ ಪಾಸಾಗಲು ಒದ್ದಾಡುವ ಮಗುವಿನ ನಗು ನನಗೆ ತುಂಬಾ ಸಂತೋಷ ನೀಡಿದೆ. ಯಾಕೆಂದರೆ ಒಂದು ಮಗು ತನಗೆ ಬರೆಯಲು ತುಂಬಾ ಕಷ್ಟ ಎಂದು ಭಾವಿಸಿ ತನ್ನ ಭವಿಷ್ಯನೇ ಮುಗಿಯಿತು ಎಂದು ತಿಳಿಯುವಾಗ, ಕೊನೆಗೆ ತಾನು ಪಾಸು ಎಂದು ಗೊತ್ತಾದಾಗ ಆ ಮಗುವಿನ ಸಂತೋಷ ನನ್ನ ಮನಸ್ಸಿಗೆ ತುಂಬಾ ಖುಷಿಯನ್ನು ನೀಡಿದೆ. 
         ಒಂದು ಮಗು 3ನೇ ತರಗತಿ ತನಕ ಶಾಲೆಗೆ ಹೋಗಿ, ಮುಂದೆ ಶಾಲೆಗೆ ಹೋಗದೆ ಮನೆ ಕೆಲಸೇಕ್ಕೆ ಸೇರಿದ್ದಳು. ಆದರೆ ಮುಂದೆ ನೇರವಾಗಿ 8ನೇ ತರಗತಿಗೆ ಸೇರುತ್ತಾಳೆ. ಅವಳಿಗೆ ನೋಟ್ ಪುಸ್ತಕದಲ್ಲಿ ಬರೆಯುವುದು ಹೇಗೆ ಎಂದು ಗೊತ್ತಿರಲಿಲ್ಲ. ಆದರೆ ಅವಳ  ಕಲಿಯುವ ನಿಷ್ಠೆ ಇಂದು ಅವಳು ಓರ್ವ ಶಿಕ್ಷಕಿ ಯಾಗಿ ಹಲವು ಮಕ್ಕಳಿಗೆ ಕಲಿಸುತ್ತಿದ್ದಾಳೆ.  ನನ್ನ ಅನಿಸಿಕೆ ಇಷ್ಟೇ ಪ್ರತಿಯೊಂದು  ಮಗುವಿನ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ  ಸಾಧನೆ ಅಡಗಿದೆ. ಬನ್ನಿ  ಮಾನವೀಯ ಮೌಲ್ಯಗಳನ್ನು ಕಲಿಸಿ ಉತ್ತಮ ಪ್ರಜೆಗಳನ್ನು ಸೃಷ್ಟಿಸೋಣ. 
.................................. ಐರಿನ್ ಫರ್ನಾಂಡಿಸ್
ಸಹಶಿಕ್ಷಕಿ
ಲಿಟ್ಲ್  ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ 
ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
Mob: +91 80735 47398
*******************************************


Ads on article

Advertise in articles 1

advertising articles 2

Advertise under the article