ಪ್ರೀತಿಯ ಪುಸ್ತಕ : ಸಂಚಿಕೆ - 118
Friday, July 5, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 118
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ..... ನಾಟಕ ನೋಡಲು ನಿಮಗೆ ಇಷ್ಟವೇ.. ನಾಟಕ ಮಾಡಲು ಇಷ್ಟವೇ ಅಥವಾ ಓದಲು ಇಷ್ಟವೇ? ಈ ಪುಸ್ತಕದಲ್ಲಿ ನಿಮಗೆ ಖುಶಿ ಕೊಡುವ ಐದು ನಾಟಕಗಳನ್ನು ನೀವು ಓದಬಹುದು. ನಿದ್ರಾನಗರಿ, ಮೊಲಂಸಿಂಹಂ ಕೊಂದ ಕತೆ, ಹಿಮಮಣಿ, ಗುಳಿಯಪ್ಪ, ಕೋರೆ ಹಲ್ಲು – ಇವು ನಾಟಕದ ಹೆಸರುಗಳು. ನಗು ಬರುವ, ಕುತೂಹಲ ಹುಟ್ಟಿಸುವ, ಬೆರಗು ಹುಟ್ಟಿಸುವ ನಾಟಕಗಳು ಇಲ್ಲಿವೆ. ಜೀವನದ ಮೌಲ್ಯಗಳನ್ನೂ ನಾಟಕಗಳಲ್ಲಿ ಹೆಣೆದಿದ್ದಾರೆ. ಕೋರೆಹಲ್ಲು ನಾಟಕದಲ್ಲಿ ರಾಕ್ಷಸನಿಗೇ ಹಲ್ಲು ಇರುವುದಿಲ್ಲ. ಅದಕ್ಕಾಗಿ ಅವನಿಗೆ ನಾನ್ವೆಜ್ ತಿನ್ನೋದಕ್ಕೇ ಆಗುವುದಿಲ್ಲ. ಹುಟ್ಟುವಾಗಲೇ ಅವನಿಗೆ ಕೋರೆಹಲ್ಲು ಇತ್ತು. ಅದಕ್ಕೇ ಅವನಿಗೆ ಕೋರ ಅಂತ ಅವನ ಅಮ್ಮ ಹೆಸರು ಇಟ್ಟಿದ್ದರು. ಅವನ ಅಣ್ಣನಿಗೆ ಉಬ್ಬುಹಲ್ಲು. ಅದಕ್ಕೆ ಅವನ ಹೆಸರು ಉಬ್ಬ. ಈ ಕೋರೆಹಲ್ಲನ್ನು ಅವನು ಹೇಗೆ ಕಳೆದುಕೊಂಡ? ತಿಳಿಯಲು ಓದಿ ನೋಡಿ. ಹೀಗೇ ಇತರ ನಾಟಕಗಳೂ ಇವೆ. ಈ ನಾಟಕಗಳನ್ನು ಬಹಳಷ್ಟು ತಂಡಗಳು ಮಾಡಿದ್ದಾರೆ. ನೀವೂ ಓದಿ ನೋಡಿ, ಮಾಡಿ ನೋಡಿ.
ಲೇಖಕರು: ಡಾ. ಕಾತ್ಯಾಯಿನಿ ಕುಂಜಿಬೆಟ್ಟು
ಪ್ರಕಾಶಕರು: ಎಸ್.ಎಲ್.ಎನ್ ಪಬ್ಲಿಕೇಶನ್ಸ್, ಬೆಂಗಳೂರು
ಬೆಲೆ: ರೂ.200/-
6-7ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 9972129376
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************