ಮಕ್ಕಳ ಕವನಗಳು : ಸಂಚಿಕೆ - 19 : ಕವನ ರಚನೆ : ಸೃಷ್ಟಿ ಎ ಶೆಟ್ಟಿ, 10ನೇ ತರಗತಿ
Friday, July 5, 2024
Edit
ಮಕ್ಕಳ ಕವನಗಳು : ಸಂಚಿಕೆ - 19
ಕವನ ರಚನೆ : ಸೃಷ್ಟಿ ಎ ಶೆಟ್ಟಿ
10ನೇ ತರಗತಿ
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ.
ಮಂಗಳೂರು ಉತ್ತರ ವಲಯ, ದಕ್ಷಿಣಕನ್ನಡ ಜಿಲ್ಲೆ
ಜನರೇ ತುಂಬಿದ ನಾಡಿದು
ಭರತನಾಳಿದ ಪುಣ್ಯ ಭೂಮಿ ಇದು
ಭಾರತ ಎನ್ನುವುದು ಸರ್ವರು.....
ಇರುವುದು ಹಲವು ಹೆಸರು
ಭಾರತೀಯರ ಉಸಿರು
ಭಾರತ ಭಾರತ ಭಾರತ
ಎಲ್ಲರ ನಾಡಿಮಿಡಿತ
ವಿವಿಧತೆಯಲ್ಲಿ ಏಕತೆಯನ್ನು
ಕಂಡ ದೇಶವಿದು
ಇಲ್ಲಿ ವೈವಿಧ್ಯತೆ ಇರುವುದು,
ಸಂಸ್ಕೃತಿ ಇರುವುದು
ಸಂಪ್ರದಾಯ ಇರುವುದು
ಇದುವೇ ಭಾರತದ ವಿಶೇಷತೆ
ಕಂಡು ಕೇಳರಿಯದ ಪಾವಿತ್ರ್ಯತೆ
ಆಹಾರ ವಿಹಾರದಲ್ಲಿ
ಹೊಸತನ ತಂದ ನಾಡಿದು
ಆಚಾರ ವಿಚಾರ
ಹೊಸತರ ಪರಿಚಯಿಸಿದ ನಾಡಿದು
ಸ್ನೇಹ ಸೌಹಾರ್ದತೆಯ ರಾಷ್ಟ್ರ
ಭಾರತ ಮಾತ್ರ
ಸ್ನೇಹಜೀವಿಗಳು ಇರುವುದು
ಇಲ್ಲಿ ಮಾತ್ರ
ಭಾರತ ದೇಶ ನಮ್ಮದು
ಹಿಂದು ಇಂದು ಮುಂದು
ಎಂದೆಂದು ಉಳಿಸುವ ಕರ್ತವ್ಯ ನಮ್ಮದು.
............................................ ಸೃಷ್ಟಿ ಎ ಶೆಟ್ಟಿ
ಹತ್ತನೇ ತರಗತಿ
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ.
ಮಂಗಳೂರು ಉತ್ತರ ವಲಯ, ದಕ್ಷಿಣಕನ್ನಡ ಜಿಲ್ಲೆ
********************************************
ಏಳು ಬೀಳುವಿನ ದಾರಿ
ಬಿದ್ದು ಎದ್ದಾಗಲೇ ಸಿಗುವುದು
ನಗುವಿನ ಹೆದ್ದಾರಿ
ದಾಟಲಿರುವುದು ಕವಲುದಾರಿ
ಬದುಕಿನಲ್ಲಿ ಪ್ರತಿ ಬಾರಿ
ಇರುವುದು ಹೆದರಿಕೆ ಭಾರಿ
ಪ್ರಯತ್ನ ಒಂದೇ
ಎಲ್ಲಾ ಸಂಕಷ್ಟಗಳಿಗೆ ಪರಿಹಾರಿ
ಚುಚ್ಚುವ ಜನರೇ ಭಾರಿ
ಚುಚ್ಚುವರು ಪ್ರತಿ ಬಾರಿ
ಮುನ್ನುಗ್ಗುವ ಜನರೇ ರಾಯಭಾರಿ
ಮುನ್ನುಗ್ಗಲಿರುವುದು ಪ್ರತಿ ಸಾರಿ
ತಡಮಾಡಬೇಡ ತೊಡು ನಿನ್ನ ಗರಿ
ಹಕ್ಕಿಯಂತೆ ಹಾರಿ
ಸೇರು ನಿನ್ನ ಗುರಿ
............................................ ಸೃಷ್ಟಿ ಎ ಶೆಟ್ಟಿ
ಹತ್ತನೇ ತರಗತಿ
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ.
ಮಂಗಳೂರು ಉತ್ತರ ವಲಯ, ದಕ್ಷಿಣಕನ್ನಡ ಜಿಲ್ಲೆ
********************************************
ವಿಶೇಷ ಸಂಬಂಧ
ನೋಡಲು ಚಂದ
ಇದು ಒಡನಾಟದಾನುಬಂಧ
ಪ್ರೀತಿ-ಸ್ನೇಹವ
ಕೊಟ್ಟವರು,
ಕಷ್ಟ-ಸುಖವ ಒಟ್ಟಿಗೆ ಕಂಡವರು,
ಸ್ನೇಹ ಎಂಬ ಬೀಜವ ಬಿತ್ತಿದವರು,
ಗೆಳೆಯ ಎಂದು ಪರಿಚಯಿಸಿದವರು
ಗೆಳೆಯರಲ್ಲವೇ ನಮ್ಮ ಗೆಳೆಯರಲ್ಲವೇ..... ?
ಹೊಸ ದಿನದ ಆಗಮನ
ಹಳೆ ಗೆಳೆಯರ ನಿರ್ಗಮನ
ನೋವಿನಿಂದಲೇ ತುಂಬಿದೆ ಮನ
ಇದು ಮರೆಯಲಾಗದ ಬಂಧನ
ಸಾಗಬೇಕಿದೆ ಬದುಕಿನ ಪಯಣ,
ಗೆಳೆಯನನ್ನು ಕರೆದು ಹೇಳೋಣ,
"ಕಳೆದೆವು ಜೊತೆಯಲ್ಲಿ ಅನುದಿನ,
ಇದ್ದೆವು ಜೊತೆಯಲ್ಲಿ ಪ್ರತಿಕ್ಷಣ"
ಆದರೆ ಇನ್ನು ಬರೋದಿಲ್ಲ ಆದಿನ
ಕಳೆದೋಯ್ತು ಆ ಕ್ಷಣ..!
ನೆನಪುಗಳು ಮಾತ್ರ ಅನುದಿನ
ನೆನಪಾಗುತ್ತೆ ಪ್ರತಿಕ್ಷಣ...!
ಆದರೂ,
ನಾವು ಗೆಳೆಯರಲ್ಲವೇ... ?
ನಾವು ಗೆಳೆಯರಲ್ಲವೇ... ?
ಹತ್ತನೇ ತರಗತಿ
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ.
ಮಂಗಳೂರು ಉತ್ತರ ವಲಯ, ದಕ್ಷಿಣಕನ್ನಡ ಜಿಲ್ಲೆ
********************************************
ಮಾರ್ಗದರ್ಶಕ ಶಿಕ್ಷಕರು : ಐರಿನ್ ಫರ್ನಾಂಡಿಸ್, ಲಿಟಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ.