ಮಕ್ಕಳ ಕವನಗಳು : ಸಂಚಿಕೆ - 15 : ರಚನೆ : ಮಾನಸ ಜಿ 10ನೇ ತರಗತಿ
Thursday, June 13, 2024
Edit
ಮಕ್ಕಳ ಕವನಗಳು : ಸಂಚಿಕೆ - 15
ಕವನ ರಚನೆ : ಮಾನಸ ಜಿ
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
ಭಾರತವು ಸುಲಲಿತವಾದ ಕೇದಾರ
ಆಂಗ್ಲರದನ್ನಾಗಿಸಿಕೊಂಡರು ತಮ್ಮ ಆಧಾರ
ಸಹಿಸಲಾಗದ ಭಾರತೀಯರ ಕಷ್ಟಗಳ ದುಸ್ತರ
ಭಾರತೀಯರಿಗೆ ಅವರು ಬಂಧಿಸುವ ಪಂಜರ
ರಾಷ್ಟ್ರನಾಯಕರ ನಿಷ್ಪಕ್ಷಪಾತ ದುಡಿತ
ಭಾರತೀಯರಿಗೆ ಸ್ಫೂರ್ತಿಯ ಸ್ವಾತಂತ್ರ್ಯದ ಪಥ
ದೇಶವನ್ನು ಸ್ವತಂತ್ರವನ್ನಾಗಿಸುವ ಎದೆಯ ಮಿಡಿತ
ಭಾರತೀಯರಿಗೆ ಲಭಿಸಿತು ಸ್ವಾತಂತ್ರ್ಯದ ಅನುಭೂತ....
ಅನೇಕ ಸಂಸ್ಕೃತಿಗಳ ಸಂದೋಹ
ನವಜಾತ ವಿಷಯಗಳ ಸಮ್ಮದ
ಭರತ ವರ್ಷವೆಂದೇ ಇತಿಹಾಸದಲೇ ಪ್ರಸಿದ್ಧ
ಭಾರತದ ವಿಷಯಗಳ ಜಗತ್ತಿಗೆ ಆಯುಧ
ಭಾರತವು ಪರಿಚಯಿಸಿದ ಯೋಗ
ಹಲವು ಖಾಯಿಲೆಗಳಿಗೆ ಸುಯೋಗ
ವಿದೇಶದಲ್ಲಿ ಯೋಗಗಳ ಆಯೋಗ
ವಿಶ್ವ ಗುರುವೆಂಬ ಅಭಿಮಾನದ ಗದ್ದುಗ
ಬಾಹ್ಯಾಕಾಶದಲ್ಲಿ ಮಿಂಚಿದ
ಗಗನಯಾತ್ರಿಯರ ಉತ್ಸಾಹ
ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಅಂಭೋರುಹ.....
ಚಂದ್ರಯಾನ-2 ರ ಪ್ರಯತ್ನಗಳಾದವು ನಷ್ಟ
ಚಂದ್ರಯಾನ-3 ರ ಪ್ರಯತ್ನಗಳಾದವು ಅಷ್ಟ.....
ಇಂದಿನ ಆಧುನಿಕ ಯುಗದತ್ತ
ಭಾರತದ ಸಾಧನೆಯು ಉತ್ತುಂಗದತ್ತ…..
ಕೆಲ ದೇಶಗಳಿಗೆ ಭಾರತವು ನಿಕೃಷ್ಟ
ಅವರಿಗೇನು ಗೊತ್ತು ಭಾರತವು ಹೇಗಂತ....
ಬೃಹತ್ ಸಂವಿಧಾನ ಹೊಂದಿದ ಭಾರತ
ನಿಷ್ಪಕ್ಷಪಾತ ಆಡಳಿತ ಸಾಧ್ಯ ಖಂಡಿತ.....
ಭಾರತದ ಆಡಳಿತ ಸೂತ್ರ ಜಗತ್ತಿಗೆ ಆದರ್ಶ
ಭಾರತೀಯರಿಗೆ ಇಂದೊಂದು
ಉದಯೋನ್ಮುಖ ಹರ್ಷ.....
............................................... ಮಾನಸ ಜಿ
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
********************************************
ನನ್ನೊಳುಂಟು ಮಾಡಿತು ಹೊಸ ಸೆಲೆ....
ಸಮುದ್ರ ತುಂಬಾ ವಿಶಾಲ
ಅದನ್ನು ನೋಡಲು ಸಂಜೆಯು ಸಕಾಲ....
ಸಮುದ್ರದ ಅಲೆಗಳ ಶಬ್ದಗಳು
ಬಾನಲ್ಲಿ ಹಾರಾಡುವ ಬಾನಾಡಿಗಳು..
ಕೆಂದಾವರೆಯಂತೆ ಕಂಗೊಳಿಸುತಿರ್ಪ ಸೂರ್ಯ
ಸೂರ್ಯ ಮುಗಿಸಿದ ತನ್ನ ಕಾರ್ಯ......
ಸಮುದ್ರ ಒಂದು ಪ್ರೇಕ್ಷಣೀಯ ಸ್ಥಳ
ಅದುವೆ ಆನಂದ ತುಂಬಿದ ಕೊಳ...
ಸಮುದ್ರದ ಉಪ್ಪು ನೀರ ನೋಡಿದೆ
ಆ ಕೂಡಲೇ ನಾನು ನೀರಿಗೆ ಜಿಗಿದೆ.....
ವಿಶಾಲವಾದ ನೀರಿನ ಗುಂಪು
ನವಜಾತ ವಿಷಯಗಳ ಸೊಂಪು....
ಕಡಲ ತೀರದ ಭಾರ್ಗವರಾದ ಕಾರಂತರು
ನಾನು ಆಗುವೆನು ಹೇಗೆ ಭಾರ್ಗವರಾದರು ಅವರು....
ಸಮುದ್ರದಲೆಗಳಂತೆ ವಿಷಯಗಳು
ಅಪ್ಪಳಿಸಿತು ಮನಕೆ
ಸಮುದ್ರದಂತೆಲ್ಲರ ಮನಸ್ಸು
ವಿಶಾಲವಾಗಿರಲಿ ನನ್ನ ಬಯಕೆ.....
ಸಮುದ್ರದ ಪ್ರತಿಕಣವು ವಿಷಯಗಳ ಹೊದಿಕೆ
ಸಮುದ್ರಕ್ಕಿದೆ ತನ್ನದೇ ಆದ ದೊಡ್ಡಸ್ತಿಕೆ......
ಕಡಲ ತೀರದಲ್ಲಿ ಕುಳಿತ ನನ್ನ ಪುಟ್ಟ ಮನಸು
ಕಾತರಿಸಿ ಕಾಯುತಿದೆ ಅಲೆಗಾಗಿ ಲಂಘಿಸು......
ಬಂದಲೆಯನ್ನು ನೋಡಲೋಡುತ
ಬಿಡಲು ಏದುಸಿರು
ನಿವಾರಣೆಯಾಯಿತು ನನ್ನ ಮನಸ್ಸಿನ ಅಲರು.....
ಕಡಲಿನ ನಿಟ್ಟುಸಿರೇ ಮುಗಿಲು
ಮುಗಿಲಿನ ಕಂಬನಿಯೇ ಕಡಲು......
ಕಡಲಿನ ಭೋರ್ಗರೆತದ ಅಳಲು
ನೊಂದ ಮನಸ್ಸಿನಿಂದ
ನಾ ಓಡಿದ ರೀತಿ ಮೆಟ್ಟಿಂಗಾಲು....
............................................... ಮಾನಸ ಜಿ
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
********************************************
ಸೃಷ್ಠಿಯ ಮೂಲಾಧಾರ ನೀ.....
ಕಾವ್ಯವು ನೀನೇ, ಕವನವು ನೀನೇ
ಪ್ರತಿ ಕ್ಷಣದ ಏಳಿಗೆ ನೀನೇ.....
ಭೂತಕಾಲ, ಭವಿಷ್ಯತ್ ಕಾಲ ಎಂಬುವಿಲ್ಲಾ
ಇರುವುದು ನೀ ಅಂದುಕೊಂಡಾಗ ಅದೆಲ್ಲಾ....
ಮನುಜನೇ ನೀನೊಂದು ಮಿಸುಗಿನ ಕಾವ್ಯ
ಸೃಷ್ಠಿಗೇ ನೀನೊಂದು ಸಂಭ್ರಮದ ನವ್ಯ.......
ತೆರೆದರೇ ನಿನ್ನೊಳಗಿನ ಹೃದಯದ ಕಣ್ಣು
ಚಿಚ್ಚತ್ತಿಯಿಂದ ಚವಿಯಾದ ಸೃಷ್ಠಿಯ ಕಣ್ಣು......
ವಸುಂಧರೆಯ ಪ್ರತಿಕಣವೂ ಕವಿತೆ
ಮಾಡು ನೀ, ನಿನ್ನಯ ಹೊಸತನದ ಯಶೋಗಾಥೆ.....
ಮರೆಯದಿರು ನಿನ್ನೊಳಗಿನ ಆತ್ಮಜ್ಯೋತಿ
ಆತ್ಮಜ್ಯೋತಿ ಇಲ್ಲದೇ ಕುಗ್ಗುವುದು ಸೃಷ್ಠಿಯ ಕಾಂತಿ .......
ಪ್ರಕೃತಿಯ ಪ್ರತಿಕಣದಿಂದಾಗಿದೆ ನಿನ್ನ ಕಾಯ
ನೀನಿಲ್ಲದೆ ಸೃಷ್ಠಿಯ ಹೃದಯ ನಿರ್ದಯ ......
ಪಂಚ ಚಕ್ರ ಆಡಗಿದೆ ನಿನ್ನ ಕಾಯದಲ್ಲಿ
ಅದರೇಳಿಗೆಯ ಫಲವೇ ನೀನೇ ಸೃಷ್ಟಿಯಲ್ಲಿ.......
ಮನುಜನೇ ನೀನೇ ದೇವರ ರೂಪ
ನಿನ್ನೊಳಗೇ ಇದೇ ನೋಡದ ಆ ಒಂದು ಪ್ರತಿರೂಪ.....
ಮನುಜನಿಲ್ಲದೆ ದೇವರಿಲ್ಲ, ದೇವರಿಲ್ಲದೆ ಮನುಜನಿಲ್ಲ
ಅಹಂ ಬ್ರಹ್ಮಾಸ್ಮಿ ತತ್ವವೇ ನೀನಿಲ್ಲದಿದ್ದರೇ ಇಲ್ಲ .....
ಮನುಜನೇ ಈ ಸೃಷ್ಠಿಯ ಅದಮ್ಯ ಗುಟ್ಟು
ನೀ ಇದನ್ನರಿತಾಗ ಗುಟ್ಟಾಗುವುದು ರಟ್ಟು.....
ಮನುಜ ನೀ ನಡೆದ ಹಾದಿಯೇ ಸೃಷ್ಠಿಯ ನಿಟ್ಟು
ಮನುಜ ನೀನೇ ಜಘನ್ಯವಾದರೇ
ಸೃಷ್ಟಿಗೇ ಪೆಟ್ಟು ......
............................................... ಮಾನಸ ಜಿ
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
********************************************
ಬದುಕಿನುದ್ದಗಲಕ್ಕೂ ಹೋರಾಟ!
ಸತ್ಯವನ್ನು ಸುಳ್ಳೆಂದು ಮಾಡಲು ಹೋರಾಟ
ಎಲ್ಲರ ಮುಂದೆ ಸಾಚಾವಾಗಲು ಹೋರಾಟ !
ಮೋಸ ಮಾಡಿ ಗೆಲ್ಲಲು ಹೋರಾಟ
ಗೆದ್ದು ಮೆರೆಯಲು ಹೋರಾಟ!
ಮೆರೆದು ಪಡೆಯಲು ಹೋರಾಟ
ಪಡೆದು ಬದುಕನ್ನು ಬದುಕಲು ಹೋರಾಟ !
ಬಡವರ ಜೀವ ಹಿಂಡಲು ಹೋರಾಟ
ಅವರ ದುಡಿತದ ಬೆವರ ಕದಿಯಲು ಹೋರಾಟ !
ಅವರನ್ನೇ ಮೆಟ್ಟಿಲಾಗಿಸಿಕೊಳ್ಳಲು ಹೋರಾಟ
ಮೋಡಿ ಮಾಡುವ ಶ್ರೀಮಂತರಾಗಲು ಹೋರಾಟ !
ಐಷಾರಾಮಿಯಾಗಿ ಬದುಕಲು ಹೋರಾಟ
ಕಪಟ ಸಹಾಯ ಮಾಡಿದಂತೆ ತೋರಿಕೊಳ್ಳಲು ಹೋರಾಟ !
ಇನ್ನೊಬ್ಬರ ಬಾಳನ್ನು ಕದಿಯಲು ಹೋರಾಟ
ಲಂಚ ಕೊಟ್ಟು ಆಸೆ ತೋರಿಸಲು ಹೋರಾಟ !
ಕೌಟಿಲ್ಯವನ್ನು ತೋರ್ಪಡಿಸಲು ಹೋರಾಟ
ಇನ್ನೊಬ್ಬರ ಕಣ್ಣೀರನ್ನು ನೋಡಲು ಹೋರಾಟ !
ಕ್ರೌರ್ಯವನ್ನು ಮಾಡಲು ಹೋರಾಟ
ಮೋಸದಿಂದ ಗದ್ದುಗೆಯನ್ನೇರಲು ಹೋರಾಟ !
ಕೆಟ್ಟ ಮನಸ್ಸಿನಿಂದ ನಿನಗೆ ನೀ ಮಾಡಿದ ಹೋರಾಟ
ಕೊಂದಂತಾಯಿತು ನಿನ್ನಾತ್ಮವನ್ನೇ ಮಾಡಿ ಹೋರಾಟ!
ಮಾಡು ನೀ ಒಳ್ಳೆಯ ಆದರ್ಶದ ಹೋರಾಟ
ಮಾಡಿ ಆಗುವೇ ನೀನೇ ದೈವಿಕ ಹೋರಾಟ !
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
********************************************