ಪ್ರೀತಿಯ ಪುಸ್ತಕ : ಸಂಚಿಕೆ - 117
Friday, June 28, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 117
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ...... ಇಲ್ಲಿ ಒಬ್ಬ ಹುಡುಗನಿಗೆ ಶಾಲೆ ಅಂದರೆ ತುಂಬಾ ಇಷ್ಟ. ಅವನ ಶಾಲೆ ಅವನನ್ನು ಅಷ್ಟಾಗಿ ಇಷ್ಟಪಡುವುದಿಲ್ಲ ಅಂತ ಗೊತ್ತಿದೆ ಅವನಿಗೆ. ಯಾರೂ ನೋಡದಾಗ ಅವನ ಸ್ನೇಹಿತರು ಅವನನ್ನು ಹೆದರಿಸುತ್ತಾರೆ. ಶಿಕ್ಷಕರು ಅವನ ಮೇಲೆ ಕೂಗಾಡುತ್ತಾರೆ. ಆಗ ಅವನಿಗೆ ತುಂಬಾ ಮೀನುಗಳಿರುವ ಕೊಳ ಕಾಣುತ್ತದೆ. ಮತ್ತೆ ಅವನು ಒಂಟಿ ಅಲ್ಲ ಅಂತ ಅಂದುಕೊಳ್ಳುತ್ತಾನೆ. ಅವನಿಗೆ ಕಪ್ಪು ಹಲಗೆಯ ಮೇಲೆ ಚಾಕ್ ನಲ್ಲಿ ಗೀಚಿರುವುದು ಅಲೆಯ ತರಹ ಕಾಣುತ್ತದೆ. ಇಷ್ಟು ಓದುವಾಗಲೇ ನಿಮಗೆ ಆಶ್ಚರ್ಯ ಆಗಬಹುದು. ನಮ್ಮ ಸುತ್ತ ಮುತ್ತ ಕೂಡಾ ಹೀಗೆ ನೊಂದುಕೊಳ್ಳುವ ಮಕ್ಕಳು ಇರುತ್ತಾರೆ. ನಾವು ಅವರನ್ನು ನೋಡಿ ತಮಾಷೆ ಮಾಡುವುದೂ ಇದೆ. ಅಥವಾ ಅವರನ್ನು ಅರ್ಥಮಾಡಿಕೊಳ್ಳುವುದಿಲ್ಲ. ಓದಿ ನೋಡಿ. ತಮಾಷೆ ಮಾಡದೆ ಅರ್ಥಮಾಡಿಕೊಳ್ಳುವ ಭಾವ ಬೆಳೆಯಲಿ.
ಲೇಖಕರು: ಜೈರಾಜ್ ಸಿಂಗ್
ಚಿತ್ರಗಳು: ಭಾರ್ಗವಿ ರುದ್ರರಾಜು
ಅನುವಾದ: ವಾಣಿ ಪೆರಿಯೋಡಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.90/-
ಹೊಸದಾಗಿ ಅಕ್ಷರ ಕಲಿತ ಹದಿವಯಸ್ಸಿನ ಓದುಗರಿಗಾಗಿ ಸಿದ್ಧಪಡಿಸಿದ ಪುಸ್ತಕ ಇದು. 5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************