-->
ಮಕ್ಕಳ ಕವನಗಳು : ಸಂಚಿಕೆ - 17: ರಚನೆ : ಶ್ರೇಯಾ 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 17: ರಚನೆ : ಶ್ರೇಯಾ 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 17
ಕವನ ರಚನೆ : ಶ್ರೇಯಾ 
10ನೇ ತರಗತಿ 
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ

          


       
ಆಕಾಶದಿಂದಿಳಿದ ಮುತ್ತಿನ ಹನಿಗಳು 
ರೈತರಿಗದೆ ಚಿನ್ನದ ಗಣಿಗಳು 
ನಗರದ ಜನರಿಗೆ ಮಳೆಯ ಗೋಳಾಟ 
ಹಳ್ಳಿಗರಿಗೆ ಅದೇ ರಂಗಿನಾಟ 

ಧರೆಗೆ ಇಳಿದಿದೆ ವರುಣನ ಆರ್ಭಟ 
ಇದೇನು ವರುಣನ ಮಾಟ 
ಮನೆ ಮಠಗಳೆಲ್ಲವೂ ಕೊಚ್ಚಿ ಹೋಗಲು 
ಕೇಳಲಾಗದು ಜನರ ಅಳಲು 

ಎಲೆಗಳ ಮೇಲೆ ಮಳೆಯ ಹನಿಯ ಚಪ್ಪರ 
ಅದ ನೋಡಲು ನನ್ನ ಮನಸಿಗೆ ಕಾತುರ 
ಬಿಸಿಲ ತಾಪಕ್ಕೆ ಹೂಗಳೆಲ್ಲ ಮುದುಡಲು 
ಮುಂಗಾರು ಮಳೆಯ ಲೀಲೆಗೆ ಅವು ಹಸಿರಾಗಲು 

ಕುಹೂ ಕುಹೂ ಎಂದು ಕೂಗುತಿದೆ ಕೋಗಿಲೆಯು 
ಚಡಪಡಿಸುತಿದೆ ಕಿವಿಯು ಅದ ಕೇಳಲು 
ಆಗುಂಬೆಯು ತೆರೆದಿದೆ ಸ್ವರ್ಗದ ಬಾಗಿಲು 
ಎರಡು ಕಣ್ಣು ಸಾಲದು ಅದ ನೋಡಲು
................................................. ಶ್ರೇಯಾ 
10ನೇ ತರಗತಿ 
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************

  

ನಭದಲಿ ಸುತ್ತುವರಿದಿದೆ ಬಣ್ಣಗಳ ಬಿಲ್ಲು 
ಸಹ್ಯಾದ್ರಿಯಲಿ ಹೊಮ್ಮುತಿದೆ 
ಹಚ್ಚ ಹಸಿರಿನ ಮೈಲು 
ಎಂತಹ ಮಾಯೆ ನೀಲಿ ಬಾನಲು 
ಆಹಾ! ಮೂಡಿದೆ ಅಲ್ಲಿ ಕಾಮನಬಿಲ್ಲು 

ಬಾನಲೂ ಬಿಡಿಸಬಹುದೆ ಇಂತಹ ರಂಗೋಲಿ 
ಹಕ್ಕಿಯು ತೇಲುತಾ ಹಾರುತಿದೆ ಬಾನ ಒಡಲಿನಲಿ 
ಅದ ನೋಡಿ ಕುಣಿಯುತಿದೆ ನವಿಲು ಭುವಿಯಲಿ 
ಆಹಾ! ಮೂಡಿದೆ ಅಲ್ಲಿ ಕಾಮನಬಿಲ್ಲು 

ನಭದಲಿ ಸಪ್ತ ಬಣ್ಣಗಳ ಒಡನಾಟ 
ಭುವಿಯಲಿ ಪುಟ್ಟ ಮಗುವಿಗೆ ಕುಣಿದಾಟ 
ಏನಿದು ಈ ಮಾಯಬಿಲ್ಲಿನ ಮಾಟ 
ಆಹಾ! ಮೂಡಿದೆ ಅಲ್ಲಿ ಕಾಮನಬಿಲ್ಲು
................................................. ಶ್ರೇಯಾ 
10ನೇ ತರಗತಿ 
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************


             
ಎಲ್ಲರ ಬದುಕಿನಲ್ಲಿರುವುದು ಸವಿನೆನಪಿನ ಔತಣ 
ಅದನ್ನ ನೆನಪಿಸಿಕೊಂಡರೆ ಸಾಕು ಎಲ್ಲವೂ ಮನನ 
ಎಲ್ಲರ ಬದುಕಿನಲ್ಲಿದೆ ಸವಿನೆನಪಿನ ಬರಹ 
ಅದನ್ನ ಓದಿದರೆ ಇರುವುದಿಲ್ಲ ಯಾವುದೇ ವಿರಹ 

ಒಂಟಿಯಾದಾಗ ಜೊತೆಗಿದ್ದರೆ ಸಾಕು ಸವಿನೆನಪು 
ತೊಲಗುವುದು ಜೀವನದ ಕಹಿ ಕಹಿ ನೆನಪು 
ಸವಿನೆನಪಿನ ಸ್ನೇಹ ಬಲು ಸುಂದರ 
ಸವಿನೆನಪಿದ್ದರಾಗುವುದು ಜೀವನ ಸುಖ ಸಾಗರ 

ಸವಿನೆನಪೇ ಆನಂದ.......
ಸವಿನೆನಪೇ ಆಹ್ಲಾದ.......
ಸವಿನೆನಪೇ ಮಕರಂದ.....
ಸವಿನೆನಪೇ ಸೌಗಂಧ......
ಸವಿನೆನಪೇ ಅಂದ ಚೆಂದ.....
................................................. ಶ್ರೇಯಾ 
10ನೇ ತರಗತಿ 
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************


            
ಜೀವಕ್ಕೆ ಜೀವ ಕೊಡೊ ಕರ್ಣನು ಅಪ್ಪಾ....
ಮಗಳಿಗೆ ಮೊದಲ ನಾಯಕನಿವನು ಅಪ್ಪಾ...
ಅಪ್ಪನ ಪ್ರೀತಿಯೇ ಆಸ್ತಿಯು ನಮಗೆ 
ಇವನಿಲ್ಲದೆ ಬೇರಾವ ಆಸ್ತಿಯು ಇಲ್ಲ ನಮಗೆ 

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಸಿದವ ಅಪ್ಪಾ....
ಬಿದ್ದಾಗ ಎತ್ತಿ ಮುನ್ನಡೆಸಿದವ ಅಪ್ಪಾ....
ತನ್ನ ಮಗಳನ್ನೇ ಜೀವವೆಂದು ತಿಳಿದವ ಅಪ್ಪಾ...
ಮಗಳ ಸಾಧನೆಯಲ್ಲೇ ತನ್ನ ಗೌರವವೆಂದು 
ತಿಳಿದವ ಅಪ್ಪಾ...

ತನ್ನ ಮಗನೇ ತನಗೆ ಆಧಾರವೆಂದು 
ತಿಳಿದವ ಅಪ್ಪಾ....
ಮಗನ ಶೌರ್ಯ ಸಾಹಸವನ್ನೋಡಿ 
ಹೆಮ್ಮೆ ಪಡುವನು ಅಪ್ಪಾ....

ಅಂಬಾರಿಯ ಮೇಲೇರಬೇಕೆಂದು 
ನಾ ಕೇಳಲು.....
ಅಂಬಾರಿಯ ಮೇಲೇರಿದಂತೆ ಅನುಭವವಾಗುತ್ತದೆ ಅಪ್ಪನ ಹೆಗಲು...
................................................. ಶ್ರೇಯಾ 
10ನೇ ತರಗತಿ 
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article