ಪ್ರೀತಿಯ ಪುಸ್ತಕ : ಸಂಚಿಕೆ - 115
Saturday, June 15, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 115
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಮೋರ್ ಖಾನ್ ಗೆ ಸಿನಿಮಾ ಮಾಡಬೇಕಾಗಿದೆ. ಹೊಸ ಸಿನಿಮಾಕ್ಕೆ ಹಕ್ಕಿ ಪ್ರಪಂಚದ ನಟರು ಬೇಕಾಗಿದ್ದಾರೆ. ಕಾಡಿನ ಹಕ್ಕಿಗಳಿಗೆ ಗಲಿಬಿಲಿ ಮತ್ತು ಸಂಭ್ರಮ ಕೂಡಾ. ಸಿನಿಮಾದಲ್ಲಿ ರೋಲು ಸಿಗಲು ಏನು ಮಾಡಬೇಕು ಎಂಬ ಗೊಂದಲ. ಪಟ್ಟಣದಿಂದ ಬಂದ ಕಾಗೆ ಹೇಳುತ್ತಾನೆ, ರೋಲು ಮಾಡಲು ಹೊಸ ಲುಕ್ಕು ಬೇಕು ಅಂತ. ಅಷ್ಟೇ ಅಲ್ಲ, ತಾನೇ ಹಕ್ಕಿಗಳಿಗೆ ಹೊಸ ಬಣ್ಣ, ಮೇಕಪ್, ಹೇರ್ ಸ್ಟೈಲ್ ಮಾಡುತ್ತಾನೆ. ಅಬ್ಬಾ.. ಅಬ್ಬಾ.. ಎಲ್ಲರಿಗೂ ಹೊಸ ಲುಕ್ಕು ಬರುತ್ತದೆ. ಕಾಗೆ ರಣಹದ್ದಿಗೆ ಮಾತ್ರ ತಲೆ ಬೋಳಿಸಿ, ನೋವು ಮಾಡುತ್ತಾನೆ. ಮೋರ್ ಖಾನ್ ಬಂದಾಗ ಏನಾಗುತ್ತದೆ? ಯಾರಿಗೆ ಯಾವ ರೋಲು ಸಿಗುತ್ತದೆ? ತಲೆ ಬೋಳಿಸಿಕೊಂಡ ರಣಹದ್ದಿನ ಗತಿ ಏನಾಗುತ್ತದೆ...? ಓದಿ ನೋಡಿ. ಮಜವಾದ ಭಾಷೆ ಇದೆ. ಸುಂದರವಾದ ಚಿತ್ರಗಳು ಇವೆ.
ಲೇಖಕರು: ಶಮೀಮ್ ಪದಂಸಿ
ಚಿತ್ರಗಳು: ಅಶೋಕ ರಾಜಗೋಪಾಲನ್
ಅನುವಾದ: ಅಶ್ವಿನಿ ಭಟ್
ಪ್ರಕಾಶಕರು: ತುಲಿಕಾ
ಬೆಲೆ: ರೂ.175/-
4-5ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com ;
email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************