ಮಾತೃ ಪೂಜನ ಮತ್ತು ಕೈತುತ್ತು
Wednesday, May 8, 2024
Edit
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 06
ಲೇಖನ : ಮಾತೃ ಪೂಜನ ಮತ್ತು ಕೈತುತ್ತು
ಬರಹ : ವೈಷ್ಣವಿ ಕಡ್ಯ
7ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ
ಹನುಮಾನ್ ನಗರ, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ದಿನಾಂಕ 26/3/2024 ರ ಮಂಗಳವಾರದಂದು ಶಿಶುಮಂದಿರದ ಮಕ್ಕಳ ವತಿಯಿಂದ ಮಾತೃ ಪೂಜನ, ಕೈತುತ್ತು ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಮೊದಲನೆಯದಾಗಿ ತಾಯಂದಿರೆಲ್ಲರನ್ನೂ ಕುಳ್ಳಿರಿಸಿ ಪರದೆಯನ್ನು ಕಟ್ಟಲಾಯಿತು. ಕುಳಿತ ತಾಯಂದಿರ ಕಾಲ ಪಕ್ಕದಲ್ಲಿ ಹರಿವಾಣ, ಹರಿಶಿಣ , ಕುಂಕುಮಗಳನ್ನು ಇಡಲಾಯಿತು. ಪರದೆಯ ಅಡ್ಡದಲ್ಲಿ ತಾಯಂದಿರ ಪಾದ ಕಾಣುವ ಹಾಗೆ ಮಾತ್ರ ವ್ಯವಸ್ಥೆ ಮಾಡಲಾಗಿತ್ತು. ಶಿಶುಮಂದಿರದ ಪುಟಾಣಿಗಳು ತಮ್ಮ ಅಮ್ಮನ ಕಾಲನ್ನು ಗುರುತಿಸಲು ಪ್ರಾರಂಭಿಸಿದರು. ಮಕ್ಕಳು ತಮ್ಮ ತಾಯಿಯನ್ನು ಹುಡುಕುತ್ತಾ ಅಮ್ಮ ಎಲ್ಲಿದ್ದಾರೆಂಬ ಕುತೂಹಲದಿಂದ ಮಕ್ಕಳು ಹುಡುಕುತ್ತಿದ್ದರೆ, ತಾಯಂದಿರು ತಮ್ಮ ಮಗು ತನ್ನ ಕಾಲನ್ನು ಗುರುತಿಸುವುದೋ ಇಲ್ಲವೋ ಎಂದು ಕಾತರದಿಂದ ನೋಡುತ್ತಿರುತ್ತಾರೆ. ಕೊನೆಗೂ ತಾಯಿಯ ಕಾಲನ್ನು ಮಕ್ಕಳು ಗುರುತಿಸಿದ ಬಳಿಕ ಪರದೆಯನ್ನು ತೆಗೆಯಲಾಯಿತು. ಅಮ್ಮಂದಿರಿಗೆ ಖುಷಿಯೋ ಖುಷಿ.
ತಮ್ಮ ತಾಯಿಯನ್ನು ನೋಡಿದಾಗ ಮಕ್ಕಳ ಕಂಗಳಲ್ಲಿ ಕಾಣುವ ಸಂತೋಷ ಅಷ್ಟಿಷ್ಟಲ್ಲ!
ಬಳಿಕ ಮಕ್ಕಳೆಲ್ಲರೂ ತಾಯಂದಿರ ಪಾದಪೂಜೆ ನಡೆಸಿದರು. ತಾಯಿಯ ಕಾಲನ್ನು ತೊಳೆದು ಹೂವನ್ನಿಟ್ಟು ಅರಶಿಣ, ಕುಂಕುಮ ಹಚ್ಚಿ ಆರತಿ ಬೆಳಗಿ ನಮಸ್ಕರಿಸಿದರು. ತಾಯಂದಿರು ಅಕ್ಷತೆ ಹಾಕಿ ಮಕ್ಕಳನ್ನು ಹರಸಿದರು. ಬಳಿಕ ಕೈತುತ್ತು ಕಾರ್ಯಕ್ರಮ ನಡೆಯಿತು. ತಾಯಂದಿರೆಲ್ಲರೂ ತಮ್ಮ ಮಕ್ಕಳಿಗೆ ಕೈತುತ್ತು ನೀಡಿದರು. ಇಲ್ಲಿ ಒಟ್ಟು ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಬೆಸೆಯುವ ಗಟ್ಟಿಗೊಳಿಸುವ ಭಾವನಾತ್ಮಕ ಕಾರ್ಯಕ್ರಮವಾಗಿತ್ತು.
ಮಧ್ಯಾಹ್ನದ ನಂತರ ಶಿಶುಮಂದಿರದ ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಿತು. ಪುಟ್ಟ ಪುಟ್ಟ ಪುಟಾಣಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿ ಮುದ್ದು ಮುದ್ದಾಗಿ ತಮ್ಮ ನೃತ್ಯ ಪ್ರದರ್ಶಿಸಿದರು. ನಂತರ ಸಭಾಕಾರ್ಯಕ್ರಮ ಬಳಿಕ ಶಾಂತಿ ಮಂತ್ರದೊಂದಿಗೆ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಸಂಪನ್ನಗೊಂಡಿತು.
7ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ
ಹನುಮಾನ್ ನಗರ, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************