-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 28

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 28

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 28
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

     
ಪ್ರೀತಿಯ ಮಕ್ಕಳೇ.... ಜೀವಕೋಶಗಳು ಕೆಲಸಾಡಲು ಅಂದರೆ ವಿವಿಧ ಜೈವಿಕ ಕ್ರಿಯೆಗಳನ್ನು ನಡೆಸಲು ಶಕ್ತಿ ಬೇಕು. ಈ ಶಕ್ತಿ ಉತ್ವಾದನೆಯನ್ನು ಕೋಶಗಳು ಸಾಮಾನ್ಯವಾಗಿ ಗ್ಲುಕೋಸ್ ಅನ್ನು ದಹಿಸುವ ಮೂಲಕ ಉತ್ಪಾದಿಸುತ್ತವೆ. ಗ್ಲುಕೋಸ್ ನ ಬದಲಾಗಿ ಕೊಬ್ಬನ್ನು ದಹಿಸುವ ಮೂಲಕ ಕೂಡಾ ಶಕ್ತಿಯನ್ನು ಉತ್ಪಾದಿಸುತ್ತವೆ. ದಹಿಸುವುದು ಎಂದರೆ ಯಾವುದೇ ಒಂದು ವಸ್ತು ಆಮ್ಲಜನಕದೊಂದಿಗೆ ಉರಿಯುವುದು. ಈ ಉರಿಯುವಾಗ ಶಕ್ತಿ ಬಿಡುಗಡೆಯಾಗುತ್ತದೆ. ಬಿಡುಗಡೆಯಾಗುವ ಶಕ್ತಿಯನ್ನು ತನ್ನ ಜೀವ ಕ್ರಿಯೆಗಳಿಗೆ ಬಳಸಲಾಗುತ್ತದೆ. ಈಗ ನೀವು ಒಂದು ತರ್ಕದ ಸರಪಳಿಯನ್ನು ಹಿಡಿದು ನೀವು ಸಾಗುತ್ತಿದ್ದೀರಿ ಎಂದು ನನಗೆ ಅರ್ಥವಾಯಿತು. ಜೈವಿಕ ಕ್ರಿಯೆಗಳಿಗೆ ಶಕ್ತಿ ಬೇಕು. ಶಕ್ತಿ ಬೇಕಾದರೆ ಗ್ಲುಕೋಸ್/ಕೊಬ್ಬು ಉರಿಸಲ್ಪಡಬೇಕು. ಗ್ಲುಕೋಸ್ ಉರಿಯ ಬೇಕಾದರೆ ಆಮ್ಲಜನಕ ಬೇಕು. ಅಂದರೆ ಭೂಮಿಯ ಮೇಲೆ ಅಣು ಆಮ್ಲಜನಕ (molecular oxygen) ಕಂಡು ಬಂದ ಮೇಲೆ ಜೀವ ಅಸ್ತಿತ್ವಕ್ಕೆ ಬಂತು. ನಿಜವಾಗಿ ನಿಮ್ಮ ಯೋಚನಾ ಸರಣಿ ತುಂಬಾ ತರ್ಕಬದ್ಧ ಮತ್ತು ವೈಜ್ಞಾನಿಕವಾಗಿದೆ. ನೀವು ವಾತಾವರಣದಲ್ಲಿ ಸ್ವತಂತ್ರ ಆಮ್ಲಜನಕ ಯಾವಾಗ ಬಂತು ಎಂದು ನೀವು ಹುಡುಕುತ್ತಾ ಹೊರಟರೆ ಇತ್ತೀಚಿನ ಒಂದು ವರದಿಯಲ್ಲಿ ಸ್ವತಂತ್ರ ಆಮ್ಲಜನಕ 2.33 ಬಿಲಿಯನ್ ವರ್ಷಗಳ ಹಿಂದೆ ಕಂಡು ಬಂತು ಎಂದು ಹೇಳಲಾಗಿದೆ. ಆಗಸ್ಟ್ 2009 ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಡಿಕ್ ಹಾಲ್ಲೆಂಡ್ ಆಮ್ಲಜನಕ ಭೂ ವಾತಾವರಣದಲ್ಲಿ 2.8 ರಿಂದ 2.7 ಬಿಲಿಯನ್ ವರ್ಷಗಳಷ್ಟು ಹಿಂದೆ ಕಂಡುಬಂತು ಇದು 2.4 ಬಿಲಿಯನ್ ವರ್ಷಗಳ ಹೊತ್ತಿಗೆ ಹೆಚ್ಚು ಸ್ಥಿರವಾಯಿತು ಎನ್ನುತ್ತಾರೆ. ಅಂದರೆ ಭೂಮಿಯ ಮೇಲೆ ಅತಿ ಹಿಂದಿನ ಜೀವಿಯನ್ನು ಹುಡುಕುತ್ತಾ ಹೋದವರಿಗೆ ಮೊದಲ ಜೀವಿಯ ಪಳೆಯುಳಿಕೆಯ ವಯಸ್ಸು 3.7 ಬಿಲಿಯನ್ ವರ್ಷಗಳು ಎಂದು ನಿಷ್ಕರ್ಷೆಯಾಗಿದೆ. ಅಲ್ಲ ಉಸಿರಾಟಕ್ಕೆ ಆಮ್ಲಜನಕ ಬೇಕು. ಆಮ್ಲಜನಕ ವಾತಾವರಣ ಸೇರಿದ್ದು ಕೇವಲ 2.3 ಮಿಲಿಯನ್ ವರ್ಷಗಳ ಹಿಂದೆ ಅಷ್ಟೇ. ಆದರೆ ಇದಕ್ಕಿಂತ ಬಹಳ ಹಿಂದೆ ಅಂದರೆ 3.7 ಬಿಲಿಯನ್ ವರ್ಷಗಳ ಹಿಂದೆಯೇ ಜೀವಿ ಕಾಣಿಸಿಕೊಂಡಿದೆ. ಆ ಕಾಲದಲ್ಲಿ ವಾತಾವರಣದಲ್ಲಿ ಸಮೃದ್ದವಾಗಿದ್ದದ್ದು ಆಮ್ಲಜನಕ ರಹಿತ ಮಿಥೇನ್. ಈ ಮಿಥೇನ್ ವಿಷಕಾರಿ. ಹಾಗಾದರೆ ಮಿಥೇನ್ ನಲ್ಲಿಯೂ ಬದುಕುವ ಜೀವಿಗಳಿದ್ದುವೇ ಮುಂದಿನ ವಾರ ತಿಳಿಯೋಣ...
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article