-->
ಮಕ್ಕಳ ಕವನಗಳು : ಸಂಚಿಕೆ - 13 : ರಚನೆ : ಶರ್ಮಿಳಾ ಕೆ ಎಸ್

ಮಕ್ಕಳ ಕವನಗಳು : ಸಂಚಿಕೆ - 13 : ರಚನೆ : ಶರ್ಮಿಳಾ ಕೆ ಎಸ್

ಮಕ್ಕಳ ಕವನಗಳು : ಸಂಚಿಕೆ - 13
ಕವನ ರಚನೆ : ಶರ್ಮಿಳಾ ಕೆ ಎಸ್
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ

         

ನಮ್ಮ ತುಳುನಾಡು
ವಿವಿಧ ಕಲೆ ಸಂಸ್ಕೃತಿಯ ಬೀಡು 
ತುಳುನಾಡ ತಿಳಿದು ನೋಡು 
ಎಂಚಪೊರ್ಲಾಂಡೆಂದು ಹಾಡು... 

ಸೊಬಗಿನ ನಾಡು ತುಳುನಾಡು 
ಸಂಸ್ಕೃತಿಯ ಬೀಡು ತುಳುನಾಡು 
ಪರಶುರಾಮನ ಕೃಪೆಯಿಂದಾದ ನಾಡು 
ಈ ನಮ್ಮ ತುಳುನಾಡು... 

ದುರ್ಗಾದೇವಿಯ ನೆಲೆಯಿರುವ ನಾಡಿದು
ಸೊಗಸಾದ ಕಲೆಗಳ ಬೀಡಿದು
ಭೂತ ಕೋಲದ ಸಿಂಗಾರದ ತವರೇ ಇದು 
ದೈವಗಳ ಕೃಪೆಯ ಹಸಿರು ಸಿರಿಯ ನಾಡಿದು... 

ಉಡುಪಿ ಕೃಷ್ಣನ ಸುಂದರ ನಗುವಲಿ
ಶ್ರೀ ಧರ್ಮಸ್ಥಳ ಮಂಜುನಾಥನ ಲೀಲೆಯಲಿ 
ಪಂಜುರ್ಲಿ ಗುಳಿಗ ಕೊರಗಜ್ಜನ ಕಾರಣಿಕತೆಯಲಿ
ಕಡಲ ಕಿನಾರೆಯ ಅಲೆಯ ನಾದದಲಿ 
ಕಂಗೊಳಿಸುತ್ತಿರುವ ನಾಡು ನಮ್ಮ ತುಳುನಾಡು... 

ದೈವಾರಾಧನೆಯ ಸಂಸ್ಕೃತಿಯಿದೆ
ತೆಂಕು ಬಡಗು ಯಕ್ಷಗಾನದ ಕಲೆಯಿದೆ 
ಕೋಟಿ ಚೆನ್ನಯ್ಯರ ಕಥೆಯಿದೆ 
ಪಿಲಿಯ ನರ್ತನ ಇಲ್ಲಿದೆ... 

ಕಡಲ ಅಲೆ ಸವಿಗಾನದಿ
ಕರಾವಳಿಯೆಂಬ ಸುಂದರ ನಾಮದಿ 
ಮೆರೆವ ನಾಡೆ ಈ ನಮ್ಮ ತುಳುನಾಡು...
...................................... ಶರ್ಮಿಳಾ ಕೆ ಎಸ್
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
********************************************


                    
ಭೂಲೋಕದಿ ನಡೆಯುತಿರಲು ಅಧರ್ಮ 
ಅದತಡೆಯಲವತರಿಸಿದ ವೈಕುಂಠಾಧೀಶ 
ಕಾರಾಗೃಹದಿ ಜನಿಸಲು ಶಿಶುವಾಗಿ 
ನಸು ನಗು ತುಂಬಿತು ನೊಂದ ವಸುದೇವನಲಿ... 

ಕಂಸನ ಕೆಟ್ಟ ನೋಟದಿಂದ ಕಾಪಾಡಲು 
ಕರೆತಂದನು ವಸುದೇವ ಶ್ರೀ ಕೃಷ್ಣನನು
ಇರಿಸಿದ ಆಪ್ತ ಗೆಳೆಯ ನಂದನ ಮನೆಯಲಿ
ಕರೆತಂದನು ನಂದನ ಪುತ್ರಿಯನು... 

ಕಳ್ಳ ಕೃಷ್ಣನು ಮಿತ್ರರ ಒಡಗೂಡಿ
ಕದಿಯಲು ರಾತ್ರಿಯೇ ಬೆಣ್ಣೆಯನು 
ಮರುದಿನವೇ ವಿಷಯ ತಿಳಿಯಲು ಯಶೋಧೆಗೆ
ಹಿಂಡಲು ಕೃಷ್ಣನ ಕಿವಿಯನು... 

ಶುರುವಾಗಲು ಗೊಲ್ಲನ ಲೀಲೆಗಳು 
ಯಶೋಧೆಯ ಪ್ರೀತಿಯ ಮುದ್ದಿನ ಮಗನೂ
ಅದೇ ಸಮಯದಿ ಜನಿಸಲು ಅರಮನೆಯಲಿ 
ಕೃಷ್ಣನಿಗೆಂದೇ ಶ್ರೀ ರಾಧೆ... 

ಜನಿಸುತ ನೇತ್ರದೋಷದಿ ನರಳಲು ರಾಧೆ 
ಕಳೆದನು ಕೃಷ್ಣ ಸ್ಪರ್ಶದಿ ರಾಧೆಯ ಬಾಧೆ
ಲೀಲೆಗಳಾದರು ಒಂದೆರಡಲ್ಲ 
ಹೇಳಿದಷ್ಟು ಸಾಲೋದಿಲ್ಲ... 

ಶ್ರೀ ಕೃಷ್ಣನ ಜನನ ಧರ್ಮ ಸ್ಥಾಪನೆಗಾಗಿ 
ನರ ರಾಕ್ಷಸ ಕಂಸನ ವಧೆಗಾಗಿ
ಮಾಡಲು ಕೃಷ್ಣನು ಕಂಸನ ಅಂತ್ಯ 
ಬಿಡುಗಡೆಗೊಂಡರು ದೇವಕಿ ವಸುದೇವ... 

ರಾಧೆಗೆಂದೇ ಶ್ರೀ ಕೃಷ್ಣನೂ
ಕೃಷ್ಣನಿಗೆಂದೇ ಶ್ರೀ ರಾಧೆಯೂ
ಬರಲು ಕಷ್ಟಗಳು ಒಂದೆರಡೇ
ದೇವರಾದರೂ ಬಿಡಲಿಲ್ಲ ಕಷ್ಟದ ಪಾಶ... 

ಕೊನೆಗೂ ಬಂದಿತು ರಾಧಾಕೃಷ್ಣರ ವಿವಾಹ 
ಆದರೂ ಆಗಲಿಲ್ಲ ಕಾರಣವೇ ಮಿತ್ರ ಶ್ರೀಧಾಮ
ಗೋಲೋಕದಿ ನಡೆದ ಶಾಪದಿಂದ 
ದೂರ ಆಗಿಯೇ ಇದ್ದರು ರಾಧಾ ಮಾಧವ...
......................................ಶರ್ಮಿಳಾ ಕೆ ಎಸ್
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
********************************************

               

ತೋಟದಲೊಮ್ಮೆ ಇರುತಿರೆ ನಾನು 
ಕಂಡೆನು ನಲಿವಾ ಚಿಟ್ಟೆಗಳ
ಹಾರುತ ಹಾರುತ ಬೇರೆಯೇ ಆಗುತಾ
ಸುಳಿದವು ಹೂಗಳ ನಡುವಲ್ಲಿ... 

ಹೊಟ್ಟೆಯ ಪಾಡಿಗೆ ನೂಲನು ನೇಯುತಾ
ಬಲೆಯನು ಕಟ್ಟಿತು ಜೇಡವದು 
ಜಾಲವನರಿಯದೆ ಚಿಟ್ಟೆಯು ಸಿಲುಕಲು 
ಅದ ಹುಡುಕಲು ನೊಂದಿತು 
ಜೊತೆಯಾ ಚಿಟ್ಟೆಯದು... 

ನೋಡುತಲಿಹ ನಾ ನೋಯುತ ಆ ಕ್ಷಣ 
ಚಿಟ್ಟೆಯ ಬಿಡಿಸುವ ಮನವನು ಮಾಡಿದೆ
ಜೇಡದ ಬಲೆಯ ಛಿದ್ರಿಸಿದೆ 
ನಲಿವ ಚಿಟ್ಟೆಯ ಕಾಪಾಡಿದೆ... 

ಕೆಳಗಡೆ ಬೀಳುತಲ್ಲಿದ್ದರೂ ಜೇಡವು 
ಕಾಪಾಡಿಕೊಂಡಿತು ತನ್ನನ್ನು ತಾನೇಯೇ 
ಆತ್ಮಸ್ಥೈರ್ಯದಿ ತಾಳುತ ಕೀಟವು
ಮರಳಿಯೆ ಕಟ್ಟಿತು ಬಲೆಯನು... 

ಚಿಟ್ಟೆಯು ಹಾರಿತು ಗೆಳೆಯನ ಕೂಡಿತು 
ಹಾರುತಲಿದ್ದವು ಮೊದಲಿನಂತೆ 
ನೋಡುತಲದನು ಮುದವನು ತಾಳಿದೆ
ನನ್ನಯ ಕಾರ್ಯಕ್ಕೆ ನಾ ಮೆಚ್ಚಿ...
......................................ಶರ್ಮಿಳಾ ಕೆ ಎಸ್
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article