ಮಕ್ಕಳ ಕವನಗಳು : ಸಂಚಿಕೆ - 12 - ರಚನೆ : ಕುಶಿ 7ನೇ ತರಗತಿ
Thursday, May 16, 2024
Edit
ಮಕ್ಕಳ ಕವನಗಳು : ಸಂಚಿಕೆ - 12
ಕವನ ರಚನೆ : ಕುಶಿ
7ನೇ ತರಗತಿ
ಹಿರಿಯ ಪ್ರಾಥಮಿಕ ಶಾಲೆ ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ರಾತ್ರಿ ಹೆದರಿಸಲು ಹೇಳುವಳು
ಬರುವುದು ಗುಮ್ಮ...
ಎಷ್ಟು ವಂದನೆ ಮಾಡಿದರು
ಸಾಲದು ತಾಯಿಗೆ
ಬೇಡ ಎಂದರೂ ತಿನ್ನಿಸುವಳು ನಮಗೆ
ನಾವು ಕೊಡುವೆವು ಅವಳಿಗೆ ಮುತ್ತು
ಅವಳು ನಮಗೆ ಕೊಡುವಳು ತುತ್ತು
ಭೂಮಿಗೆ ಇನ್ನೊಂದು ಹೆಸರು ಅವನಿ
ನಮಗೆ ಜನ್ಮ ನೀಡಿದವಳು ಜನನಿ
...................................................... ಕುಶಿ
7ನೇ ತರಗತಿ
ಹಿರಿಯ ಪ್ರಾಥಮಿಕ ಶಾಲೆ ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಶಾಲೆಯೆ ಮೊದಲ ದೇಗುಲ
ಕಲಿಸಲು ಬರುವವರು ಗುರುಗಳು
ಕಲಿಯಲು ಬರುವವರು ಮಕ್ಕಳು
ಬರುವರು ಕಲಿಯಲು ಪಾಠ
ಕಲಿತಾದ ಮೇಲೆ ಆಡುವರು ಆಟ
ಕೊಡುವರು ಇಲ್ಲಿ ಒಳ್ಳೆಯ ಶಿಕ್ಷಣ
ಕಲಿತು ಹೆಚ್ಚುವುದು ನಮ್ಮ ಜ್ಞಾನ
...................................................... ಕುಶಿ
7ನೇ ತರಗತಿ
ಹಿರಿಯ ಪ್ರಾಥಮಿಕ ಶಾಲೆ ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಅವ ನೋಡಲೆಷ್ಟು ಸುಂದರ
ಹುಣ್ಣಿಮೆಯಂದು ಕಾಣುವನು ದುಂಡಗೆ
ಅಮವಾಸ್ಯೆಯಂದು ಕಾಣುವುದಿಲ್ಲ ಕಣ್ಣಿಗೆ
ಆಗಸದಲ್ಲಿ ಹಾರುವುದು ಹಕ್ಕಿ
ಚಂದ್ರನೊಂದಿಗೆ ಇರುವುದು ಚುಕ್ಕಿ
ಚಂದ್ರನ ಮೇಲೆ ಹಾರಲು ಪ್ರಯತ್ನಿಸುವರು
ಅದರಲ್ಲಿ ಕೆಲವರು ಮಾತ್ರ ಗೆಲುವು ಸಾಧಿಸುವರು
...................................................... ಕುಶಿ
7ನೇ ತರಗತಿ
ಹಿರಿಯ ಪ್ರಾಥಮಿಕ ಶಾಲೆ ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಅದನ್ನು ಕಡಿದರೆ ಬರುವುದು ಬರ
ಅದು ಕೊಡುವ ವಸ್ತು ತರತರ
ಅದು ನಮಗೆ ದೇವರ ವರ
ಕಡಿಯುವರು ಮರದ ಕೊಂಬೆ
ಅದರಿಂದ ಮಾಡುವರು ಗೊಂಬೆ
ಮರದಲ್ಲಿದೆ ತುಂಬಾ ಎಲೆ
ಅದರಿಂದ ಬರುವುದು ಮಳೆ
......................................................... ಕುಶಿ
7ನೇ ತರಗತಿ
ಹಿರಿಯ ಪ್ರಾಥಮಿಕ ಶಾಲೆ ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಅದು ಬೆಳೀಬೇಕಾದರೆ ಬೇಕು ಮಣ್ಣು
ಮಣ್ಣಿನಲ್ಲಿರುವ ಜೀವಿ ಎರೆಹುಳ
ಮಳೆನೀರು ಬಿದ್ದಾಗ ಹೊಳೆಯುವುದು ಥಳಥಳ
ಮಣ್ಣಿನಲ್ಲಿ ವಾಸಿಸುತ್ತದೆ ತುಂಬಾ ಜೀವಿ
ನೀರಿಗೋಸ್ಕರ ತೋಡುವರಲ್ಲಿ ಬಾವಿ
ಮಣ್ಣಿನ ಒಳಗಿಂದ ತೆಗೆವರು ನೀರನ್ನು
ಮಣ್ಣಿನ ಮೇಲೆ ಕಟ್ಟುವರು ಮನೆಯನ್ನು
...................................................... ಕುಶಿ
7ನೇ ತರಗತಿ
ಹಿರಿಯ ಪ್ರಾಥಮಿಕ ಶಾಲೆ ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ನೀಡದಿರಿ ಅದಕ್ಕೆ ಯಾವುದೇ ರೀತಿಯ ಹಾನಿ
ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ
ಬೆಕ್ಕು ಹಿಡಿಯುವ ಪ್ರಾಣಿ ಇಲಿ
ಹಸಿರು ಬಣ್ಣದ ಪಕ್ಷಿ ಗಿಳಿ
ನಮ್ಮನ್ನು ಬೆಳಗ್ಗೆ ಎದ್ದೇಳಿಸುವ ಪಕ್ಷಿ ಕೋಳಿ
ಮರಗಳಲ್ಲಿರುವ ಪ್ರಾಣಿ ಅಳಿಲು
ಗರಿ ಬಿಚ್ಚಿ ಕುಣಿಯುವ ಪಕ್ಷಿ ನವಿಲು
ಮರದಲ್ಲಾಗುವುದು ಹೂವು ಹಣ್ಣು ಕಾಯಿ
ನಾವು ಮನೆಯಲ್ಲಿ ಸಾಕುವ ಪ್ರಾಣಿ ನಾಯಿ
ನನಗಿಷ್ಟವಾದ ಹಣ್ಣು ಮಾವು
ವಿಷಕಾರಿಯಾದ ಪ್ರಾಣಿ ಹಾವು
ರಾತ್ರಿ ಹೊತ್ತು ಕೂಗುವ ಪ್ರಾಣಿ ತೋಳ
ಹಗಲು ಆಗಸದಲ್ಲಿ ಹಾರುವ ಪಕ್ಷಿ ಪಾರಿವಾಳ
7ನೇ ತರಗತಿ
ಹಿರಿಯ ಪ್ರಾಥಮಿಕ ಶಾಲೆ ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************