ಪ್ರೀತಿಯ ಪುಸ್ತಕ : ಸಂಚಿಕೆ - 111
Friday, May 17, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 111
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹಳ್ಳೀ ಧಾಟಿ ಹಿಡದು ಹುಟ್ಟಿಕೊಂಡ ಹಾಡು. ಇದು ಮಹಾಚಳಿಯ ವರ್ಣನೆಯೊಂದನ್ನು ಹಾಡುಗಾರ ನೀಡುತ್ತಾನೆ. ಚಳಿ ಹೇಗಿತ್ತೆಂದರೆ.. ”ಬೆನ್ನಿನಗುಂಟ ಚುಳಕ್, ಕತ್ತಿನ ಸುತ್ತ ಸಳಕ್, ಮೂಗಿನ ಮ್ಯಾಲೆ ಏರಿ, ಐಸ್ ಐಸ್ ಸೊರಕ್..”. ಓದುವಾಗಲೇ ಚಳಿ ನಮ್ಮ ಮೈಯೊಳಗೆ ನುಸುಳುವ ಹಾಗೆ ಇದೆ. ಇಂಥಾ ಚಳಿಯೊಳಗೂ ಮುತ್ಯಾ ಹೊಂಟಿದ್ದಾನೆ. ಮಾಯಾಗಿರುವ ಮರಿಯನ್ನು ಹುಡುಕಿಕೊಂಡು ಹೊಂಟಾನ. ಮೋಜಿನಲ್ಲಿ ಕಥೆ ಮುಂದೆ ಸಾಗುತ್ತದೆ. ಹೇಳುತ್ತಿದ್ದ ಕತಿಯೇ ಮುದಕಪ್ಪನ ಚಂಚಿಯೊಳಗೆ ಹೊಕ್ಕು ಬಿಟ್ಟಿರುತ್ತದೆ. ಆ ಚಂಚಿ ಮರದ ಹೊದರಿನಲ್ಲಿ ಸಿಕ್ಕಿ ಹಾಕ್ಕೊಂಡಿರುತ್ತದೆ. ಚಳಿ ಅಂತೂ ಹಾಗೇ ಇರುತ್ತದೆ. ಕಟ ಕಟ ಹಲ್ಲು ಕಡಿಕೋತಾ ಇಲಿ ಬಂದು ಆ ಚಂಚಿಯೊಳಗೆ ಸೇರಿಕೊಳ್ಳುತ್ತದೆ. ಹಾಗೇ ಹಾಗೇ ಅನೇಕ ಪ್ರಾಣಿಗಳು. ಈ ಮೋಜಿನ ಕಥೆ ಸೊಗಸಾಗಿ ಸಾಗುತ್ತದೆ. ಚಂದ ಚಂದದ ಚಿತ್ರಗಳೂ ಇವೆ. ಪುಟ್ಟ ಪುಸ್ತಕ. ಭಾಷೆಯ ಚಂದವನ್ನೂ ನೀವು ಗಮನಿಸಬೇಕು. ಈ ಹಾಡುವ ಮುದುಕನ ಹಾಡು ಎಲ್ಲರನ್ನೂ ಸೇರಿಸಿಕೋತಾ ಹೋಗುತ್ತದೆ.
ಲೇಖಕರು: ಆನಂದ ಪಾಟೀಲ
ಚಿತ್ರಗಳು: ಸಂತೋಷ್ ಸಸಿಹಿತ್ಲು
ಪ್ರಕಾಶಕರು: ಅವ್ಯಕ್ತ ಪ್ರಕಾಶನ
ಬೆಲೆ: ರೂ.140/
5 - 6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅವ್ಯಕ್ತ ಪ್ರಕಾಶನ, 8792693438
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************