-->
ಮಕ್ಕಳ ಕವನಗಳು : ಸಂಚಿಕೆ - 11 ರಚನೆ : ಯಶಸ್ವಿನಿ ಪಿ

ಮಕ್ಕಳ ಕವನಗಳು : ಸಂಚಿಕೆ - 11 ರಚನೆ : ಯಶಸ್ವಿನಿ ಪಿ

ಮಕ್ಕಳ ಕವನಗಳು : ಸಂಚಿಕೆ - 11
ಕವನ ರಚನೆ : ಯಶಸ್ವಿನಿ ಪಿ
9ನೇ ತರಗತಿ
ಸೆಂಟ್ ಜೋಸೆಫಿನ್ ಪಬ್ಲಿಕ್ ಸ್ಕೂಲ್  
ಬೆಂಗಳೂರು
      
 
         

ಅವಳ ಕಣ್ಣು ಕಮಲದಂತೆ
ಅವಳ ಮೂಗು ಸಂಪಿಗೆ ಹೂವಂತೆ 
ಅವಳ ತುಟಿ ಕೆಂದಾವರೆಯಂತೆ
ಅವಳ ನಗು ಸೂರ್ಯಕಾಂತಿ ಅರಳಿದಂತೆ
ಅವಳ ಕೂದಲು ರೇಶ್ಮೆಯಂತೆ
ಅವಳ ಮಾತು ಕೋಗಿಲೆ ಹಾಡಿನಂತೆ
ಅವಳ ಮನಸ್ಸು ತಿಳಿಯಾದ ಹಾಲಿನಂತೆ
ಅವಳ ನೋಟ ಹೂವರಳಿದಂತೆ
ಅವಳ ಕೋಪ ಕೆಂಪು ಗುಲಾಬಿಯಂತೆ
.......................................... ಯಶಸ್ವಿನಿ ಪಿ
9ನೇ ತರಗತಿ
ಸೆಂಟ್ ಜೋಸೆಫಿನ್ ಪಬ್ಲಿಕ್ ಸ್ಕೂಲ್  
ಬೆಂಗಳೂರು
*******************************************


         

ದೇಶಕ್ಕೆ ಬೆನ್ನೆಲುಬಾದವರು 
ಧವಸ-ಧಾನ್ಯ ನೀಡುವರು
ನಮಗೆ ಅನ್ನವನ್ನು ನೀಡುವ ದೇವರುಗಳು 

ಅವರು ನಮಗೆ ಅನ್ನದಾತರು
ಕಷ್ಟಪಟ್ಟು ಬೆವರು ಸುರಿಸಿ ದುಡಿಯುವರು
ಅವರು ನಿಜವಾದ ಭೂಮಿತಾಯಿಯ ಮಕ್ಕಳು

ನಮಗೆಲ್ಲ ಭತ್ತ ಬೆಳೆಯುವ ಶ್ರಮಿಕರು 
ಭೂಮಿಯ ಸೇವೆ ಮಾಡುವರು 
ಭೂಮಿಯ ಪ್ರೀತಿಸುವ ಪ್ರೇಮಿಗಳು

ಮಳೆ-ಬಿಸಿಲನ್ನೇ ನಂಬಿ ಬದುಕುವರು
ಬೆಳೆಯಿಲ್ಲದೆ ಬದುಕಲಾರರು ರೈತರು
ಪ್ರೋತ್ಸಾಹ ನೀಡಬೇಕು ರೈತರಿಗೆ ಎಲ್ಲರು
.......................................... ಯಶಸ್ವಿನಿ ಪಿ
9ನೇ ತರಗತಿ
ಸೆಂಟ್ ಜೋಸೆಫಿನ್ ಪಬ್ಲಿಕ್ ಸ್ಕೂಲ್  
ಬೆಂಗಳೂರು
********************************************




ಪರಿಸರದ ಸಹಾಯದಿಂದ 
ಬದುಕುವರು ಜನರು
ಗಾಳಿ-ಬೆಳಕು
ನೀರಿನಿಂದಲೇ ಉಳಿದಿರುವರು
ಗಿಡ-ಮರದಿಂದಲೇ 
ಆಹಾರ ಪಡೆಯುವರು
ಕೊನೆಯಲ್ಲಿ ಜನರು 
ಪರಿಸರವನ್ನು ನಾಶಮಾಡುವರು

ನದಿ-ಸಮುದ್ರಗಳಲ್ಲಿ 
ಕಸವನ್ನು ಎಸೆಯುವರು
ಎಸೆದ ಕಸಕ್ಕೆ ಜಲಚರಗಳು
ಸಾವನ್ನಪ್ಪಲು ಕಾರಣರಾದರು
ಪ್ರಾಣಿ -ಪಕ್ಷಿಗಳು ಕುಡಿಯುವ ನೀರು 
ಹಾಳಾಗುತ್ತಿರಲು ಕಾರಣಕರ್ತರು 
ನದಿಗಳಲ್ಲಿ ಬಟ್ಟೆಗಳನ್ನು ಒಗೆದು 
ನೀರನ್ನು ಕೊಳಕು ಮಾಡುವರು

ಕಸವು ನೀರಿನಲ್ಲಿ ಕೊಳೆತು 
ರೋಗಗಳು ಹರಡುವಂತೆ ಮಾಡುವರು
ಪ್ರಾಣಿ-ಪಕ್ಷಿ ಸಂಕುಲಗಳು 
ಕಲುಷಿತ ನೀರು 
ಸೇವಿಸುವಂತೆ ಮಾಡಿರುವರು
ನದಿ-ಕೆರೆಗಳಲ್ಲಿ ಬೆಳೆಯುವ ಗಿಡಗಳು 
ನಾಶವಾಗಲು ಕಾರಣರಾದರು

ಜನರ ಜೀವವನ್ನು ಅವರೇ 
ಹಾಳುಮಾಡಿ ಕೊಳ್ಳುತ್ತಿರುವರು 
ಜಲಮಾಲಿನ್ಯ ಹೆಚ್ಚಾಗುವಂತೆ 
ಕಸ ಎಸೆಯುವರು 
ನೀರು ಹಾಳಾಗುತ್ತಿರುವುದನ್ನು ಅರಿಯದೆ
ಮೃಗಗಳಂತೆ ವರ್ತಿಸುವರು
ಎಸೆದ ಕಸದಿಂದಾದ ಮಾಲಿನ್ಯ
ನಾಳೆಯ ಪ್ರಜ್ಞೆಯಿಲ್ಲದವರು 

ಜಲಮಾಲಿನ್ಯ ತಡೆಯಬೇಕಾದವರು  
ಪ್ರಾಣಿ-ಪಕ್ಷಿಗಗಳಿಗೆ ಒಳ್ಳೆಯ ನೀರು 
ಸಿಗುವಂತೆ ಮಾಡಬೇಕಾದವರು 
ನದಿ-ಸಮುದ್ರಗಳ ಸ್ವಚ್ಛತೆ 
ರಕ್ಷಿಸಿ ಕಾಪಾಡಬೇಕಾದವರು
ಪರಿಸರದ ಸಂರಕ್ಷಣೆಯನ್ನು 
ನಿಷ್ಠೆಯಿಂದ ಉಳಿಸಬೇಕಾದವರು

ಇಂದಿನಿಂದ ನದಿಗೆ 
ಕಸ ಹಾಕುವುದು ನಿಲ್ಲಬೇಕಿದೆ
ನಮ್ಮೆಲ್ಲರ ಆರೊಗ್ಯ ಕಾಪಾಡಿಕೊಳ್ಳಬೇಕಿದೆ 
ನಮ್ಮ ಆರೋಗ್ಯ ಅರಳಬೇಕಿದೆ
ಅದಕ್ಕೆ ಪರಿಸರವನ್ನು ಉಳಿಸಬೇಕಿದೆ
.......................................... ಯಶಸ್ವಿನಿ ಪಿ
9ನೇ ತರಗತಿ
ಸೆಂಟ್ ಜೋಸೆಫಿನ್ ಪಬ್ಲಿಕ್ ಸ್ಕೂಲ್  
ಬೆಂಗಳೂರು
********************************************

         

ಗಡಿಯನ್ನು ಕಾಯುವರು 
ನಮ್ಮ ಸೈನಿಕರು 
ಅವರ ರಕ್ತಹರಿದರೂ ಲೆಕ್ಕಿಸದೆ 
ನಮ್ಮನ್ನು ಕಾಪಾಡುವರು
ಶತ್ರುಗಳು ಗಡಿಯೊಳಗೆ 
ನುಸುಳಲು ಬಿಡದವರು
ಭಯವಿಲ್ಲದೆ ದೇಶದ ಒಳಿತಿಗಾಗಿ 
ಹೋರಾಡುವ ಧೀರರು

ತಮ್ಮ ಜೀವವನ್ನು ಮುಡುಪಾಗಿಟ್ಟು 
ನಮ್ಮೆಲ್ಲರನ್ನು ರಕ್ಷಿಸುವರು
ದೇಶಕ್ಕೆ ದ್ರೋಹವಾಗದಂತೆ  
ನಿತ್ಯವೂ ತಡೆಯುವರು
ಹಗಲಿರುಳು ದೇಶಕ್ಕಾಗಿ 
ಅವಿರತ ದುಡಿಯುವರು
ಕುಟುಂಬವನ್ನೆಲ್ಲ ಬಿಟ್ಟು 
ನಾಡಿಗಾಗಿ ಸೇವೆಮಾಡುವರು

ನಾವೆಲ್ಲರು ನೆಮ್ಮದಿಯಾಗಿ 
ಬಾಳಲು ಅವರೇ ಕಾರಣಕರ್ತರು 
ದೇಶದ ಸಮೃದ್ಧಿಗೆ ಕಾರಣರಾದವರು 
ನಮ್ಮ ದೇಶದ ಗೌರವವನ್ನು 
ಎಲ್ಲೆಡೆ ಎತ್ತಿಹಿಡಿಯುವರು
ನಮ್ಮ ದೇಶದ ನೆಲ-ಜಲದ ಸಂರಕ್ಷಕರು

ದೇಶದ ಕೀರ್ತಿ ಕಳಶವೇ ಅವರು
ದೇಶದ ಯುವ ಪೀಳಿಗೆಗಳಿಗೆ 
ಸ್ಪೂರ್ತಿಯೇ ಅವರು
ಏನೇ ಆದರೂ 
ನಮ್ಮ ದೇಶದ ಗುಟ್ಟು ಬಿಡದವರು
ಅವರೇ ನಮ್ಮ ದೇಶದ ಜೀವದಾತರು 

ನಮ್ಮ ದೇಶದ ಕೀರ್ತಿ ಪತಾಕೆಯನ್ನು  
ಜಗತ್ತಿನಾದ್ಯಂತ ಹಾರಿಸುವರು
ಎಲ್ಲರು ಗೌರವಿಸುವಂತೆ 
ನಮ್ಮ ನಾಡನ್ನು ಬೆಳಸುವರು
ನಮ್ಮ ದೇಶದ ಹೆಮ್ಮೆಯ ಪುತ್ರರು
ಅವರೇ ನಮ್ಮ ಸೈನಿಕರು 
.......................................... ಯಶಸ್ವಿನಿ ಪಿ
9ನೇ ತರಗತಿ
ಸೆಂಟ್ ಜೋಸೆಫಿನ್ ಪಬ್ಲಿಕ್ ಸ್ಕೂಲ್  
ಬೆಂಗಳೂರು
********************************************


Ads on article

Advertise in articles 1

advertising articles 2

Advertise under the article