ಜಗಲಿ ಕಟ್ಟೆ : ಸಂಚಿಕೆ - 49
Tuesday, April 30, 2024
Edit
ಜಗಲಿ ಕಟ್ಟೆ : ಸಂಚಿಕೆ - 49
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಮಕ್ಕಳ ಜಗಲಿಯ ಎಲ್ಲಾ ಬಂಧುಗಳಿಗೆ ಆತ್ಮೀಯ ನಮಸ್ಕಾರ. ನಿಮ್ಮ ನಿರಂತರ ಪ್ರೋತ್ಸಾಹ, ಅಭಿಮಾನದ ಸಹಕಾರವೇ ಮಕ್ಕಳ ಜಗಲಿಯ ಬೆಳವಣಿಗೆಗೆ ಶ್ರೀರಕ್ಷೆಯಾಗಿದೆ.
ಮಕ್ಕಳ ಜಗಲಿಯಲ್ಲಿ ಹಿರಿಯರು ಬರೆಯುತ್ತಿರುವ ಎಲ್ಲಾ ಸಂಚಿಕೆಗಳು ಕೂಡ ಕಿರಿಯರಿಗೆ ಮಾರ್ಗದರ್ಶಿಯಾಗಿದೆ. ಪ್ರತಿ ಬಾರಿ ಕೂಡ ಬದುಕನ್ನು, ಈ ಜೀವನವನ್ನು ಪ್ರೀತಿಸಬೇಕೆನ್ನುವ ಸಂದೇಶವನ್ನು ಹೊತ್ತು ತರುವ ಎಂ ಪಿ ಜ್ಞಾನೇಶ್ ಇವರ ಜೀವನ ಸಂಭ್ರಮ ಓದುಗರನೇಕರಿಗೆ ಜೀವನ ಪ್ರೀತಿಯನ್ನು ಕಟ್ಟಿಕೊಡುತ್ತಿದೆ. ಬಿತೋವೆನ್ ಎನ್ನುವ ಸಂಗೀತ ಸಾಧಕನ ಜೀವನ ಪ್ರೀತಿಯನ್ನು ಉಲ್ಲೇಖಿಸಿ ಬರೆದ ಲೇಖನ ಮನೋಜ್ಞವಾಗಿತ್ತು.
ಹೊಸ ಹೊಸ ವಿಷಯಗಳ ಆಯ್ಕೆಯನ್ನು ಮಾಡಿ ಸರಳ ಸುಂದರವಾಗಿ ಸ್ಪೂರ್ತಿಯ ಸೆಲೆಯಾಗಿ ಮೂಡಿ ಬರುತ್ತಿರುವ ರಮೇಶ್ ಎಂ ಬಾಯಾರು ಇವರ ಸ್ಪೂರ್ತಿಯ ಮಾತುಗಳು ಬರೆಯುವವರಿಗೆ ಹಾಗು ಓದುಗರಿಗೆ ಪ್ರೇರಣೆಯಾಗಿದೆ. ಇವರು ಬರೆದಿರುವ ಇರುವೆಯಿಂದ ಕಲಿಯೋಣ ಎನ್ನುವ ಲೇಖನ ತುಂಬಾ ಚೆನ್ನಾಗಿತ್ತು. ಇರುವೆಯ ಶಿಸ್ತು, ಸಹಕಾರ ಮನೋಭಾವ, ಜೀವನ ಪದ್ಧತಿ ಅನುಕರಣೀಯ. ನಮಗೆಲ್ಲ ಮಾದರಿ.
ಮಕ್ಕಳಲ್ಲಿ ವಿಜ್ಞಾನದ ಆಸಕ್ತಿಯನ್ನು ಮೂಡಿಸುತ್ತಾ, ಮಕ್ಕಳ ಹಂತಕ್ಕೆ ತನ್ನ ಬರಹದ ಶೈಲಿಯನ್ನು ಸೃಷ್ಟಿಸಿ ಓದುವ ಅಭಿರುಚಿಯನ್ನು ಬೆಳೆಸುತ್ತಿರುವ ಹಿರಿಯ ಲೇಖಕರಾದ ದಿವಾಕರ್ ಶೆಟ್ಟಿ ಹೆಚ್ ಇವರು ಚಿಕ್ಕವರಿಗಾಗಿ ಹುಡುಕಾಟ ಲೇಖನದಲ್ಲಿ ಪ್ರಿಯಾನ್ ಗಳು, ವೈರಾಯ್ಡ್ ಗಳು , ವೈರಸ್‌ಗಳು ಇವುಗಳ ಭಿನ್ನತೆ ಹಾಗೂ ಇವುಗಳ ತರ್ಕ ಬದ್ಧವಾದ ನಿರೂಪಣೆಯನ್ನು ಸೊಗಸಾಗಿ ಪ್ರಕಟಿಸಿದ್ದಾರೆ. ಅದು ಅಲ್ಲದೆ 25ನೇ ಸಂಚಿಕೆಯನ್ನು ಪೂರ್ಣಗೊಳಿಸಿರುವುದು ಅಭಿನಂದನೀಯ....
ಅತ್ಯಧಿಕ ಸಂಖ್ಯೆಯ ಸಂಚಿಕೆಯನ್ನು ಕಾಣುತ್ತಿರುವ ಹಕ್ಕಿಕಥೆ ಮಕ್ಕಳ ಜಗಲಿಯ ವಿಶೇಷ ಆಕರ್ಷಣೆ. ಕಳೆದ ವಾರದ ಹಕ್ಕಿ ಹಳದಿ ಟಿಟ್ಟಿಭ ದ ಪರಿಚಯ ಮಾಹಿತಿ ಪೂರ್ಣವಾಗಿ ಮೂಡಿಬಂದಿತ್ತು. 150ರ ಗಡಿಗೆ ಇನ್ನೆರಡು ಸಂಚಿಕೆಗಳು ಮಾತ್ರ ಬಾಕಿ. 150ಕ್ಕೆ ನಿಲ್ಲಿಸುತ್ತೇನೆ ಎಂದಿದ್ದ ಅರವಿಂದ ಕುಡ್ಲ ರವರು ನಿಮ್ಮೆಲ್ಲರ ಒತ್ತಾಸೆಗಳಿದ್ದರೆ ಮುಂದುವರಿಸಬಹುದೇನೋ... ಕಾದು ನೋಡಬೇಕಿದೆ.
ನಿಷ್ಪಾಪಿ ಸಸ್ಯಗಳು ಅಂಕಣದ ಮೂಲಕ ನಶಿಸಿ ಹೋಗುತ್ತಿರುವ ಹಾಗೂ ಬಹಳಷ್ಟು ಅಮೂಲ್ಯವಾದ ಸಸ್ಯಗಳ ಪರಿಚಯವನ್ನು ಮಾಡುತ್ತಿರುವ ವಿಜಯಾ ಬಿ ಶೆಟ್ಟಿ ಯವರು ಸಸ್ಯಗಳನ್ನು ಉಳಿಸಿ ಬೆಳೆಸುವ ಅರಿವನ್ನು ಹಾಗೂ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಬಾಲ್ಯದ ದಿನಗಳಲ್ಲಿ ಮನೆ ಔಷಧಿಯಾಗಿ ಬಳಸುತ್ತಿದ್ದ ಅನೇಕ ಗಿಡಗಳ ಪುನರ್ಮನನ ವಾಗುತ್ತಿರುವುದು ಸಂತಸ. ಅದೆಷ್ಟೋ ಗಿಡಗಳು ಈಗ ಮನೆಯ ಹಿತ್ತಿಲಿನಿಂದ ಮರೆಯಾಗಿದೆ. ಮನೆ ಸುತ್ತ ಇಂಟರ್ಲಾಕ್ ಅಳವಡಿಕೆಯ ಕಾರಣದಿಂದ ನೈಸರ್ಗಿಕವಾಗಿ ಬೆಳೆಯುವ ಸಾಕಷ್ಟು ಗಿಡಗಳನ್ನು ನಾವು ಹಾಗೂ ನಮ್ಮ ಮುಂದಿನ ಮಕ್ಕಳು ಕಾಣದ ಹಾಗೆ ನಮ್ಮ ಪರಿಸರವನ್ನು ಬದಲಾಯಿಸಿಬಿಟ್ಟಿದ್ದೇವೆ. ಕಳೆದ ವಾರದ ನಿಷ್ಪಾಪಿ ಸಸ್ಯಗಳು ಅಂಕಣದಲ್ಲಿ ಶಂಖಪುಷ್ಪ ಇದರ ಪರಿಚಯ ಹಾಗೂ ಮಾಹಿತಿಯಿಂದ ತುಂಬಾ ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು.
ಬಹಳ ತಿರುವಿನ, ಕುತೂಹಲ ಭರಿತ ಕಾದಂಬರಿಯ ತರ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬರೆಯುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕರಾದ ಯಾಕೂಬ್ ಸರ್ ಅವರ ಹೃದಯದ ಮಾತು ಅಂಕಣ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಕಳೆದ ವಾರ ಪ್ರಕಟವಾದ.... ನಮ್ಮ ಮಕ್ಕಳನ್ನು ತಿದ್ದೋದ್ಹೇಗೆ?...... ಎನ್ನುವ ಲೇಖನ ಮನೋಜ್ಞವಾಗಿತ್ತು. ಎಲ್ಲರ ಮನೆಯ ದೋಸೆ ತೂತು ಅನ್ನುವಂತೆ ಪ್ರತಿಯೊಬ್ಬ ಪೋಷಕರು ತಮ್ಮ ತಮ್ಮ ಮಕ್ಕಳ ಬಗ್ಗೆ ಜಾಗೃತರಾಗಿರಬೇಕೆನ್ನುವ ಸಂದೇಶ ಹೊತ್ತು ತಂದಿದ್ದು ಎಲ್ಲರಿಗೂ ಅಗತ್ಯವಾಗಿ ತಿಳಿದಿರಬೇಕಾದ ವಿಷಯ ಇಲ್ಲಿತ್ತು.
ಮೊನ್ನೆ ಮೊನ್ನೆ ವಿಶ್ವ ಪುಸ್ತಕ ದಿನವನ್ನು ಆಚರಿಸಿದ್ದ ನಮಗೆ ಮಕ್ಕಳ ಜಗಲಿಯಲ್ಲಿ ಪ್ರತಿವಾರಕೊಮ್ಮೆ ಪುಸ್ತಕ ದಿನವನ್ನು ಆಚರಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ನಮ್ಮ ಆಪ್ತರಾದ ವಾಣಿ ಪೆರಿಯೋಡಿ ಅವರು ಈಗಾಗಲೇ ನೂರಕ್ಕಿಂತಲೂ ಮಿಕ್ಕಿ ಪುಸ್ತಕಗಳನ್ನು ಪರಿಚಯಿಸಿದ್ದು ಮಕ್ಕಳ ಬಗೆಗಿನ ಎಷ್ಟೋ ಪುಸ್ತಕಗಳನ್ನು ಪ್ರೀತಿಯ ಪುಸ್ತಕ ಅಂಕಣದಲ್ಲಿ ಕಾಣುವಂತಾದದ್ದು ಅಭಿಮಾನದ ಸಂಗತಿ. ಅದೇ ರೀತಿ ಪುಸ್ತಕಗಳನ್ನು ಪಡೆಯುವವರಿಗೂ ಅಗತ್ಯ ವಿಳಾಸದ ಮಾಹಿತಿಯನ್ನು ನೀಡುತ್ತಿರುವುದು ಪ್ರಸಂಶನೀಯ. ಕಳೆದ ವಾರ ಪ್ರಕಟವಾದ 108 ನೇ ಸಂಚಿಕೆ - ಮೀನಿನ ಬುಟ್ಟಿ ಈ ಪುಸ್ತಕದ ಪರಿಚಯ ಅರ್ಥಪೂರ್ಣವಾಗಿತ್ತು. ಈ ತರಹದ ಪುಸ್ತಕಗಳು ಕೂಡ ಮಕ್ಕಳಿಗೆ ರಚನೆಯಾಗಿದೆ ಎಂದಾಗ ಮಕ್ಕಳ ಸಾಹಿತಿಗಳ ಬಗ್ಗೆ ಹೆಮ್ಮೆ ಎನಿಸುತ್ತದೆ.
ಕ್ರಿಯಾಶೀಲ ಕನ್ನಡ ಶಿಕ್ಷಕ ರಮೇಶ್ ನಾಯ್ಕ ಉಪ್ಪುಂದ ರಚಿಸುತ್ತಿರುವ ಪದದಂಗಳದ 116ನೆ ಸಂಚಿಕೆ ಹೊಸ ಪದಗಳ ಹುಡುಕಾಟಕ್ಕೆ ಎಂದಿನಂತೆ ಕಾರಣವಾಗುತ್ತಿರುವುದು ಹಾಗೂ ಹೊಸ ಆಕರ್ಷಕ ವಿನ್ಯಾಸದ ಚೌಕಗಳು ಪ್ರಕಟವಾಗುತ್ತಿರುವುದು ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ.
ಇತ್ತೀಚೆಗೆ ಆರಂಭವಾದ ಸವಿ ಜೇನು ಅಂಕಣ ಉತ್ತಮವಾಗಿ ಮೂಡಿ ಬರುತ್ತಿದೆ. ಬಳ್ಳಾರಿ ಜಿಲ್ಲೆಯ ಶಿಕ್ಷಕ ಮಿತ್ರ ನಾಗೇಂದ್ರ ಬಜಂಗರೆಯವರ ಸವಿಜೇನು ಅಂಕಣ ಅಪ್ಪಟ ಹಳ್ಳಿಯ ಬದುಕಿನ ಜೇನಿನ ಜೊತೆಗಿನ ಒಡನಾಟದ ಅನುಭವದ ಸವಿಯನ್ನು ಸೊಗಸಾಗಿ ಹಂಚುತ್ತಿದ್ದಾರೆ. ಕಳೆದ ವಾರ 4ನೇ ಸಂಚಿಕೆಯಲ್ಲಿ ಪ್ರಕಟವಾದ ಕಾಡುಹಂದಿಯ ಕಣ್ಣು ನನ್ನ ಮೇಲೆ..!! - ಲೇಖನ ಬಹಳ ಸವಾಲಿನ ವಿಪತ್ತಿನ ಸಂದರ್ಭದಲ್ಲಿ ಕೂಡ ಜೇನು ತೆಗೆಯುವ ಸಂಭ್ರಮದ ಅನುಭವವನ್ನು ನೀಡಿದೆ. ಲೇಖನ ಓದಲು ಕೂಡ ವಿಶೇಷ ಅನುಭವವನ್ನು ನೀಡುತ್ತಿದ್ದು ಜೇನುಪ್ರಿಯರಿಗೆ ವಿಶೇಷ ಆಕರ್ಷಣೆಯ ಸಂಚಿಕೆಯಾಗುತ್ತಿದೆ.
ಉದಯೋನ್ಮುಖ ಬಾಲ ಪ್ರತಿಭೆ 10ನೇ ತರಗತಿಯ ಶರ್ಮಿಳಾ ಕೆ ಎಸ್ ಏಪ್ರಿಲ್ 26ರಂದು ಮೊದಲನೇ ಹಂತದ ಚುನಾವಣೆಯಂದು ಬರೆದಿರುವ ಕವನವು..... ಮತದಾನ ಮಾಡುವ ಪ್ರತಿಯೊಬ್ಬರಿಗೂ ಜಾಗೃತಿಯನ್ನು ಮೂಡಿಸುವ ತೆರನಾದಿ ಮೂಡಿಬಂದಿದೆ...
ಊಟ ಮರೆತರೂ
ನಿದ್ದೆ ಮರೆತರೂ
ಮರೆಯದಿರಿ ಏಪ್ರಿಲ್ ಇಪ್ಪತ್ತಾರು
ಭವಿಷ್ಯದ ನಿರ್ಧಾರಕ್ಕೆ ಮೇರು
ಚಲಾಯಿಸಿರಿ ಸರಿಯಾದ ಮತವ ಎಲ್ಲರೂ...
ಇನ್ನೂ ಸಣ್ಣ ಬಾಲಕಿ ತಾನು ಮತದಾನ ಮಾಡದಿದ್ದರೂ... ದೇಶದ ಬಗ್ಗೆ ವಿಶೇಷ ಕಾಳಜಿ ಹೊಂದಿ ಬರೆದಿರುವ ಕವನದ ಸಾಲುಗಳು ಚೆನ್ನಾಗಿತ್ತು... ಅಭಿನಂದನೆಗಳು, ಶರ್ಮಿಳ ಇವರಿಗೆ.
ಪ್ರತಿ ಬಾರಿ ಜಗಲಿ ಕಟ್ಟೆಯಲ್ಲಿ ಬರಹಗಾರರಿಗೆ ಸ್ಫೂರ್ತಿ ಹಾಗೂ ಪ್ರೇರಣೆಯಾಗುತ್ತಿರುವ ಶ್ರೀರಾಮ ಮೂರ್ತಿಯವರ ಅನಿಸಿಕೆ ಇಲ್ಲದ ಜಗಲಿ ಕಟ್ಟೆ ಇಲ್ಲವೇ ಇಲ್ಲ... ಇನ್ನು ಮುಂದೆಯೂ ನಿರಂತರವಾಗಿ ಶ್ರೀರಾಮ ಮೂರ್ತಿಯವರು ಅನಿಸಿಕೆಗಳನ್ನು ಪ್ರಕಟಿಸುತ್ತಾ ಜಗಲಿಯ ಸ್ಪೂರ್ತಿಯ ಬಿಂದುವಾಗಿ ನಮ್ಮ ಜೊತೆ ಸದಾ ಒಡನಾಡಿಯಾಗಿರುತ್ತಾರೆ.... ನಮಸ್ಕಾರ
ಕಳೆದ ಸಂಚಿಕೆಯ ಜಗಲಿಕಟ್ಟೆ - 48 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ನಮಸ್ತೇ,
ನಿರಂತರ ಸಾಧನೆ ಹಾಗೂ ಪರಿಶ್ರಮದಿಂದ ನಾವು ಹೇಗೆ ಉನ್ನತ ಸ್ಥಾನಕ್ಕೇರಬಲ್ಲೆವು ಎಂಬುದನ್ನು ಶ್ರೇಷ್ಠ ಸಂಗೀತಗಾರ ಬಿತೋವೆನ್ ರವರ ಉದಾಹರಣೆಯೊಂದಿಗೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು ಸೊಗಸಾಗಿ ಈ ಸಲದ ಸಂಚಿಕೆಯಲ್ಲಿ ತಿಳಿಸಿದ್ದಾರೆ. ಧನ್ಯವಾದಗಳು ಸರ್.
ಸಂಘಜೀವಿ ಇರುವೆಯ ಕುರಿತಾದ ಸುಂದರ ಲೇಖನ ರಮೇಶ್ ಸರ್ ರವರಿಂದ. ಮಾನವ ಇರುವೆಯಿಂದ ಕಲಿಯಬೇಕಾದುದು ಬಹಳಷ್ಟಿದೆ ಎನ್ನುವುದನ್ನು ಸೊಗಸಾಗಿ ವಿವರಿಸಿದ್ದಾರೆ.
ವೈರಸ್ ಸಜೀವಿ ಹಾಗೂ ನಿರ್ಜೀವಿ ಹೇಗೆ ಎಂಬುದರ ಕುರಿತು ಮಾತ್ರವಲ್ಲದೆ ಪ್ರಿಯಾನ್, ವೈರಾಯ್ಡ್ ಹಾಗೂ ವೈರಸ್ ಗಳ ಕುರಿತಾದ ವಿವರವಾದ ಮಾಹಿತಿ ದಿವಾಕರ ಸರ್ ರವರಿಂದ ಈ ಸಲದ ವೈಜ್ಞಾನಿಕ ಸಂಚಿಕೆಯಲ್ಲಿ.
ಅರವಿಂದರವರ ಹಕ್ಕಿ ಕಥೆ ಹೊಸ ಹಕ್ಕಿಗಳ ಪರಿಚಯದೊಂದಿಗೆ ಚೆನ್ನಾಗಿ ಮೂಡಿ ಬರುತ್ತಿದೆ. ಈ ಸಲ ಹಳದಿ ಟಿಟ್ಟಿಭ ಹಕ್ಕಿಯ ಪರಿಚಯ ಸೊಗಸಾಗಿತ್ತು.
ವಿಜಯಾ ಮೇಡಂರವರ ಈ ಸಲದ ಸಂಚಿಕೆಯಲ್ಲಿ ಶಂಖಪುಷ್ಪದ ವಿವರವಾದ ಮಾಹಿತಿ ದೊರಕಿತು. ಧನ್ಯವಾದಗಳು ಮೇಡಂ.
ದಾರಿ ತಪ್ಪುತ್ತಿರುವ ಮಕ್ಕಳ ಭವಿಷ್ಯದ ಕುರಿತಾಗಿ ಬೆಳಕು ಚೆಲ್ಲುವ ಲೇಖನ ಈ ಸಲ ಯಾಕೂಬ್ ಸರ್ ರವರಿಂದ.
ಮೀನುಗಳ ಕುರಿತಾದ ಆಸಕ್ತಿ ಹೊಂದಿರುವ ಮಗುವಿನ ಕುರಿತಾಗಿರುವ ಮೀನಿನ ಬುಟ್ಟಿ ಎನ್ನುವ ಸುಂದರವಾದ ಪುಸ್ತಕದ ಪರಿಚಯ ವಾಣಿ ಅಕ್ಕನವರಿಂದ.
ರಮೇಶ್ ಸರ್ ರವರ ಪದದಂಗಳ ಸಂಚಿಕೆ ಚೆನ್ನಾಗಿತ್ತು.
ನಾಗೇಂದ್ರರವರ ಈ ಸಲದ ಸಂಚಿಕೆಯಲ್ಲಿ ಜೇನು ಹುಡುಕಾಟದ ಜೊತೆಗೆ ಹಂದಿ ಶಿಕಾರಿಯ ಅನುಭವದ ಲೇಖನ ಸೊಗಸಾಗಿತ್ತು.
ಜಗಲಿಯಲ್ಲಿ ಈ ಸಲದ ಮಕ್ಕಳ ಕವನಗಳಲ್ಲಿ ಶರ್ಮಿಳಾ ರವರ ಕವನಗಳು ಚೆನ್ನಾಗಿವೆ. ಅಭಿನಂದನೆಗಳು ಶರ್ಮಿಳಾ ರವರಿಗೆ.
ಕವನಗಳು ಹಾಗೂ ಲೇಖನಗಳನ್ನು ಕಳುಹಿಸಿದ ಎಲ್ಲಾ ಹಿರಿಯರಿಗೆ ಮತ್ತು ಕಿರಿಯರಿಗೆ ನನ್ನ ಮನದಾಳದ ಕೃತಜ್ಞತೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************