ಹಕ್ಕಿ ಕಥೆ : ಸಂಚಿಕೆ - 145
Wednesday, April 3, 2024
Edit
ಹಕ್ಕಿ ಕಥೆ : ಸಂಚಿಕೆ - 145
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಎಲ್ಲರಿಗೂ ನಮಸ್ಕಾರ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.
ಮೊನ್ನೆ ಶಾಲೆಗೆ ಹೋಗಿ ಬೈಕ್ ನಿಲ್ಲಿಸುವಷ್ಟರಲ್ಲಿ ಯಾರದ್ದೋ ಕರೆ ಬಂತು. ಕರೆ ಬಂದವರ ಜೊತೆ ಮಾತನಾಡುತ್ತಾ ಶಾಲೆಯ ಅಂಗಳದ ಕೊನೆಯಲ್ಲಿ ನಿಂತಿದ್ದೆ. ತಲೆ ಮೇಲೆ ಏನೋ ಬಿದ್ದ ಹಾಗಾಯಿತು. ಅದೇನು ಅಂತ ನೋಡುವಾಗ ಪಕ್ಕದಲ್ಲೇ ಇದ್ದ ಮರದಿಂದ ಹೂವು ನನ್ನ ತಲೆ ಮೇಲೆ ಬಿದ್ದಿತ್ತು. ಮರ ಹೂ ಬಿಟ್ಟಿದೆ ಅಂತ ಗೊತ್ತಾಯ್ತು, ಅಷ್ಟರಲ್ಲಿ ಇನ್ನೊಂದು ಹೂವು ತಲೆ ಮೇಲೆ ಬಿತ್ತು. ಹೂ ಹೇಗೆ ಬೀಳುತ್ತಿದೆ ಅಂತ ಸಂಶಯ ಆಯಿತು. ತಲೆ ಎತ್ತಿ ನೋಡುತ್ತೇನೆ ಮರದ ಮೇಲೆ ಅರಳಿದ ಹೂಗಳಲ್ಲಿ ಹಕ್ಕಿಗಳು ಓಡಾಡುತ್ತಿದ್ದವು.