-->
ಮಕ್ಕಳ ಕವನಗಳು : ಸಂಚಿಕೆ - 09

ಮಕ್ಕಳ ಕವನಗಳು : ಸಂಚಿಕೆ - 09

ಮಕ್ಕಳ ಕವನಗಳು : ಸಂಚಿಕೆ - 09
ಕವನ ರಚನೆ : ರಿಧಾ ಡೋರಳ್ಳಿ
5ನೇ ತರಗತಿ
ಸೇಂಟ್ ಅಂಥೋನಿ 
ಪಬ್ಲಿಕ್ ಶಾಲೆ ಹುಬ್ಬಳ್ಳಿ
ಧಾರವಾಡ ಜಿಲ್ಲೆ
      
 

ಪುಟ್ಟರಾಜ ಅಜ್ಜ ಎನ್ನಲು ಹೆಮ್ಮೆ
ನಿನ್ನ ನೋಡಲಾಗಲಿಲ್ಲೆನಗೆ ಒಮ್ಮೆ
ಆದರೂ ಮನದಲಿ ನಿನ್ನದೇ ನೆನಪು
ನೀನು ಬೆಳಗಿಸಿದೆ ಎಲ್ಲರಲ್ಲಿಯೂ 
ಸಂಗೀತದ ಹುರುಪು
        ನಿನ್ನ ಹಾಡುಗಳ ಕೇಳಿ 
        ನಾನಾದೆನು ಸಂಗೀತದ ಕಲಿ
        ಮನದಲಿ ಆನಂದ ಕೇಳಲು
        ನನಗೆ ಇಷ್ಟ ಕೇಳುತ್ತ ಹಾಡಲು
ನಿನ್ನ ಹಿರಿಮೆ ಮೆರೆದಿದೆ ಜಗದಲಿ
ನಿನ್ನ ಮಹಿಮೆ ಒಲಿದಿದೆ ಕ್ಷಣದಲಿ
ನೀನೇ ನನಗೆ ಸ್ಪೂರ್ತಿ ಹಾಡಲು
ನೀನಾಗಿರುವೆ ಸಂಗೀತ ಲೋಕಕೆ ಸಾಮ್ರಾಟನು
.......................................... ರಿಧಾ ಡೋರಳ್ಳಿ
5ನೇ ತರಗತಿ
ಸೇಂಟ್ ಅಂಥೋನಿ 
ಪಬ್ಲಿಕ್ ಶಾಲೆ ಹುಬ್ಬಳ್ಳಿ
ಧಾರವಾಡ ಜಿಲ್ಲೆ
******************************************** 




ಹೆತ್ತವಳು ಹೊತ್ತವಳು. ‌
ನನ್ನನ್ನು ಅವಳು. . . 
ಸಾಕುವಳು ಬೆಳೆಸುವಳು. 
ನಮ್ಮನ್ನು ಅವಳು
ಆಡಿಸುವಳು ಮುದ್ದಿಸುವಳು 
ನಮ್ಮನ್ನು ಅವಳು 
ಹಾಡುವಳು ನಲಿಸುವಳು.
ನಮ್ಮನ್ನು ಅವಳು. .‌.
ಕಾಡಿಸುವಳು ನಗಿಸುವಳು 
ನಮ್ಮನ್ನು ಅವಳು
ದುಡಿಯುವಳು ಪ್ರೀತಿ ಮಾಡುವಳು 
ನಮ್ಮನ್ನು ಅವಳು. . 
ನಮ್ಮ ನಗು ಕಂಡು ಮರೆಯುವಳು 
ಜಗತ್ತನ್ನೆ ಅವಳು. . .
ತನ್ನ ಜೀವನದಲಿ ಎಷ್ಟೋ ಸಲ 
ತ್ಯಾಗ ಮಾಡಿದವಳು 
ನಮಗಾಗಿ ಅವಳು. . .
ಅವಳೇ ನನ್ನ ಪ್ರೀತಿಯ
ತಾಯಿ. 
ನನ್ನ ಪ್ರೀತಿಯ ಅಮ್ಮ. . .
.......................................... ರಿಧಾ ಡೋರಳ್ಳಿ
5ನೇ ತರಗತಿ
ಸೇಂಟ್ ಅಂಥೋನಿ 
ಪಬ್ಲಿಕ್ ಶಾಲೆ ಹುಬ್ಬಳ್ಳಿ
ಧಾರವಾಡ ಜಿಲ್ಲೆ
********************************************



ತಾಯಿಯ ಪ್ರೀತಿಯಲ್ಲಿ ಭೇಧವಿಲ್ಲ 
ತಾಯಿಗಿಂತ ದೊಡ್ಡ ದೇವರಿಲ್ಲ
ಬಡತನ ಇವಳಿಗೆ ಕಾಣುವುದಿಲ್ಲ
ಮಗುವಿಗೆ ಇವಳಿಲ್ಲದಿದ್ದರೆ ಬದುಕೆ ಇಲ್ಲ

ಕಷ್ಟಪಟ್ಟು ದುಡಿವಳು ಇವಳು
ಮಕ್ಕಳೇ ತನ್ನ ಜಗತ್ತೆಂದು ಬದುಕುವಳು 
"ಅಮ್ಮ" ಎಂದು ಕೂಗಲೂ ಕಂದ
ಇವಳ ತುಟಿಯ ನಗೂ ಎಷ್ಟು ಚಂದ 

ಮಗುವಿನ ನಗುವಲಿ ದುಃಖವ ಮರೆವಳು 
ತನ್ನ ಆಸೆಗಳಿಗೆ ಹಾಕುವಳು ತಣ್ಣೀರು
ಅಮ್ಮನ ಮನಸದು ಕೋಮಲ ಕುಸುಮ 
ಮಕ್ಕಳ ಭವಿಷ್ಯಕ್ಕಾಗಿಯೆ ಇವಳ ಜನುಮ

ಎಷ್ಟು ರುಚಿ ಇವಳ ಕೈತುತ್ತು
ಮಕ್ಕಳಿಗಾನಂದ ಇವಳು ಕೊಟ್ಟರೆ ಮುತ್ತು
ಇವಳ ಕೈ ಹಿಡಿದು ನಡೆದರೆ 
ಜನ್ಮವಾಗುವದು ಪಾವನ
ಇವಳಿದ್ದರಷ್ಟೆ ಮುಂದೆ ಸಾಗುವದು ಮನೆತನ
 
ನಮ್ಮ ಬದುಕಿಗೆ ತಾರೆಯಾಗಿ ಬಂದ ಅಮ್ಮ
ಇವಳನು ನೀ ಮರೀಬೇಡವೋ ತಮ್ಮ
.......................................... ರಿಧಾ ಡೋರಳ್ಳಿ
5ನೇ ತರಗತಿ
ಸೇಂಟ್ ಅಂಥೋನಿ 
ಪಬ್ಲಿಕ್ ಶಾಲೆ ಹುಬ್ಬಳ್ಳಿ
ಧಾರವಾಡ ಜಿಲ್ಲೆ
********************************************




ಇದುವೆ ನಮ್ಮಯ ಕನ್ನಡ ನಾಡು
ಅಂದದ ಚಂದದ ಹೆಮ್ಮೆಯ ಬೀಡು

ಜಾತಿ, ಧರ್ಮವ ಮರೆತು
ಅನೀತಿ ಅನ್ಯಾಯವಾ ತೊರೆದು
ಕೂಡಿ ಬಾಳುವೆವು ಖುಷಿಯಲಿ 
ಒಂದೆನಾಡೆಂಬ ಹೆಮ್ಮೆಯ ಜೊತೆಯಲಿ

ನಾನೇ ಕನ್ನಡದ ಕೂಸು
ನನ್ನದು ಕನ್ನಡಾಭಿಮಾನದ ಮನಸು
ಈಡೇರಿತು ಕನ್ನಡ ತಾಯಿಯ ಕನಸು
ಎಲ್ಲರೂ ಅಭಿಮಾನದಿ ನುಡಿದರೆ,  
ಅವಳ ಕನಸಾಗುವದು ನನಸು

ಹಳದಿ ಕೆಂಪು ಈ ಧ್ವಜದ ಬಣ್ಣ 
ಇದು ಸೆಳೆಯುತ್ತದೆ ಎಲ್ಲರ ಕಣ್ಣ
ಇಲ್ಲಿರುವುದು ಬಂಗಾರದ ಮಣ್ಣ 
ಈ ಕನ್ನಡ ನಾಡನ್ನು ನೋಡುವದೆ ಚೆನ್ನ

ಈ ನಾಡೇ ನಮಗೆ ಬಂಗಾರ
ನಾ ಮಾಡುವೆ ಇದಕ್ಕೆ ಕನ್ನಡದ ಸಿಂಗಾರ
ಒಳ್ಳೆಯ ಗುಣದಿ ನಾ ಮಾಡುವೆ ನಮಸ್ಕಾರ
ನಾವು ಹಾಕುವೆವು ಇದಕ್ಕೆ ಒಗ್ಗಟ್ಟಿನ ಹಾರ

ನೋಡ ಬನ್ನಿ ನಮ್ಮ ಸೌಂದರ್ಯದ ಬೀಡು
ಇದುವೆ ನಮ್ಮೆಲ್ಲರ ನೆಚ್ಚಿನ ಕರುನಾಡು
.......................................... ರಿಧಾ ಡೋರಳ್ಳಿ
5ನೇ ತರಗತಿ
ಸೇಂಟ್ ಅಂಥೋನಿ 
ಪಬ್ಲಿಕ್ ಶಾಲೆ ಹುಬ್ಬಳ್ಳಿ
ಧಾರವಾಡ ಜಿಲ್ಲೆ
********************************************



 ಕನ್ನಡ ಕನ್ನಡ ಕನ್ನಡ ಕನ್ನಡ 
 ಕನ್ನಡ ನಾಡು ಹೆಮ್ಮೆಯ ಬೀಡು
 ಮಾತೆಗೆ ನಮಿಸುತ ಗೀತೆಯ ಹಾಡು 

 ಜಾತಿಯನ್ನದೆ ಧರ್ಮ ಎನ್ನದೆ 
 ಒಗ್ಗಟ್ಟಿನಿಂದ ನಾವು ಕೂಡುವೆವು 
 ಹಗಲು ಎನ್ನದೆ ಇರುಳು ಎನ್ನದೆ
 ನಾಡಿನೊಲವೇ ಪ್ರೀತಿ ಬೀರೇವು 

 ಹಳದಿ ಭಂಡಾರ ಕೆಂಪು ಕುಂಕುಮ
 ಈ ಧ್ವಜದ ಸಂಕೇತ 
 ಹೆಮ್ಮೆಯಿಂದ ಹಾರೈಸುವೆ ಇದನ್ನು 
 ಗೌರವದಿ ಹಾರಿಸು ಕನ್ನಡದ ಓ ಕಂದ 

 ವೀರರಾಯಣ್ಣ ಕಿತ್ತೂರು ಚೆನ್ನಮ್ಮ 
 ಜನಿಸಿದ ನಾಡು ನಮ್ಮದು 
 ಮದಕರಿ ನಾಯಕ ಒನಕೆ ಓಬವ್ವ 
 ಕೊಂಡಾಡಿದ ಬೀಡು ನಮ್ಮದು 

 ರಾಣಿ ಅಬ್ಬಕ್ಕ ವೀರಬಲ್ಲಾಳ 
 ಆಳಿದ ಕನ್ನಡ ನಾಡು ನಮ್ಮದು 
 ಶ್ರೀ ಕೃಷ್ಣದೇವರಾಯ ಇಮ್ಮಡಿ ಪುಲಕೇಶಿ 
 ಬೆಳೆಸಿದ ನಾಡು ನಮ್ಮದು 

 ಕನ್ನಡ ನಾಡು ಹೆಮ್ಮೆಯ ಬೀಡು 
 ಅಂದದ ಚಂದದ ಕರುನಾಡು 
.......................................... ರಿಧಾ ಡೋರಳ್ಳಿ
5ನೇ ತರಗತಿ
ಸೇಂಟ್ ಅಂಥೋನಿ 
ಪಬ್ಲಿಕ್ ಶಾಲೆ ಹುಬ್ಬಳ್ಳಿ
ಧಾರವಾಡ ಜಿಲ್ಲೆ
********************************************



                 
    ಕನ್ನಡ ಕನ್ನಡ ಎಂದು ಬಾಳುವ
    ಕನ್ನಡಿಗರ ಮನಸು ಧನ್ಯವಾಯಿತು ಇಂದು
   ಕನ್ನಡ ತಾಯಿಯ ಪೂಜೆಯಿಂದ 
   ನಮ್ಮ ಮನ ಭಕ್ತಿಯಿಂದ ತುಂಬಿತು ಇಂದು

    ಎಷ್ಟು ಚಂದ ಈ ಕನ್ನಡ ನೆಲ
   ಅದೆಷ್ಟೋ ಅಂದ ಈ ಕನ್ನಡ ಜಲ
   ಕನ್ನಡ ಸಂಸ್ಕೃತಿಯ ಬೆಳೆಸೋಣ
   ಕನ್ನಡದ ಮಹಿಮೆಯ ನೆನೆಯೋಣ 
   
   ಕಾಯಕವೇ ಕೈಲಾಸ ಎಂಬ ಮಾತು ಸತ್ಯ 
   ಕನ್ನಡವೇ ನಿತ್ಯ ಎಂಬ ಶಬ್ದವು ಅದೇ ಸತ್ಯ 
   ಕನ್ನಡಾಂಬೆ ನಿನ್ನ ಪಾದಕ್ಕೆ ಶರಣು  
   ಕನ್ನಡ ತಾಯಿ ನಿನ್ನ ಶಕ್ತಿಗೆ ಶರಣು
  
   ಕನ್ನಡ ಸಂಪಿಗೆಯ ಸುವಾಸನೆ ಇಲ್ಲಿ
   ಮಲ್ಲಿಗೆಯ ಪರಿಮಳ ಎಲ್ಲಿ 
   ಬಂದು ಬೇಡುವೆನೊಂದು 
   ವರ ಕೊಡು ಓ ತಾಯಿ 
   ನನ್ನ ಭಕ್ತಿಯ ಮೆಚ್ಚುತ 
   ಶಕ್ತಿಯ ಕೊಡು ಓ ತಾಯಿ
   
   ಜೈ ಕರ್ನಾಟಕ ಎಂದು ಗೌರವಿಸುವೆ 
   ಜೈ ಕನ್ನಡಾಂಬೆ ಎಂದು ಪೂಜಿಸುವೆ
.......................................... ರಿಧಾ ಡೋರಳ್ಳಿ
5ನೇ ತರಗತಿ
ಸೇಂಟ್ ಅಂಥೋನಿ 
ಪಬ್ಲಿಕ್ ಶಾಲೆ ಹುಬ್ಬಳ್ಳಿ
ಧಾರವಾಡ ಜಿಲ್ಲೆ
********************************************

 ಜಗವ ಕಾಪಾಡುವ ಜಗದೀಶ್ವರ
 ಜನರ ಆದಿ ಪರಮೇಶ್ವರ
 ದಾನದ ಮಹಿಮ ಧನ್ಯ-ದಾನೇಶ್ವರ
 ಪ್ರಾಣದಾಯಕ ಮಹಾ-ಮಹೇಶ್ವರ
       ತೃಪ್ತಿಯ ನೀಡು ಓ ಶಿವನೇ
       ಶಕ್ತಿಯ ನೀಡು ಓ ದೇವನೇ
       ಭಕ್ತಿಯ ಪಾಲಿಸು ಓ ಹರನೇ
       ನನ್ನ ಗಾಯನ ಆಲಿಸು ಓ ದೈವನೇ
ಬೆಂಕಿಯ ಜ್ವಾಲಾಮುಖಿ ನೀನು
ಮನಸ್ಸಿಂದ ಅದೆಷ್ಟು ಒಳ್ಳೆಯವನು ನೀನು
ಭಕ್ತರ ಗುರುವೇ ನೀನು
ಭಕ್ತರಿಗೆ ಮಗುವೇ ನೀನು
.......................................... ರಿಧಾ ಡೋರಳ್ಳಿ
5ನೇ ತರಗತಿ
ಸೇಂಟ್ ಅಂಥೋನಿ 
ಪಬ್ಲಿಕ್ ಶಾಲೆ ಹುಬ್ಬಳ್ಳಿ
ಧಾರವಾಡ ಜಿಲ್ಲೆ
********************************************